Home ಶಿವಮೊಗ್ಗSagar:ಅಕ್ರಮ ಮಣ್ಣು ಸಾಗಾಟ ಕಣ್ಣುಮುಚ್ಚಿ ಕುಳಿತ ಜಿಲ್ಲಾಡಳಿತ..! ದೇವರ ಹೆಸರಿನಲ್ಲಿ ಮಣ್ಣು ಲೂಟಿ ಅಕ್ರಮಕ್ಕೆ ಬ್ರೇಕ್ ಹಾಕಿಸುತ್ತಾರಾ ಸ್ಥಳೀಯ ಶಾಸಕ ಬೇಲೂರು..?!

Sagar:ಅಕ್ರಮ ಮಣ್ಣು ಸಾಗಾಟ ಕಣ್ಣುಮುಚ್ಚಿ ಕುಳಿತ ಜಿಲ್ಲಾಡಳಿತ..! ದೇವರ ಹೆಸರಿನಲ್ಲಿ ಮಣ್ಣು ಲೂಟಿ ಅಕ್ರಮಕ್ಕೆ ಬ್ರೇಕ್ ಹಾಕಿಸುತ್ತಾರಾ ಸ್ಥಳೀಯ ಶಾಸಕ ಬೇಲೂರು..?!

by EDITOR NEWS WARRIORS
0 comments

ಸಾಗರ: ತಾಲ್ಲೂಕು ಕಸಬಾ ಹೋಬಳಿ ಮಾಸೂರು ಗ್ರಾಮದ ಸರ್ವೇ ನಂಬರ್ 105ರ ಮೇಳವರಿಗೆಯಲ್ಲಿ ಅಕ್ರಮ ಮಣ್ಣು ಸಾಗಾಟವಾಗುತ್ತಿದೆ ದೇವರ ಹೆಸರಿನಲ್ಲಿ ಮಣ್ಣನ್ನು ಲೂಟಿ ಮಾಡುತ್ತಿರುವ ಖದೀಮರಿಗೆ ಬ್ರೇಕ್ ಹಾಕದೆ ಕಣ್ಣು ಮುಚ್ಚಿ ತಾಲೂಕ್ ಆಡಳಿತ ಕುಳಿತಿದೆ.


