
ರಾಷ್ಟ್ರೀಯ ಮಟ್ಟದ ಶೈಕ್ಷಣಿಕ ಸಮಾವೇಶಕ್ಕೆ ಆಯ್ಕೆಯಾದ
ತೀರ್ಥಹಳ್ಳಿ ತಾಲೂಕಿನ ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿಯ ಮುಖ್ಯ ಶಿಕ್ಷಕ
ಮಂಜು ಬಾಬು ಹೆಚ್ ಪಿ
ಕೇಂದ್ರ ಸರ್ಕಾರದ NCERT ಯ NCSL & NIEPA ಜಂಟಿಯಾಗಿ,ಇದೇ ಜನವರಿ 29.30.31 ರಂದು ನವದೆಹಲಿಯ ವಿಶ್ವ ಯುವ ಕೇಂದ್ರದಲ್ಲಿ ನಡೆಯುತ್ತಿರುವ
ರಾಷ್ಟ್ರೀಯ ಮಟ್ಟದ ಶೈಕ್ಷಣಿಕ ಸಮಾವೇಶದಲ್ಲಿ,
ಕರ್ನಾಟಕದಿಂದ ಏಕೈಕ ಆಯ್ಕೆಯಾಗಿ ಭಾಗವಹಿಸಿರುವ,
ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿ ಹಾಗೂ ಶಾಲೆಯ ಸಮಗ್ರ ಅಭಿವೃದ್ಧಿಯ ವರದಿಯನ್ನು ಮಂಡಿಸಲಿರುವ
ಎಲೆ ಮರೆಕಾಯಿಯಂತೆ ತನ್ನ ಅದ್ಬುತ ಶಿಕ್ಷಕರ ಬಳಗದ ಜೊತೆಗೆ ದುಡಿಯುತ್ತಿರುವ,
2022 ರ ಪ್ರಜಾವಾಣಿ ಸಾಧಕ ಪ್ರಶಸ್ತಿ ಪುರಸ್ಕೃತರು ಹಾಗೂ ಮುಖ್ಯ ಶಿಕ್ಷಕರಾದ ಮಂಜುಬಾಬು ಹೆಚ್ ಪಿ ಅವರಿಗೆ, ತೀರ್ಥಹಳ್ಳಿ ತಾಲೂಕಿನ,ಶಿವಮೊಗ್ಗ ಜಿಲ್ಲೆಯನ್ನು ಹೆಸರನ್ನು ಮತ್ತೊಮ್ಮೆ ಎತ್ತಿ ಹಿಡಿದ ಮಂಜು ಬಾಬು ಹೆಚ್ ಪಿ ಹಾಗೂ ಇಡೀ ಶಾಲಾ ಬಳಗಕ್ಕೆ ಅಭಿನಂದನೆಗಳನ್ನು ನಮ್ಮ ಪ್ರತಿಕೆಯ ಮೂಲಕ ತಿಳಿಸುತ್ತಿದ್ದೇವೆ..