
ಶಿಕಾರಿಪುರ:ನಗರದ ಸಾಂಸ್ಕೃತಿಕ ಭವನದಲ್ಲಿ ದಿನಾಂಕ 04/02/2024 ರ ಭಾನುವಾರದಂದು ಶಿವಮೊಗ್ಗ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು.
ಈ ಪಂದ್ಯಾವಳಿಗೆ ಸಹ್ಯಾದ್ರಿ ಶಿವಮೊಗ್ಗ ಜಿಲ್ಲಾ ಕರಾಟೆ ಸಂಸ್ಥೆಯ ಕ್ರೀಡಾಪಟುಗಳು ಭಾಗವಹಿಸಿ ವಿವಿಧ ವಿಭಾಗಗಳಲ್ಲಿ ಪದಕಗಳನ್ನು ಗೆದ್ದು ತಂಡದ ಚಾಂಪಿಯನ್ಸ್ ಟ್ರೋಫಿ ಪಡೆದಿರುತ್ತಾರೆ. ಕೊನೆಯ ಹಂತದಲ್ಲಿ ನಡೆಯುವ ಓಪನ್ ಕರಾಟೆ ಚಾಂಪಿಯನ್ಶಿಪ್ ಪಂದ್ಯಾವಳಿಯಲ್ಲಿ ಭಾಗವಹಿಸಿದಂತಹ ಇದೇ ಸಂಸ್ಥೆಯ ಪ್ರೀತಮ್ . ವಿ ವಿಜಯಶಾಲಿಯಾಗಿ ಸೈಕಲ್ ಹಾಗೂ ಆಕರ್ಷಿಕ ಟ್ರೋಫಿ ಯನ್ನು ಬಹುಮಾನವಾಗಿ ಪಡೆದಿರುತ್ತಾನೆ.
ಸಂಸ್ಥೆಯ ತರಬೇತುದಾರರಾದ ಸನ್ ಸೈ ನವೀನ್, ಸನ್ ಸೈ ಮಂಜು, ಸನ್ ಸೈ ಸಾದಿಕ್ ಅಭಿನಂದಿಸಿರುತ್ತಾರೆ.
ಹಾಗೂ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಮತ್ತು ಅಪರಾಧ ನಿಯಂತ್ರಣ ಸಂಸ್ಥೆಯ. ನಿರ್ದೇಶಕರಾದಂತಹ ಅಬ್ದುಲ್ ರಜಾಕ್, ಮೈಕಲ್ ಕೆನಿತ್, ವಕೀಲರಾದ ಸಂತೋಷ್, ಜಿಲ್ಲಾ ಉಪಾಧ್ಯಕ್ಷರಾದಂತಹ ನಾಸಿಫ್ ಅಹಮ್ಮದ್ ರಾದಂತಹ ಹಾಗೂ ಸಂಸ್ಥೆಯ ಎಲ್ಲಾ ಸದಸ್ಯರುಗಳು ಪಂದ್ಯಾವಳಿಯಲ್ಲಿ ಭಾಗವಹಿಸಿ ಪದಕಗಳು ಹಾಗೂ ಓಪನ್ ಚಾಂಪಿಯನ್ಶಿಪ್ ನಲ್ಲಿ ಸೈಕಲ್ ಪಡೆದಿರುವ ಕ್ರೀಡಾಪಟು ಪ್ರೀತಮ್ ಗೆ ಶುಭಾಶಯಗಳನ್ನು ಕೋರಿರುತ್ತಾರೆ.