
ಸೊರಬ :- ಶಿವಮೊಗ್ಗ ಜಿಲ್ಲೆ ಸೊರಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಮಿಕನ ಕೊಲೆ ಪ್ರಕರಣದ ಆರೋಪಿಗಳನ್ನೂ ಪತ್ತೆ ಹಚ್ಚುವಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್ ಐಪಿಎಸ್ ಹಾಗೂ ಶಿಕಾರಿಪುರ DYSP ಮಾರ್ಗದರ್ಶನದಲ್ಲಿ ಸೊರಬ ಸಿಪಿಐ ರಾಜಶೇಖರ್ ನೇತೃತ್ವದಲ್ಲಿ ಪಿಎಸ್ಐ ನಾಗರಾಜ್, ಮತ್ತು ಪಿಎಸ್ಐ ಮಾಳಪ್ಪ ಸಿಬ್ಬಂದಿಗಳಾದ ನಾಗೇಶ್ ದಪೆದಾರ್ ರಾಘವೇಂದ್ರ, ವಿನಯ, ಲೋಕೇಶ್, ಇವರುಗಳ ತಂಡ ಸದರಿ ಆರೋಪಿಗಳಾದ A1 ಜಯನ್ ಸಿ, ತಂದೆ ಚಂದನ್ ತಿರುವಂತಪುರಂ A 2 ಶಿಬು ತಂದೆ ಗೋಪಾಲನ್ ಕಣ್ಣೂರು, A3 ಸುಮನ್ ಕುಮಾರ್ ತಂದೆ ಜ್ಞಾನಮುತ್ತು ತಿರುವಂತ ಪುರಂ ಕೊಲೆ ಆರೋಪಿಗಳನ್ನೂ ಹೊಸನಗರ ಬಳಿಯ ಜಯನಗರ ಬಳಿ ಬಂಧಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಕೊಲೆ ನೆಡೆದ ಕೇವಲ 24 ಘಂಟೆಯಲ್ಲಿ ಕೊಲೆ ಆರೋಪಿಗಳನ್ನೂ ಹೆಡೆಮುರಿ ಕಟ್ಟಲು ಯಶಸ್ವಿ ಕಾರ್ಯಾರಣೆಯಲ್ಲಿ ಭಾಗಿಯಾದ ಸೊರಬ ಪೊಲೀಸ್ ತಂಡದ ಕಾರ್ಯಾಚರಣೆಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್ ಹಾಗೂ ಶಿಕಾರಿಪುರ DYSP ಶಿವಾನಂದ ಮದರಕಂಡಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಓಂಕಾರ ಎಸ್. ವಿ. ತಾಳಗುಪ್ಪ.