
ಶಿವಮೊಗ್ಗ: ತಾಲೂಕಿನ ಗುರುಪುರ ಬಳಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ದಿಢೀರನೆ ದಾಳಿ ನಡೆಸಿ ಅಕ್ರಮ ಮರಳನ್ನು ವಶಪಡಿಸಿಕೊಂಡಿದ್ದಾರೆ .
ಇದಕ್ಕೆ ಸಂಬಂಧಪಟ್ಟಂತೆ ಎರಡು ಜೆಸಿಬಿ ಹಾಗೂ ಮೂರು ಟ್ಯಾಕ್ಟರ್ ಗಳನ್ನು ವಶಪಡಿಸಿಕೊಂಡು ಗ್ರಾಮಾಂತರ ಠಾಣೆಗೆ ಾಜರುಪಡಿಸಿದ್ದಾರೆ ಹಾಗೂ ಸಂಬಂಧಪಟ್ಟ ಆರ್‌ಟಿಓ ಅಧಿಕಾರಿಗಳಿಗೆ ಪತ್ರ ಬರೆದು ವಾಹನ ಮಾಲೀಕರ ವಿವರವನ್ನು ಪಡೆದು ಮುಂದಿನ ಕಾನೂನು ಕ್ರಮ ಜರುಗಿಸುವುದಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ತಿಳಿಸಿದ್ದಾರೆ.
ದಾಸ್ತಾನಿದ್ದ ಮರಳನ್ನು ಡಿಸ್ಪೋಸ್ ಮಾಡಿದ್ದು ನಿರಂತರವಾಗಿ ಈ ದಂದೆ ನಡೆಯುತ್ತಿದ್ದು ಖಚಿತ ಮಾಹಿತಿ ಮೇರೆಗೆ ಗಣಿ ಮತ್ತು ವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ನವೀನ್ ಮತ್ತು ಕಿರಿಯ ವಿಜ್ಞಾನಿ ಅವಿನಾಶ್ ಹಾಗೂ ಇತರೆ ಸಿಬ್ಬಂದಿಗಳು ದಾಳಿ ನಡೆಸಿದ್ದಾರೆ.