
ಶಿವಮೊಗ್ಗ: ನಿಗಮ ಮಂಡಳಿಯ ನೇಮಕಾತಿ ಪ್ರಕ್ರಿಯೆ ಚಾಲನೆಯಲ್ಲಿದ್ದು ಈಗಾಗಲೇ ಶಾಸಕರಿಗೆ ಬಹುತೇಕ ನಿಗಮ ಮಂಡಳಿಗಳ ಆಯ್ಕೆ ಪ್ರಕ್ರಿಯೆ ಮುಕ್ತಾಯವಾಗಿದ್ದು ಕಾರ್ಯಕರ್ತರಿಗೆ ನಿಗಮ ಮಂಡಳಿ ಹಂಚಿಕೆಯಲ್ಲಿ ಕೊಂಚ ವಿಳಂಬವಾಗಿದೆ.
ಆದರೆ ಒಂದಷ್ಟು ಮಾಹಿತಿಯ ಪ್ರಕಾರ ಶಿವಮೊಗ್ಗದ ನಿಗಮ ಮಂಡಳಿ ಆಯ್ಕೆಯಲ್ಲಿ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಈಗಾಗಲೇ ಡಿಸಿಸಿ ಬ್ಯಾಂಕ್ ನ ಅಧ್ಯಕ್ಷರು ಆಗಿರುವ ಡಾ/ ಆರ್ ಎಂ ಮಂಜುನಾಥ್ ಗೌಡ ಆಯ್ಕೆ ಆಗುವುದು ಬಹುತೇಕ ಖಚಿತವಾಗಿದ್ದು ಇನ್ನೂ ಸೂಡ ಅಧ್ಯಕ್ಷರಾಗಿ ಶಿವಮೊಗ್ಗ ಜಿಲ್ಲೆಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಕಳೆದ 37 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ಕಾರ್ಯಕರ್ತರಾಗಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿರುವ ಸುಂದರೇಶ್ ಆಯ್ಕೆ ಬಹುತೇಕ ಖಚಿತವಾಗಿದೆ.ಹಾಗೂ ಕಾಡ ಅಧ್ಯಕ್ಷರಾಗಿ ಕಳೆದ ಬಾರಿ ಗ್ರಾಮಾಂತರ ಭಾಗದಲ್ಲಿ ಚುನಾವಣೆಗೆ ನಿಲ್ಲಬೇಕೆಂದು ಅಪೇಕ್ಷೆ ಪಟ್ಟು ಆ ಭಾಗದಲ್ಲಿ ಅತಿ ಹೆಚ್ಚಿನ ಕೆಲಸವನ್ನು ಮಾಡಿ ಪಕ್ಷದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ಪಲ್ಲವಿ ಅವರ ಆಯ್ಕೆ ಖಚಿತ ಎನ್ನಲಾಗುತ್ತಿದೆ ಇದೆ ಸ್ಥಾನಗಳು ಪ್ರಕಟವಾಗುತ್ತಾ ಅಥವಾ ಕೊಂಚ ಬದಲಾವಣೆ ಆಗುತ್ತಾ ಕಾದು ನೋಡಬೇಕು ಅಷ್ಟೇ…