
ಶಿವಮೊಗ್ಗ: ಇಂದು ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮಾಜಿ ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್ ಜಿಲ್ಲೆಯ ಹೆಮ್ಮೆಯ ಕುವೆಂಪು ವಿಶ್ವವಿದ್ಯಾ ನಿಲಯದ ದುರಾಡಳಿತದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹೊರ ಹಾಕಿದರು.
ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಎಲ್ಲವೂ ಸರಿ ಇಲ್ಲ ಎಲ್ಲಾ ಗೊಂದಲಮಯವಾಗಿದೆ ಆಡಳಿತ ಯಂತ್ರ ಸಂಪೂರ್ಣ ಕುಸಿದಿದ್ದು ವಿದ್ಯಾರ್ಥಿಗಳಿಗೆ ಸರಿಯಾಗಿ ಪಾಠ ಪ್ರವಚನಗಳು ನಡೆಯುತ್ತಿಲ್ಲ ಸಮಸ್ಯೆಗಳು ಬಂದಾಗ ಒಬ್ಬರ ಮೇಲೆ ಒಬ್ಬರು ಹಾಕುತ್ತಾರೆ ಭಿನ್ನ ಸಮಸ್ಯೆಗಳಿಗೆ ಪರಿಹಾರಗಳು ಸಿಗುತ್ತಿಲ್ಲ ಅಧ್ಯಾಪಕರುಗಳ ಕೊರತೆ ಇದೆ ಇರುವ ಅಧ್ಯಾಪಕರಗಳು ಸರಿಯಾಗಿ ಪಾಠಗಳನ್ನು ನಡೆಸುತ್ತಿಲ್ಲ ಯಾವ ವಿಷಯಕ್ಕೆ ಯಾರು ಪಾಠ ಮಾಡಬೇಕು ಎನ್ನುವ ಗೊಂದಲ ಇವರಲ್ಲಿ ಇದೆ ಇದು ವಿದ್ಯಾರ್ಥಿಗಳಿಗೆ ಸಾಕಷ್ಟು ಸಮಸ್ಯೆ ಉಂಟಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಆಡಳಿತ ಯಂತ್ರ ಹಿಡಿತದಲ್ಲಿಟ್ಟುಕೊಳ್ಳಬೇಕಾದ ಕುಲ ಸಚಿವರ ನೇಮಕಾತಿಯೇ ಆಗಿಲ್ಲ ಈಗ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸ್ನೇಹಲ್ ಸುಧಾಕರ್ ಲೋಖಂಡೆ ಅವರಿಗೆ ಹೆಚ್ಚಿನ ಹೊಣೆಯನ್ನು ನೀಡಲಾಗಿದೆ ಇದರಿಂದ ಅವರಿಗೆ ಸಾಕಷ್ಟು ತೊಂದರೆಯಾಗಿದ್ದು ಅವರು ಇಲ್ಲೂ ಸರಿಯಾಗಿ ಅಧಿಕಾರವನ್ನು ನಡೆಸಲಾಗದೆ ಗೊಂದಲದಲ್ಲಿ ಇದ್ದಾರೆ ಎಂದರು.
ಈ ಎಲ್ಲಾ ಸಮಸ್ಯೆಗಳನ್ನು ಇಟ್ಟು ಕೊಂಡು ನಾಳೆ ಅಥವಾ ನಾಡಿದ್ದು ಸುಮಾರು ೧೫ ಕಾಲೇಜು ಗಳ ಪ್ರಾಂಶುಪಾಲರ ಜೊತೆಗೂಡಿ ಉನ್ನತ ಶಿಕ್ಷಣ ಸಚಿವರಾದ ಡಾ.ಸುಧಾಕರ್ ಅವರನ್ನು ಭೇಟಿ ಮಾಡಿ, ಸಮಸ್ಯೆ ಗಳನ್ನು ಗಮನಕ್ಕೆ ತರಲಾಗುವುದು ಮತ್ತು ರಾಜ್ಯಪಾಲ ರು ಮಧ್ಯಪ್ರವೇಶ ಮಾಡಿ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಮನವಿ ಮಾಡಲಾಗುವುದು ಎಂದರು.
