
ಶಿಕಾರಿಪುರ: ತಾಲೂಕಿನ ಕುಂಬಾರ ಗುಂಡಿಯ ವಾಸಿ ಯಾಸಿರ್ ಪಾಷಾ ಎನ್ನುವ ವ್ಯಕ್ತಿ ಸಾರ್ವಜನಿಕರಿಗೆ ಗಾಂಜಾ ಮಾದಕ ವಸ್ತು ಮಾರಾಟ ಮಾಡಲು ತನ್ನ ಸ್ಕೂಟಿಯನ್ನು ಬಳಸುತ್ತಿದ್ದನು ಈ ಸಮಯದಲ್ಲಿ ಖಚಿತ ಮಾಹಿತಿಯ ಮೇರೆಗೆ ಶಿಕಾರಿಪುರದ ಐಪಿಎಸ್ ಶ್ರೀನಿವಾಸಲು ಅಡ್ಡೂರ್, ಎಎಸ್ಪಿ ನೇತೃತ್ವದಲ್ಲಿ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದಾಗ ಮಾದಕ ವಸ್ತುವನ್ನು ವ್ಯಾಪಾರ ಮಾಡುತ್ತಿದ್ದ ಯಾಸೀರ್ ಪಾಷಾನನ್ನು ದಸ್ತಗಿರಿ ಮಾಡಿ ಆತನಿಂದ ಒಂದು ಕೆಜಿ 148 ಗ್ರಾಂ ತೂಕದ ಒಣ ಗಾಂಜಾವನ್ನು ವಶಪಡಿಸಿಕೊಂಡು ಆತನ ವಿರುದ್ಧ. ಗುನ್ನೆ ಸಂಖ್ಯೆ 00052/2020 ಕಲಂ 8(ಸಿ), 20(ಬಿ)(2) ಎನ್.ಡಿ.ಪಿ.ಎಸ್ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ.
ಪ್ರಕರಣದ ತನಿಖಾಧಿಕಾರಿಗಳಾದ ಬೂದ್ಯಪ್ಪ ಎಎಸ್ಐ ರವರು ಪ್ರಕರಣದ ತನಿಖೆ ನಡೆಸಿ ಆರೋಪಿಯ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣಾ
ಪತ್ರ ಸಲ್ಲಿಸಿರುತ್ತಾರೆ. ಸುರೇಶ್ ಕುಮಾರ್ ಸರ್ಕಾರಿ ಅಭಿಯೋಜಕರವರು ಪ್ರಕರಣದ ಪರವಾಗಿ ಘನ ನ್ಯಾಯಾಲಯದಲ್ಲಿ ವಾದಮಂಡಿಸಿದ್ದು, ಮಾನ್ಯ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ
ಶಿವಮೊಗ್ಗ ದಲ್ಲಿ ಪ್ರಕರಣದ ವಾದ ನಡೆದು ಆರೋಪಿ ಯಾಸೀರ್ ಪಾಷಾ 28 ವರ್ಷ, ಶಿಕಾರಿಪುರ ಟೌನ್
ಈತನ ವಿರುದ್ಧ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಧೀಶರಾದ
ಶ್ರಿ ಮಂಜುನಾಥ್ ನಾಯಕ್,ರವರು ದಿನಾಂಕಃ 02-02-2024 ರಂದು ಆರೋಪಿಗೆ 04 ವರ್ಷ ಕಠಿಣ ಕಾರಾವಾಸ ಶಿಕ್ಷೆ ಮತ್ತು 20,000/- ರೂ ದಂಡ ದಂಡ ಕಟ್ಟಲು ವಿಫಲನಾದಲ್ಲಿ ಹೆಚ್ಚುವರಿಯಾಗಿ 06 ತಿಂಗಳು ಸಾಧಾ ಕಾರಾವಾಸ ಶಿಕ್ಷೆ
ವಿಧಿಸಿ ಆದೇಶಸಿರುತ್ತಾರೆ.
ಶಿವಮೊಗ್ಗ ಪೊಲೀಸರು ಗಾಂಜಾ ವಿರುದ್ಧ ಸಮರ ಸಾರಿದ್ದು ಈಗ ಘನ ನ್ಯಾಯಾಲಯ ಶಿಕ್ಷೆಯನ್ನು ವಿಧಿಸುತ್ತಿದ್ದು ಈ ಕೃತ್ಯವನ್ನು ಮಾಡುವವರಿಗೆ ಇದೊಂದು ಎಚ್ಚರಿಕೆಯ ಗಂಟೆಯಾಗಿದೆ.