ಹರಿಹರ:-ಹರಿಹರದ ಮೇರಿ ಜಾತ್ರೆ ರದ್ದಾಗಿದ್ದರೂ ಭಕ್ತರ ದಂಡು ಮಾತ್ರ ಆಗಮಿಸುತ್ತಲೇ ಇತ್ತು.
ತಮ್ಮ ಭಕ್ತಿಯನ್ನು ದೇವರಿಗೆ ಸಮರ್ಪಿಸಲು ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ಹೊರರಾಜ್ಯದಿಂದಲೂ ಭಕ್ತರು ಆಗಮಿಸಿದ್ದರು .
ಸರ್ಕಾರದ ಕೋವಿಡ್ ಮಾರ್ಗಸೂಚಿಯ ನಿಯಮಗಳ ಪಾಲನೆಯನ್ನು ಪಾಲಿಸುವಂತೆ ಜಾತ್ರಾ ವ್ಯವಸ್ಥಾಪಕ ಮಂಡಳಿಯವರ ಜೊತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ತಾಕೀತು ಮಾಡಿದ್ದರು.ಆದರೆ ಭಕ್ತರು ಮಾತ್ರ ಯಾವುದಕ್ಕೂ ಕ್ಯಾರೆ ಎನ್ನದೆ ದರ್ಶನಕ್ಕೆ ಅವಕಾಶ ಮಾಡಿಕೊಡುವಂತೆ ಸಂಬಂಧಿಸಿದ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದರು .
ಭಕ್ತರ ಒತ್ತಾಯದ ಮನವಿಯ ಮೇಲೆ ಸಂಬಂಧಿಸಿದ ಅಧಿಕಾರಿಗಳು ದರ್ಶನಕ್ಕೆ ಸರದಿ ಸಾಲಿನಂತೆ, ಸಾಮಾಜಿಕ ಅಂತರ, ಮಾಸ್ಕ್ ಧರಿಸಿ ದರ್ಶನ ಮಾಡಲು ಅನುವು ಮಾಡಿಕೊಟ್ಟರು .
ಮೇರಿ ಮಾತೆಯ ದರ್ಶನ ಪಡೆಯಲು ಎಂಭತ್ತು ವರ್ಷದ ಅಂಗವಿಕಲ ವಯೋವೃದ್ಧೆ ಆಗಮಿಸಿದ್ದರು .ವಯೋವೃದ್ಧೆ ಮೇರಿ ಮಾತೆಗೆ ಭಕ್ತಿಯನ್ನು ಸಮರ್ಪಿಸಿ ಬರುವಾಗ ತುಂಬಾ ಆಯಾಸಗೊಂಡಂತೆ ಕಾಣುತ್ತಿದ್ದರು.ವೃದ್ಧೆ ಆಯಾಸಗೊಂಡಿದ್ದನ್ನು ಗಮನಿಸಿದ ದಾವಣಗೆರೆ ಗ್ರಾಮಾಂತರ ಡಿವೈಎಸ್ ಪಿ ನರಸಿಂಹ ತಾಮ್ರಧ್ವಜ್ ಅವರು ವಯೋವೃದ್ಧೆಗೆ ಆಟೋದಲ್ಲಿ ಹೋಗಲು ಅನುವು ಮಾಡಿಕೊಡುವುದರ ಜೊತೆಗೆ,ಆಟೋವನ್ನ ಹತ್ತಿಸಿ ವೃದ್ಧಿಗೆ ಸಹಾಯ ಮಾಡುವುದರ ಜೊತೆಗೆ ಮಾನವೀಯತೆಯನ್ನು ಮೆರೆದಿದ್ದಾರೆ .

ತಾವೊಬ್ಬ ಅಧಿಕಾರಿ ಎಂಬುದನ್ನು ಮರೆತು, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ವಯೋವೃದ್ಧೆಗೆ ಮೊಮ್ಮಗನಂತೆ ಸಹಾಯ ಮಾಡಿ ,”ಮಾನವೀಯತೆ ಗಿಂತ ದೊಡ್ಡದು ಮತ್ತೊಂದಿಲ್ಲ” ಎಂಬುದನ್ನ ಸಾಬೀತು ಮಾಡಿದ್ದಾರೆ.

ಯಾರು ಎಷ್ಟೇ ದೊಡ್ಡವರಿರಲಿ, ಎಷ್ಟೇ ಅಧಿಕಾರವಿರಲಿ ಸಂಕಷ್ಟದ ಪರಿಸ್ಥಿತಿಯ ಸಂದರ್ಭದಲ್ಲಿ ಇನ್ನೊಬ್ಬರ ಸಹಾಯಕ್ಕೆ ಧಾವಿಸಿ ಅವರ ನೋವಿಗೆ ಸ್ಪಂದಿಸಿದಾಗ ನಾವು ಪಡೆದ ಶಿಕ್ಷಣಕ್ಕೆ ಒಂದು ಅರ್ಥ ಬರುತ್ತದೆ .ಈ ಸಹಾಯವೇ ನಾವು ಗುರುಗಳಿಗೆ ದಕ್ಷಿಣೆಯಾಗಿ ನೀಡುವುದು.ಡಿವೈಎಸ್ ಪಿ ನರಸಿಂಹ ತಾಮ್ರಧ್ವಜ ಅವರ ಕಾರ್ಯ ಇಡೀ ಜಿಲ್ಲೆಯ ಜನರ ಪ್ರಶಂಸೆಗೆ ಪಾತ್ರವಾಗಿದೆ.
ನೊಂದವರಿಗೆ ನೆರವು ನೀಡುವ ನಮ್ಮ ಪೋಲೀಸ್ ಅಧಿಕಾರಿಗೆ ನಮ್ಮದೊಂದು ಬಿಗ್ ಸೆಲ್ಯೂಟ್ .
ವರದಿ…ಪ್ರಕಾಶ್ ಮಂದಾರ…
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ…9449553305/7892830899…