
ಲೋಕಸಭಾ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದು ಬಿಜೆಪಿಯ 5ನೇ ಪಟ್ಟಿ ಇಂದು ಬಿಡುಗಡೆಯಾಗಿದ್ದು ಅದರಲ್ಲಿ ಕರ್ನಾಟಕದ ನಾಲ್ಕು ಪ್ರಮುಖ ಲೋಕಸಭಾ ಕ್ಷೇತ್ರಗಳ ಹೆಸರು ಘೋಷಣೆಯಾಗಿದೆ.
ಎಲ್ಲರ ನಿರೀಕ್ಷೆಯಂತೆ ಜಗದೀಶ್ ಶೆಟ್ಟರ್ ಗೆ ವಿರೋಧದ ನಡುವೆಯೂ ಬೆಳಗಾವಿಗೆ ಟಿಕೆಟ್ ಫೈನಲ್ ಆಗಿದೆ ಹಾಗೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪ್ರದೀಪ್ ಈಶ್ವರ್ ಜೊತೆಗೆ ಹೀನಾಯ ಸೋಲು ಕಂಡ ಮಾಜಿ ಆರೋಗ್ಯ ಸಚಿವ ಸುಧಾಕರ್ ಗೆ ಚಿಕ್ಕಬಳ್ಳಾಪುರದಿಂದ ಲೋಕಸಭಾ ಕ್ಷೇತ್ರದ ಟಿಕೆಟ್ ಫೈನಲ್ ಆಗಿದೆ ಹಾಗೆ ರಾಯಚೂರಿನಿಂದ ರಾಜಾ ಅಮರೇಶ್ವರ ನಾಯಕ್ ಅವರಿಗೆ ಟಿಕೆಟ್ ಫೈನಲ್ ಆಗಿದೆ ಹಾಗೆ ವಿಶ್ವೇಶ್ವರ ಹೆಗಡೆ ಕಾವೇರಿ ಅವರಿಗೆ ಉತ್ತರ ಕನ್ನಡ ಲೋಕಸಭಾ ಟಿಕೆಟ್ ಫೈನಲ್ ಆಗಿದೆ ಕೋಟೆ ನಾಡು ಚಿತ್ರದುರ್ಗ ಮಾತ್ರ ಇನ್ನು ಹಾಗೆ ಉಳಿದಿದೆ.