ಜ.೨೪ಕ್ಕೆ ಸೆಮಿಸ್ಟರ್‌ಗಳು ಮುಕ್ತಾಯವಾಗಬೇಕಿತ್ತು. ೨೫ಕ್ಕೆ ಪರೀಕ್ಷೆಗಳು ಆರಂಭವಾಗಬೇಕಿತ್ತು. ಆದರೆ, ಪರೀಕ್ಷಾ ದಿನಾಂಕಗಳನ್ನು ಕಾರಣಗಳು ಇಲ್ಲದೆ ಮುಂದೂಡ ಲಾಗಿದೆ. ತಮ್ಮ ವೈಫಲ್ಯತೆ ಮುಚ್ಚಿಕೊಳ್ಳಲು ಪರೀಕ್ಷೆಗಳನ್ನು ಮುಂದೂಡಿದರೆ ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ವರ್ಷದ ಗತಿ ಯೇನು?. ವೇಳಪಟ್ಟಿಯನ್ನು ಮುಂದೂಡುತ್ತಾ ಹೋದರೆ ಮೌಲ್ಯ ಮಾಪನ ತರಗತಿಗಳ ಆರಂಭ, ಪ್ರವೇಶ ಪ್ರಕ್ರಿಯೆ ಇವೆ ಲ್ಲವೂ ಗೊಂದಲದ ಗೂಡಾಗಿ ವಿದ್ಯಾರ್ಥಿ ಗಳ ಮೇಲೆ ಪರಿಣಾಮ ಬೀರುತ್ತದೆಂದರು.
ಎನ್‌ಇಪಿ ಅಂಕಪಟ್ಟಿ ಕೊಟ್ಟಿಲ್ಲ, ಆನ್‌ಲೈನ್ ಅಂಕಪಟ್ಟಿಗಳು ದೋಷ ಪೂರಿತವಾಗಿವೆ. ಅಂಕಪಟ್ಟಿಯಲ್ಲಿ ಎನ್‌ಎಸ್‌ಎಸ್ ಕ್ರೀಡೆ ಮತ್ತು ಇತರೆ ವಿಷಯಗಳನ್ನು ನಮೂದಿಸಿರುವು ದಿಲ್ಲ. ಇದರಿಂದ ಎಸ್‌ಎಸ್‌ಪಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸು ವುದು ಕಷ್ಟವಾಗಬಹುದು. ಪ್ರಾಂಶುಪಾಲರುಗಳು ಅಸಹಾಯಕ ರಾಗಿದ್ದಾರೆ. ಪಠ್ಯ ಚಟುವಟಿಕೆಗಳೇ ಕುಂಠಿತಗೊಂಡಿವೆ. ವಿವಿಯಿಂದ ಯಾವುದೇ ಕಾಲೇಜಿನ ಜೊತೆಯ ಸಂವಹನವೇ ಇರುವುದಿಲ್ಲ.
ಹಿರಿಯ ಕಾಂಗ್ರೆಸ್ ಶಾಸಕ ಶಾಮನೂರ್ ಶಿವಶಂಕರಪ್ಪ ಹೇಳಿಕೆ ಕಾಂಗ್ರೆಸ್ ಗೆ ಪರೋಕ್ಷವಾಗಿ ಸಹಾಯವಾಗಿದೆ..! ಸಭೆಯಲ್ಲಿದ್ದ ಕೆಲ ಕಾಂಗ್ರೆಸ್ ಮುಖಂಡರು ಮೌನವಾಗಿರುವುದು ಏಕೆ..?
ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಕಾಂಗ್ರೆಸ್ಸಿನ ಹಿರಿಯ ಶಾಸಕ ಶಾಮನೂರ್ ಶಿವಶಂಕರಪ್ಪ ರವರು ಬಹಿರಂಗವಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ಹಾಲಿ ಸಂಸದ ಬಿ ವೈ ರಾಘವೇಂದ್ರ ಅವರ ಕಾರ್ಯ ಅತ್ಯುತ್ತಮವಾಗಿದೆ ಅವರನ್ನು ಮತ್ತೊಮ್ಮೆ ಗೆಲ್ಲಿಸಿ ಎಂದು ಹೇಳಿಕೆ ನೀಡಿದ್ದು ಸಾಕಷ್ಟು ಗೊಂದಲ ಹಾಗೂ ವಿವಾದಕ್ಕೆ ಕಾರಣವಾಗಿತ್ತು. ಈ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಆಯನೂರು ಉತ್ತರಿಸುತ್ತಾ ಶಾಮನೂರ್ ಶಿವಶಂಕರಪ್ಪನವರು ತುಂಬಾ ಹಿರಿಯರು ಅವರ ಮೇಲೆ ನನಗೆ ಅಪಾರವಾದ ಗೌರವವಿದೆ ನಾನು ಅವರು ಒಂದೇ ಬಾರಿ ವಿಧಾನಸಭೆಗೆ ಪ್ರವೇಶ ಮಾಡಿದೆವು ಆನಂತರ ಲೋಕಸಭೆಗೂ ಕೂಡ ಒಂದೇ ಬಾರಿಗೆ ಪ್ರವೇಶ ಮಾಡಿದ್ದೆವು. ಅವರು ಹಾಲಿ ಸಂಸದ ಬಿ ವೈ ರಾಘವೇಂದ್ರ ಅವರನ್ನು ಗೆಲ್ಲಿಸಿ ಎಂದು ಹೇಳಿರುವುದು ಒಂದು ಅವರು ಬಾಯಿತಪ್ಪಿನಿಂದ ಆ ಮಾತು ಹೇಳಿರಬಹುದು ಅಥವಾ ಅವರು ಆ ಹೇಳಿಕೆ ಹೇಳುವುದರ ಮುಖಾಂತರ ಕಾಂಗ್ರೆಸ್ ಪಕ್ಷವನ್ನು ಎಚ್ಚರಿಸಿದ್ದಾರೆ ಕಾಂಗ್ರೆಸ್ ಪಕ್ಷಕ್ಕೆ ಅವರ ಹೇಳಿಕೆ ಪರೋಕ್ಷವಾಗಿ ವರದಾನವಾಗಿದೆ ಬಿಜೆಪಿಗೆ ಪ್ರತ್ಯಕ್ಷವಾಗಿ ಆ ಹೇಳಿಕೆ ವರದಾನವಾಗಿದ್ದರು ಪರೋಕ್ಷವಾಗಿ ಅವರ ಹೇಳಿಕೆ ಹಿಂದೇಟಾಗಿದೆ ಹಾಗೆ ಮುಂದೆ ಅವರು ಚುನಾವಣೆ ಪ್ರಚಾರಕ್ಕೆ ಬಂದಾಗ ತಮ್ಮ ಕಾಂಗ್ರೆಸ್ ಅಭ್ಯರ್ಥಿಯ ಪರ ಮತ ಕೇಳುತ್ತಾರೆ ಆಗ ಆ ಸಮಸ್ಯೆ ಬಗೆಹರಿಯುತ್ತದೆ ಆದರೆ ನಮ್ಮ ಕಾಂಗ್ರೆಸ್ಸಿನ ಕೆಲ ಮುಖಂಡರು ಅದೇ ಸಭೆಯಲ್ಲಿ ಭಾಗವಹಿಸಿದ್ದರು ಅವರು ಶಾಮನೂರ್ ಶಿವಶಂಕರಪ್ಪನವರ ಹೇಳಿಕೆಯ ಬಗ್ಗೆ ಇಲ್ಲಿವರೆಗೂ ಕೂಡ ಏಕೆ ಮಾತನಾಡುತ್ತಿಲ್ಲ ಎನ್ನುವುದು ನನಗೆ ಗೊತ್ತಾಗುತ್ತಿಲ್ಲ ಚಿಕ್ಕ ವಿಷಯವನ್ನು ದೊಡ್ಡದು ಮಾಡಿ ದೂರು ನೀಡುವ ಇವರು ಇಂತಹ ದೊಡ್ಡ ವಿಷಯದ ಬಗ್ಗೆ ಮಾತನಾಡದೆ ಇರುವುದು ಏಕೋ ಗೊತ್ತಿಲ್ಲ ಎಂದರು. ಪರೋಕ್ಷವಾಗಿ ಮಾಜಿ ಕಾರ್ಪೊರೇಟರ್ ಹಾಗೂ ಕಾಂಗ್ರೆಸ್ನ ಪರಾಜಿತ ಅಭ್ಯರ್ಥಿ ಎಸ್ಸಿ ಯೋಗೇಶ್ ಅವರನ್ನು ಮಾತಿನಿಂದಲೇ ಕೂಟುಕಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖ ರಾದ ವೈ.ಹೆಚ್. ನಾಗರಾಜ್, ಶಿ.ಜು.ಪಾಶ, ಐಡಿಯಲ್ ಗೋಪಿ, ಮುಕ್ತಿಯಾರ್ ಅಹಮದ್, ಸೈಯ್ಯದ್ ವಾಹಿದ್ ಅಡ್ಡು , ಸಂತೋಷ್ ಆಯನೂರು ಇದ್ದರು.