
ಶಿವಮೊಗ್ಗ: ನಗರದಲ್ಲಿ ಇತ್ತೀಚಿಗೆ ಬೈಕ್ ವೀಲಿಂಗ್ ಸವಾರರ ಹಾವಳಿ ಮಿತಿಮೀರಿದ್ದು ಟ್ರಾಫಿಕ್ ಪೊಲೀಸ್ ನವರು ಇದಕ್ಕೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ತಮ್ಮ ಜೀವಕ್ಕೆ ಅಪಾಯ ಮಾಡಿಕೊಳ್ಳುವುದರ ಜೊತೆಗೆ ಬೇರೆಯವರಿಗೂ ತೊಂದರೆ ನೀಡುತ್ತಿರುವವರ ಇಂಥವರ ವಿರುದ್ಧ ಶಿವಮೊಗ್ಗ ಜಿಲ್ಲಾ ಟ್ರಾಫಿಕ್ ಪೊಲೀಸ್ ನವರು ಸಿಡಿದೆದ್ದಿದ್ದು ಎಲ್ಲೆಡೆ ಪ್ರಕರಣಗಳನ್ನು ದಾಖಲು ಮಾಡುತ್ತಿದ್ದಾರೆ. ಆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಘನ ನ್ಯಾಯಾಲಯ ಕೂಡ ಇಂತಾ ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಂಡಿದ್ದು ನಿರಂತರವಾಗಿ ದಂಡ ವಿಧಿಸುತ್ತಿದ್ದಾರೆ. ಅಂತದ್ದೇ ಒಂದು ಪ್ರಕರಣದಲ್ಲಿ ದಿನಾಂಕ15/08/2023 ರಂದು ಬೆಳಿಗ್ಗೆ ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ವಿನೋಬನಗರ ಡಿ.ವಿ.ಎಸ್. ಶಾಲೆ ಮುಂಭಾಗದ 100 ಅಡಿ ರಸ್ತೆಯಲ್ಲಿ ಫೈಸಲ್ ಅಹ್ಮದ್ ಮತ್ತು ಸೂಫಿಯಾನ್ ಖಾನ್ ಎಂಬ ಯುವಕರಿಬ್ಬರು ಎರಡು YAMAHA RX ಬೈಕಿಗ
ಳಲ್ಲಿ ಅತಿ ವೇಗ, ಅಜಾಗರುಕತೆ ಮತ್ತು ಅಪಾಯಕಾರಿ ರೀತಿಯಲ್ಲಿ ಸಾರ್ವಜನಿಕರ ಮತ್ತು ತನ್ನ ಪ್ರಾಣಕ್ಕೆ ಹಾನಿಯಾಗುವಂತೆ ವ್ಹೀಲಿಂಗ್ ಮಾಡುತ್ತಿದ್ದು,ಈ ಬಗ್ಗೆ ಗುನ್ನೆ ಸಂಖ್ಯೆ 0107/2023 ಕಲಂ 279 ಐಪಿಸಿ, 184, 189, 177 ಐಎಂವಿ ಕಾಯ್ದೆ ಮತ್ತು 51 ಸಿಎಂವಿ ರೂಲ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತ
ಾರೆ
ಶಿವಮೊಗ್ಗ ಪಶ್ಚಿಮ ಸಂಚಾರಿ ಠಾಣೆಯ ಪಿಎಸ್ಐ ಆದ ತಿರುಮಲೇಶ್ ಅವರು ಈ ಪ್ರಕರಣದ ತನಿಖಾಧಿಕಾರಿಗಳಾಗಿದ್ದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೈಕ್ ಗಳ ಚಾಲಕರು & ಮಾಲೀಕ ಸೇರಿ 3 ಜನ ಆರೋಪಿತರ ವಿರುದ್ದ ಘನ ನ್ಯಾಯಾಲಯಕ್ಕೆ ದೋಷರೋಪಣ ಪತ್ರವನ್ನು ಸಲ್ಲಿಸಿದರು. ಘನ ನ್ಯಾಯಾಲಯದಲ್ಲಿ ಕಿರಣ್ ಕುಮಾರ್ ಸಹಾಯಕ ಸರ್ಕಾರಿ ಅಭಿಯೋಜಕರು ಪ್ರಕರಣ
ದ ವಾದ ಮಂಡಿಸಿದ್ದು, ಘನ 3ನೇ ಎಸಿಜೆ & ಜೆಎಂಎಫ್ ಸಿ, ಶಿವಮೊಗ್ಗ, ನ್ಯಾಯಾಲಯದಲ್ಲಿಪ್ರಕರಣದ ವಿಚಾರಣೆ ನಡೆದಿದ್ದು, ಪ್ರಕರಣದ ಆರೋಪಿತರ ವಿರುದ್ಧ ಆರೋಪ ದೃಢ ಪಟ್ಟ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಧೀಶರಾದ ಮಾಯಪ್ಪ ರವರು ದಿನಾಂಕ:-06/12/2023ರಂದು ಆರೋಪಿ 1) ಫೈಸಲ್ ಅಹ್ಮದ್, 20 ವರ್ಷ, ಇಲಿಯಾಸ್ ನಗರ ಶಿವಮೊಗ್ಗ ಟೌನ್ ಈತನಿಗೆ 11,000 ರೂ, ದಂಡ, 2) ಸೂಫಿಯಾನ್ ಖಾನ್, 21 ವರ್ಷ ಟ್ಯಾಂಕ್ ಮೊಹಲ್ಲಾ , ಶಿವಮೊಗ್ಗ ಟೌನ್ ಈತನಿಗೆ 8000 ರೂ ದಂಡ ಮತ್ತು ಬೈಕಿನ ಆರ್ ಸಿ ಮಾಲೀಕನಾದ 3) ಮೊಹಮ್ಮದ್ ಸೈಫುಲ್ಲಾ, 50 ವರ್ಷ, ಇಲಿಯಾಸ್ ನಗರ ಶಿವಮೊಗ್ಗ ಟೌನ್ ಈತನಿಗೆ 4500 ರೂ
ದಂಡ ವಿಧಿಸಿ
ಆದೇಶ ನೀಡಿರುತ್ತಾರೆ.
ಇನ್ನು ಮುಂದಾದರೂ ವೀಲಿಂಗ್ ಮಾಡುವ ಬೈಕ್ ಸವಾರರು ಎಚ್ಚೆತ್ತುಕೊಂಡು ತಮಗೂ ಸಾಮಾಜಿಕ ಜವಾಬ್ದಾರಿ ಇದೆ ಎಂದು ಅರಿತುಕೊಂಡು ಇದ್ದರೆ ಒಳಿತು.
ರಘುರಾಜ್ ಹೆಚ್. ಕೆ.9449553305.