
ಶಿವಮೊಗ್ಗ ಜ 28 ಸಾಹಿತ್ಯ ಮನುಷ್ಯ ಸಂಬಂಧಗಳನ್ನು ಬೆಳೆಸುತ್ತದೆ ಎಂದು ಜಿ.ಪಂ.ಸದಸ್ಯ ಕಲಗೋಡು ರತ್ನಾಕರ ಹೇಳಿದರು ಅವರು ಇಂದು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಮತ್ತು ಫ್ರೆಂಡ್ಸ್ ಸೆಂಟರ್ ಸಹಯೋಗದೊಂದಿಗೆ ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮ
ಉದ್ಘಾಟನೆ ಮಾಡಿ ಮಾತನಾಡುತ್ತಿದ್ದರು .ಯುವಜನ ಮೇಳ ಪಾರ್ಕುಗಳ ಸಂಘ ಸಂಸ್ಥೆಗಳು ಕೆಲಸಗಾರರು ಹಾದಿಹೋಕರು ಇವರ ಜೊತೆ ಮಾತಾಡಿ ಜ್ಞಾನ ಸಂಪಾದಿಸಲು ಸಾದ್ಯ. .ದಿವಂಗತ ಬಂಗಾರಪ್ಪ ನವರು ಯುವಜನ ಮೇಳಕ್ಕೆ ಮುಖ್ಯಮಂತ್ರಿ ಯಾಗಿದ್ದಾಗ ಬಂದಿದ್ದರು ಮತ್ತು ಡೊಳ್ಳು ಬಾರಿಸಿ ಕಲಾವಿದರಿಗೆ ಪ್ರೋತ್ಸಾಹ ನೀಡಿದ್ದರು ಎಂದು ಹೊಸನಗರದ ಯುವಜನ ಮೇಳ ನೆನಪಿಸಿಕೊಂಡರು.
ಮುಖ್ಯ ಉಪನ್ಯಾಸ ಮಾಡಿದ ನಾಡಿನ ಪ್ರಮುಖ ಹಾಸ್ಯ ಕಲಾವಿದ ಉಮೇಶ್ ಗೌಡ ದ.ರಾ ಬೇಂದ್ರೆಯವರ ಬಗ್ಗೆ ಮಾತನಾಡಿ ಅವರ ಜೀವನದ ನಗು ಅಳು ಬಗ್ಗೆ ಅತ್ಯಂತ ಮಾನವೀಯ ಕಾಳಜಿಯಿಂದ ಮಾತನಾಡಿದರು.ಬೇಂದ್ರೆಮತ್ತು ಮಾಸ್ತಿ, ಬೇಂದ್ರೆ ಮತ್ತು ಬಡತನ, ಬೇಂದ್ರೆ ಮತ್ತು ಸಾವಿನ ಸರಮಾಲೆ ಬೇಂದ್ರೆ ಮತ್ತು ಅಧ್ಯಾತ್ಮ ಇದರ ಬಗ್ಗೆ ಮಾತನಾಡಿ ನಗು ಹಿಂದೆ ಹೊಗಿಬ್ಯಾಡ ಹೋಗಿ ಇಂದ ದಗಿಬ್ಯಾಡ ಎಂಬ ಮಾತನ್ನು ಅರ್ಥ ಗರ್ಭಿತ ವಾಗಿ ಹೇಳಿದರು.ವೇದಿಕೆಯಲ್ಲಿ ಪ್ರೆಂಡ್ಸ್ ಸೆಂಟರ್ ಅಧ್ಯಕ್ಷ ಎಸ್.ಕೆ.ಲೋಕೇಶ್ ಹಾಗೂ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಮಂಜುನಾಥ್ ಉಪಸ್ಥಿತರಿದ್ದರು. ಪದಾಧಿಕಾರಿಗಳು. ಫ್ರೆಂಡ್ಸ್ ಎಂಟರಿನ ಮಾಜಿ ಅಧ್ಯಕ್ಷರುಗಳಾದ. ಜಿ ವಿಜಯಕುಮಾರ್ ಅಶ್ವಥ್ ನಾರಾಯಣ್ ಶೆಟ್ಟಿ. ವಿ ನಾಗರಾಜ್. ಮಹೇಶ್ವರಪ್ಪ. ಧನರಾಜ್ ಮಲ್ಲಿಕಾರ್ಜುನ್ ಕಾನೂರ್ ವೆಂಕಟೇಶ್ ಹಾಜರಿದ್ದರು.
ನಾಗರಿಕರಿಂದ ಕತೆ ಕವನ ಹನಿಗವನ ಹಾಡು ನಗು ಮುಂತಾದ ಹಲವು ಕಾರ್ಯಕ್ರಮಗಳು ನಡೆದವು.