
ದಕ್ಷ ಪ್ರಾಮಾಣಿಕ ಖಡಕ್ ಅಧಿಕಾರಿಯಂದೆ ಗುರುತಿಸಿಕೊಂಡಿದ್ದ ಬಿ ಬಾಲರಾಜ್ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಡಿವೈಎಸ್ಪಿ ಆಗಿ ವರ್ಗಾವಣೆಯಾಗಿ ಬಂದಿದ್ದರು ಇವರು ವರ್ಗಾವಣೆಯಾಗಿ ಬರುವ ಸಮಯದಲ್ಲಿ ಇವರ ವರ್ಗಾವಣೆಗೆ ಸಾಕಷ್ಟು ಅಡೆತಡೆಗಳು ಎದುರಾಗಿದ್ದವು.
ಹಿಂದೆ ಪ್ರಶಾಂತ್ ಮುನ್ನೂಳ್ಳಿ ಡಿ ವೈ ಎಸ್ ಪಿ ಆಗಿ ಕಾರ್ಯನಿರ್ವಹಿಸುತ್ತಿರುವ ಸ್ಥಳಕ್ಕೆ ಇವರ ವರ್ಗಾವಣೆಯಾಗಿತ್ತು ಆದರೆ ಪ್ರಭಾವಿ ಮುಖಂಡರು ಈ ವರ್ಗಾವಣೆಯನ್ನು ತಡೆಹಿಡಿದಿದ್ದರು ಪಟ್ಟು ಬಿಡದ ಅಂದಿನ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಬಾಲರಾಜ್ ವರ್ಗಾವಣೆಯನ್ನು ಮಾಡಿಸಿದರು ಬಾಲರಾಜ್ ವರ್ಗಾವಣೆಯಾಗಿ ಶಿವಮೊಗ್ಗಕ್ಕೆ ಬಂದ ನಂತರ ಶಿವಮೊಗ್ಗದ ಪರಿಸ್ಥಿತಿ ಒಂದು ಹಂತಕ್ಕೆ ಹತೋಟಿಗೆ ಬಂತು ಏಕೆಂದರೆ ಎಸ್ ಪಿ ಮಿಥುನ್ ಕುಮಾರ್ ಅಡಿಷನಲ್ ಎಸ್ಪಿ ಬೂಮ್ ರೆಡ್ಡಿ ಹಾಗೂ ಬಾಲರಾಜ್ ಈ ಮೂರು ಜನರ ಕಾಂಬಿನೇಷನ್ ವರ್ಕ್ ಮಾಡಿದ್ದು ಶಿವಮೊಗ್ಗದ ಕೋಮುಗಲಭೆಗಳು ಗಾಂಜಾ ಇನ್ನಿತರ ಪ್ರಕರಣಗಳು ಕೊಂಚ ಹತೋಟಿಗೆ ಬಂದವು ಹೇಳಿಕೇಳಿ ಬಾಲರಾಜ್ ಖಡಕ್ ಆಫೀಸರ್ ಅವರ ಸರ್ವಿಸ್ ನಲ್ಲಿ ಹಿಂದೆ ರೌಡಿಗಳು ಅಕ್ರಮ ದಂಧೆ ನಡೆಸುವವರು ಗಡಗಡ ನಡುಗುತ್ತಿದ್ದರು ಕೆಲವರು ಊರೇ ಬಿಟ್ಟಿದ್ದರು ಅಂತ ಅಧಿಕಾರಿ ಶಿವಮೊಗ್ಗಕ್ಕೆ ಬಂದಾಗ ಎಲ್ಲರಲ್ಲೂ ನಿರೀಕ್ಷೆ ಹೆಚ್ಚಾಗಿದ್ದವು ಆದರೆ ಆ ನಿರೀಕ್ಷೆಯನ್ನು ಅವರು ಹುಸಿಗೊಳಿಸಲಿಲ್ಲ ಎಲ್ಲರೊಂದಿಗೂ ಬೆರೆತು ತಮ್ಮ ಅಧಿಕಾರ ಅವಧಿಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದರು. ನಂತರ ಇವರ ಕಾರ್ಯಕ್ಷಮತೆಯನ್ನು ಮೆಚ್ಚಿ ರಾಜ್ಯದ ಬಹುದೂಡ್ಡ ಹಗರಣಗಳಲ್ಲಿ ಒಂದಾದ ಬಿಟ್ ಕಾಯಿನ್ ಹಗರಣದ ತನಿಖೆಗೆ ವಿಶೇಷ ಅಧಿಕಾರಿಯನ್ನಾಗಿ ನೇಮಿಸಿ ಇವರನ್ನು ವರ್ಗಾವಣೆ ಮಾಡಲಾಯಿತು. ಆ ಸ್ಥಾನಕ್ಕೆ ಈಗ ಜೆಜೆ ತಿರುಮಲೇಶ್ ಬಂದಿದ್ದಾರೆ.
ಯಾರು ಈ ಜೆ ಜೆ ತಿರುಮಲೇಶ್..?
ಹಿಂದೆ ಭದ್ರಾವತಿಯಲ್ಲಿ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸಿದ ಜೆಜೆ ತಿರುಮಲೇಶ್ ಕಂಡರೆ ಭದ್ರಾವತಿಯ ಮಾಫಿಯಾ ಗಡಗಡ ನಡುಗುತ್ತಿತ್ತು ತಿರುಮಲೇಶ್ ಬಂದರೆಂದರೆ ಅಕ್ರಮ ದಂಧೆಯಲ್ಲಿ ತೊಡಗಿಕೊಂಡವರು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದವರು ಗಡ ಗಡ ನಡುಗುತ್ತಿದ್ದರು.
ಆದರೆ ಜೆಜೆ ತಿರುಮಲೇಶ್ ಬಗ್ಗೆನೇ ಆರೋಪಗಳು ಬಂದು ಇಲಾಖೆ ವಿಚಾರಣೆ ನಡೆದು ಸಸ್ಪೆಂಡ್ ಆಗಿ ದ್ದರು ಏನು ಆ ಪ್ರಕರಣ ಆ ಪ್ರಕರಣದ ಬಗ್ಗೆ ಇನ್ನೊಂದು ಬಾರಿ ವಿವರವಾಗಿ ಬರೆಯೋಣ. ಆದರೆ ನಂತರ ಮತ್ತೆ ಅವರು ಐಜಿ ಆಫೀಸ್ ದಾವಣಗೆರೆ ಗೆ ವರ್ಗಾವಣೆಯಾಗಿದ್ದರು. ಆನಂತರ ಚಿಕ್ಕಮಂಗಳೂರಿಗೆ ಲೋಕಾಯುಕ್ತ ಡಿವೈಎಸ್ಪಿ ಯಾಗಿ ಹೋದರು.
ಈಗ ಶಿವಮೊಗ್ಗಕ್ಕೆ ಎ ಡಿವಿಷನ್ ಗೆ ಬಂದಿದ್ದಾರೆ ಇಲ್ಲಿ ಮತ್ತೆ ಭದ್ರಾವತಿಯ ಅಂತೆಯೇ ತಮ್ಮ ಕಾರ್ಯ ಚಟುವಟಿಕೆ ಮುಂದುವರಿಸುತ್ತಾರಾ ಕಾದು ನೋಡಬೇಕು..