
ಶಿವಮೊಗ್ಗ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಕಳೆದ ಐದು ವರ್ಷಗಳಿಂದ ಯಶಸ್ವಿಯಾಗಿ ಪಕ್ಷ ಸಂಘಟಿಸಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷದಲ್ಲಿನ ಆಂತರಿಕ ಕಲಹಗಳನ್ನು ತಣ್ಣಗಾಗಿಸಿ ಗುಂಪುಗಾರಿಕೆಯನ್ನು ತಡೆಗಟ್ಟಿ ತನ್ನದೇ ಆದ ವಾಕ್ ಚಾತುರ್ಯದಿಂದ ಚತುರತೆಯಿಂದ ಅಧಿಕಾರ ಇಲ್ಲದಿದ್ದ ಸಮಯದಲ್ಲೂ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬಂದ ಕಾರ್ಯಕರ್ತರಿಗೆ ಕೆಲಸ ಕಾರ್ಯಗಳನ್ನು ಮಾಡಿಕೊಡುತ್ತಿದ್ದ ಎಲ್ಲರ ಅಚ್ಚುಮೆಚ್ಚಿನ ಅಧ್ಯಕ್ಷರಾಗಿದ್ದ ಹೆಚ್ ಎಸ್ ಸುಂದರೇಶ್ ಸೂಡ ಅಧ್ಯಕ್ಷರಾಗಿ ನೇಮಕವಾದ ಬೆನ್ನಲ್ಲೆ ಆ ಸ್ಥಾನಕ್ಕೆ ಒಬ್ಬ ಜಿಲ್ಲಾಧ್ಯಕ್ಷರ ನೇಮಕವಾಗಬೇಕಿತ್ತು ಈಗ ಆ ಸ್ಥಾನಕ್ಕೆ ಮಾಜಿ ವಿಧಾನ ಪರಿಷತ್ ಸದಸ್ಯರಾದ ಆರ್ ಪ್ರಸನ್ನ ಕುಮಾರ್ ಅವರ ನೇಮಕವಾಗಿದೆ.
ಹಲವರ ಹೆಸರು ಕೇಳಿಬಂದಿತ್ತು ಯಾರು ಆ ಸ್ಥಾನಕ್ಕೆ ಒಪ್ಪಿರಲಿಲ್ಲ :
ಸಾಮಾನ್ಯವಾಗಿ ಜಿಲ್ಲಾಧ್ಯಕ್ಷ ಸ್ಥಾನವೆಂದರೆ ಎಲ್ಲರೂ ಇಷ್ಟಪಡುತ್ತಾರೆ ಒಪ್ಪಿಕೊಳ್ಳುತ್ತಾರೆ ಆದರೆ ಶಿವಮೊಗ್ಗ ಕಾಂಗ್ರೆಸ್ ನ ಜಿಲ್ಲಾಧ್ಯಕ್ಷ ಸ್ಥಾನದ ಕಥೆಯೇ ಬೇರೆ ಜಿಲ್ಲಾಧ್ಯಕ್ಷ ಸ್ಥಾನ ಕೊಡುತ್ತೇವೆ ಎಂದರು ಒಪ್ಪಿಕೊಳ್ಳುವವರು ಕಷ್ಟ ಏಕೆಂದರೆ ಈ ಜವಾಬ್ದಾರಿ ನಿರ್ವಹಿಸುವುದು ಅಷ್ಟು ಸುಲಭದ ಕೆಲಸವಲ್ಲ ಕಾಂಗ್ರೆಸ್ ಬಹುದೊಡ್ಡ ರಾಷ್ಟ್ರೀಯ ಪಕ್ಷವಾದರೂ ಕೂಡ ಮೂಲ ಕಾಂಗ್ರೆಸ್ಸಿಗರು ಹಾಗೂ ಇತ್ತೀಚಿಗೆ ಬಂದ ಕಾಂಗ್ರೆಸ್ಸಿಗರು ಎಂಬ ಬಣಗಳಿವೆ ಈ ಬಣಗಳನ್ನು ನಿಭಾಯಿಸಿಕೊಂಡು ಹೋಗುವುದು ಅಷ್ಟು ಸುಲಭದ ಕೆಲಸವಲ್ಲ ಅದನ್ನು ಸುಂದರೇಶ್ ಯಶಸ್ವಿಯಾಗಿ ಮಾಡಿದ್ದರು ಆದ್ದರಿಂದ ಈ ಜವಾಬ್ದಾರಿ ಕೊಡುತ್ತೇವೆ ಎಂದು ಸಾಕಷ್ಟು ಸಲ ಹೇಳಿದ್ದರು ಕೂಡ ಆರ್ ಎಂ ಮಂಜುನಾಥ್ ಗೌಡರು, ಜೆಡಿಎಸ್ ಜಿಲ್ಲಾಧ್ಯಕ್ಷರಾಗಿದ್ದ ನಂತರ ಈಗ ಕಾಂಗ್ರೆಸ್ಗೆ ಬಂದಿರುವ ಎಂ ಶ್ರೀಕಾಂತ್, ಕಾಂಗ್ರೆಸ್ನ ಮುಖಂಡರಾಗಿರುವ ಕಲ್ಗೋಡ್ ರತ್ನಾಕರ್, ಜಿಲ್ಲಾಧ್ಯಕ್ಷ ಸ್ಥಾನ ಕೊಡುತ್ತೇವೆ ಎಂದು ಹೇಳಿದ್ದರು ಕೂಡ ನಯವಾಗಿ ನಿರಾಕರಿಸಿದ್ದರು. ಆ ನಂತರ ಆಸ್ಥಾನಕ್ಕೆ ಮಾಜಿ ವಿಧಾನ ಪರಿಷತ್ ಸದಸ್ಯರಾದ ಆರ್ ಪ್ರಸನ್ನ ಕುಮಾರ್ ಅವರ ಹೆಸರು ಕೇಳಿ ಬಂದಿತ್ತು ತಾಳ್ಮೆಯ ವ್ಯಕ್ತಿತ್ವದವರಾದ ಆರ್ ಪ್ರಸನ್ನ ಕುಮಾರ್ ಅವರು ಕೂಡ ಇದಕ್ಕೆ ಒಪ್ಪಿ ಕೊನೆಗೂ ಅವರಿಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡಲಾಗಿದೆ.
ನೂತನವಾಗಿ ಜಿಲ್ಲಾಧ್ಯಕ್ಷರಾಗಿರುವ ಆರ್ ಪ್ರಸನ್ನ ಕುಮಾರ್ ಕಾಂಗ್ರೆಸ್ ನಲ್ಲಿರುವ ವಿವಿಧ ಬಣಗಳನ್ನು ಹೇಗೆ ನಿಭಾಯಿಸಿಕೊಂಡು ಹೋಗುತ್ತಾರೆ ಬಣಗಳ ನಡುವೆ ಇರುವ ಆಂತರಿಕ ಕಲಹಗಳ ನಡುವೆಯೂ ಪಕ್ಷ ಸಂಘಟನೆಯನ್ನು ಹೇಗೆ ಮಾಡುತ್ತಾರೆ ಸಮರ್ಥವಾಗಿ ಪಕ್ಷವನ್ನು ಸಂಘಟಿಸಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅತಿಹೆಚ್ಚಿನ ಮತಗಳು ಬರುವಂತೆ ನೋಡಿಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕು.
ರಘುರಾಜ್ ಹೆಚ್.ಕೆ..9449553305.