ಸಾಗರ ತಾಲೂಕಿನ ಕಸಬಾ ಹೋಬಳಿ ಮೆಳವರಿ ಶಾಲೆ ಎದುರಿಗೆ ಗೋಮಾಳದ ಜಾಗದಲ್ಲಿ ಮಣ್ಣು ಕಳ್ಳರು ಯಾವುದೇ ಮುಲಾಜಿಲ್ಲದೆ ಮಣ್ಣನ್ನು ಕದ್ದು ಕದ್ದು ಸಾಗಿಸುತ್ತಿದ್ದರೂ ಸಾಗರ ತಾಲೂಕು ಆಡಳಿತ ತಟಸ್ಥವಾಗಿರಲು ಕಾರಣವೇನು..!!??? ಮಣ್ಣು ಕಳ್ಳರು ದೇವರನ್ನು ಬಿಡದೆ ದೇವಸ್ಥಾನದ ಹೆಸರನ್ನು ಹೇಳಿಕೊಂಡು ಮಣ್ಣನ್ನು ಏಗ್ಗಿಲ್ಲದೆ ಲೂಟಿ ಹೊಡೆಯುತ್ತಿದ್ದರೂ ಕೂಡ ಸಾಗರ ತಾಲೂಕು ಆಡಳಿತ ಏಕೆ ಸುಮ್ಮನಿದೆ. ಎಂಬುವುದೇ ಯಕ್ಷ ಪ್ರಶ್ನೆ ??.. ತಾಶಿಲ್ದಾರ್ ಸಾಹೇಬರೇ ಇದು ನಿಮ್ಮ ಗಮನಕ್ಕೆ ಬಂದಿಲ್ಲವೇ ??? ಸರ್ಕಾರಿ ಗೋಮಾಳ ಭೂಮಿಯಲ್ಲಿ ಅನಧಿಕೃತ ವ್ಯಕ್ತಿಗಳು ಜೆ.ಸಿ.ಬಿ. ಬಳಸುವುದೇ ಕಾನೂನುಬಾಹಿರ ಎಂಬುವುದು ತಮಗೆ ತಿಳಿದಿಲ್ಲವೇ?. ಸಾಗರ ತಹಶೀಲ್ದಾರ್ ತಕ್ಷಣ ಇತ್ತ ತಮ್ಮ ಗಮನಹರಿಸಬೇಕಾಗಿದೆ ಆರ್. ಐ ಎಕೆ ಮೌನ ವಹಿಸಿದ್ದೀರಿ?ವಿ. ಐ ಮಹಾನ್ ಪುರುಷ ರವಿಚಂದ್ರನ್ ನೀವೇನು ಸಾಚಾ ಅಲ್ಲ ಎಂದು ಅಲ್ಲಿನ ಸ್ಥಳಿ ಜನ ಮಾತನಾಡುತ್ತಿದ್ದಾರೆ… ಗ್ರಾಮೀಣ ಭಾಗದ ಬಡಬಗ್ಗರಿಗೆ ರೈತರಿಗೆ ನೆರವಾಗಲಿ ಎಂದು ನಿಮಗೆ ಸರ್ಕಾರ ಒಂದು ವಿ.ಐ. ಎಂಬ ಹುದ್ದೆಯನ್ನು ನೀಡಿದೆ ಆ ಹುದ್ದೆಗೂ ಹಾಗೂ ಸರ್ಕಾರಕ್ಕೂ ಎಂದಿಗೂ ದ್ರೋಹವಾಗದಂತೆ ಕಾರ್ಯನಿರ್ವಹಿಸುವುದು ತಮ್ಮ ಕರ್ತವ್ಯ ಇದಕ್ಕೇಂದು ಚ್ಯುತಿ ಬಾರದ ಹಾಗೆ ನಡೆದುಕೊಂಡರೆ ಎಲ್ಲರಿಗೂ ಒಳ್ಳೆಯದು ಶಿವಮೊಗ್ಗದ ಹಿಂದಿನ ಡಿ.ಸಿ. ಸಾಹೇಬರು ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸಿ ಶಿವಮೊಗ್ಗದಿಂದ ನಿರ್ಗಮಿಸಿದ್ದಾರೆ ಇದೀಗ ನೂತನವಾಗಿ ಶಿವಮೊಗ್ಗ ಜಿಲ್ಲೆಗೆ ಕಾಲಿಟ್ಟ ಡಿ.ಸಿ. ಗುರುದತ್ ಸಾಹೇಬರು ಈ ಹಿಂದೆ ಕಾರ್ಯನಿರ್ವಹಿಸಿದ ಎಲ್ಲಾ ಕಡೆಯೂ ದಕ್ಷತೆ ಮೆರೆದಿದ್ದಾರೆ ಅದನ್ನೀಗ ಈ ಸಾಗರ ಜಿಲ್ಲೆಗೆ ಮತ್ತೊಮ್ಮೆ ಸಾಬೀತುಪಡಿಸಬೇಕು….!!! ಹೇಳಿ ಕೇಳಿ ಶಿವಮೊಗ್ಗ ಜಿಲ್ಲೆಯಲ್ಲಿ ಅತ್ಯಂತ ಪ್ರಾಮಾಣಿಕ ಹಾಗೂ ಖಡಕ್ ಅಧಿಕಾರಿ ಎಸ್. ಪಿ. ಮಿಥುನ್ ಕುಮಾರ್ ನಮ್ಮ ಜೊತೆಗಿದ್ದಾರೆ ಈ ಇಬ್ಬರು ಐ.ಎ.ಎಸ್. ಐ.ಪಿ.ಎಸ್. ಅಧಿಕಾರಿಗಳು ತಮ್ಮ ಚಾಪನ್ನು ಮೂಡಿಸಬೇಕಾಗಿದೆ. ಸಾಗರ ಸ್ಥಳೀಯ ಶಾಸಕ ಈ ಜಡ್ಡು ಕಟ್ಟಿದ್ದ ಕೆಲವು ಅಧಿಕಾರಿಗಳಿಗೆ ಅತ್ಯಂತ ಜರೂರಾಗಿ ಬಿಸಿ ಮುಟ್ಟಿಸಿ ನೊಂದ ರೈತರಿಗೆ ಜೊತೆಗೆ ಮಧ್ಯಮ ವರ್ಗದ ಬಡಪಾಯಿಗಳಿಗೆ ಹಾಗೂ ನ್ಯಾಯದ ಪರವಾಗಿ ನಿಂತು ನೊಂದವರಿಗೆ ನಂದಾದೀಪವಾಗಿ ಬೆಳಗಬೇಕಾಗಿದೆ.

ಶಾಸಕರೇ ಸರ್ಕಾರವು ನಿಮ್ಮದಿದೆ ಮತ್ತೆ ಯಾಕೆ ತಡ ಮಾಡುತ್ತಿರಿ?ಕೆಲ ಖದೀಮ ಅಧಿಕಾರಿಗಳಿಗೆ ಬಿರುಬಿಸಿಲಿನಲ್ಲಿ ಚಾಟಿ ಬೀಸಲು ಮರೆಯದಿರಿ ಆಗ ಸಾಗರ ಕ್ಷೇತ್ರದ ಜನತೆ ನಿಮ್ಮನ್ನು ಎಂದೆಂದಿಗೂ ಮರೆಯಲಾರರು ಶಾಸಕರೇ ಎಲ್ಲಾ ನಿಮ್ಮ ಕೈಯಲ್ಲಿದೆ ಕಾದು ನೋಡುವ ಕುತೂಹಲದಲ್ಲಿ ನಿಮ್ಮ ಮತದಾರ ಪ್ರಭುಗಳು,ರೈತ ಬಾಂಧವರು , ಹಾಗೂ ಅವರುಗಳ ಜೊತೆಗೆ ಪತ್ರಕರ್ತರಾದ ನಾವುಗಳು ಸಹ ಅತ್ಯಂತ ಕುತೂಹಲದಿಂದ ಕಾದು ನ್ಯಾಯಕ್ಕಾಗಿ ಎದುರು ನೋಡುತ್ತಿದ್ದೇವೆ…

ವಿಶೇಷ ವರದಿ : ನಗರ ನಾಗೇಶ್. 9108311085

Related Articles

Latest news
ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...