
ಹಲವು ಗೊಂದಲಗಳು ಹಲವು ಮನಸ್ತಾಪಗಳ ನಡುವೆಯೂ ಕಾಂಗ್ರೆಸ್ ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿಯಾಗಿ ಬಿಜೆಪಿಯಿಂದ ಜೆಡಿಎಸ್ ಗೆ ಬಂದು ಜೆಡಿಎಸ್ ನಿಂದ ನಂತರ ಕಾಂಗ್ರೆಸ್ ಗೆ ಬಂದ ಪ್ರಸ್ತುತ ಕಾಂಗ್ರೆಸ್ ಪಕ್ಷದ ವಕ್ತಾರರಾದ ಆಯನೂರ್ ಮಂಜುನಾಥ್ ಅವರಿಗೆ ಟಿಕೆಟ್ ನೀಡಲಾಗಿದೆ. ಇದರ ವಿರುದ್ಧ ಪ್ರಬಲ ಆಕಾಂಕ್ಷಿಗಳಾಗಿದ್ದ ಹೆಚ್ ಪಿ ದಿನೇಶ್ ಹಾಗೂ ರಂಗಸ್ವಾಮಿ ಅವರು ಪತ್ರಿಕಾಗೋಷ್ಠಿಗಳನ್ನು ನಡೆಸಿ ನಮ್ಮ ಸಹಮತ ಇದಕ್ಕೆ ಇಲ್ಲ ಅಭ್ಯರ್ಥಿ ಬದಲಾವಣೆ ಆಗಬೇಕು ಎಂದು ಪಕ್ಷದ ಹೈಕಮಾಂಡ್ ನಲ್ಲಿ ಮನವಿ ಮಾಡಿದ್ದಾರೆ.
ಬಿಜೆಪಿ ಬೆಂಬಲಿತ ಅಭ್ಯರ್ಥಿ ಯಾರು..?
ಇದರ ನಡುವೆ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿರುವುದು ನೈರುತ್ಯ ಪದವೀಧರ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಯಾರಾಗುತ್ತಾರೆ ಎನ್ನುವುದು ಏಕೆಂದರೆ ಈಗಾಗಲೇ ಹಲವು ಹೆಸರುಗಳು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದ್ದು ಅದರಲ್ಲಿ ಪ್ರಮುಖವಾಗಿ ರಘುಪತಿ ಭಟ್ ಉಡುಪಿ ಕ್ಷೇತ್ರದ ಶಾಸಕರಾಗಿದ್ದವರು ಹಲವು ಬಾರಿ ಶಾಸಕರಾಗಿ ಆಯ್ಕೆಯಾಗಿ ಹಲವು ವಿವಾದಗಳಿಗೂ ಕಾರಣರಾಗಿ ಈಗ ಪ್ರಸ್ತುತ ಶಿವಮೊಗ್ಗ ಜಿಲ್ಲಾ ಲೋಕಸಭಾ ಕ್ಷೇತ್ರದ ಉಸ್ತುವಾರಿಗಳಾಗಿ ನೇಮಕವಾಗಿರುವ ರಘುಪತಿ ಭಟ್ ಅವರ ಹೆಸರು ಕೇಳಿ ಬರುತ್ತಿದೆ ಹಾಗೆ ಡಾ/ ಧನಂಜಯ್ ಸರ್ಜಿ ಖ್ಯಾತ ಮಕ್ಕಳ ತಜ್ಞರಾದ ಧನಂಜಯ್ ಸರ್ಜಿ ಅವರ ಹೆಸರು ಕಳೆದ ವಿಧಾನಸಭಾ ಚುನಾವಣೆಯಲ್ಲೂ ಕೂಡ ಪ್ರಮುಖವಾಗಿ ಶಿವಮೊಗ್ಗ ಕ್ಷೇತ್ರಕ್ಕೆ ಕೇಳಿಬಂದಿತ್ತು ನಂತರ ಶಿವಮೊಗ್ಗದಲ್ಲಿ ಈಶ್ವರಪ್ಪನವರಿಗೂ ಟಿಕೆಟ್ ನೀಡಲಿಲ್ಲ ಅವರ ಪುತ್ರನಿಗೂ ಟಿಕೆಟ್ ನೀಡಲಿಲ್ಲ ಬಿಜೆಪಿಯ ಕಾರ್ಯಕರ್ತರು ಬಿಜೆಪಿಯ ಮುಖಂಡರು ಆಗಿದ್ದ ಸ್ಥಳೀಯ ಮಟ್ಟದ ಚುನಾವಣೆಗಳಲ್ಲಿ ಗೆದ್ದು ಈಶ್ವರಪ್ಪನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಚನ್ನಬಸಪ್ಪ ಚೆನ್ನಿ ಅವರಿಗೆ ನೀಡಲಾಗಿತ್ತು ನಂತರ ಅವರು ಗೆದ್ದಿದ್ದು ಇತಿಹಾಸ ಆದರೆ ಅದೇ ಸಮಯದಲ್ಲಿ ಡಾ. ಧನಂಜಯ್ ಸರ್ಜಿ ಅವರಿಗೆ ಪಕ್ಕದ ತಾಲೂಕದ ಭದ್ರಾವತಿ ಹಾಗೂ ಚೆನ್ನಗಿರಿಯಲ್ಲೂ ನಿಲ್ಲಲು ಆಫರ್ ಗಳು ಬಂದಿದ್ದವು ಎನ್ನಲಾಗುತ್ತಿತ್ತು ಆದರೆ ಅದನ್ನು ಕುಟುಂಬಸ್ಥರೊಂದಿಗೆ ಚರ್ಚಿಸಿ ಧನಂಜಯ್ ಸರ್ಜಿ ಅವರು ಸಿಕ್ಕರೆ ಶಿವಮೊಗ್ಗದಲ್ಲಿ ಸಿಗಲಿ ಬೇರೆ ಕ್ಷೇತ್ರಗಳು ಬೇಡ ಎಂದು ನಯವಾಗಿ ನಿರಾಕರಿಸಿದ್ದರು. ಆದರೆ ಈಗ ನೈರುತ್ಯ ಪದವೀಧರ ಕ್ಷೇತ್ರಕ್ಕೆ ಅವರು ಕೂಡ ಪ್ರಬಲ ಆಕಾಂಕ್ಷಿಗಳಾಗಿದ್ದು ಈಗಾಗಲೇ ಇದರ ಪೂರ್ವ ತಯಾರಿಯನ್ನು ಸಾಕಷ್ಟು ತಿಂಗಳುಗಳ ಹಿಂದೆಯೇ ನಡೆಸಿದ್ದು ಹಲವು ಜನರ ಹತ್ತಿರ ತಲುಪಿದ್ದಾರೆ ಎಲ್ಲಾ ತಯಾರಿಗಳನ್ನು ನಡೆಸಿಕೊಂಡಿದ್ದಾರೆ .
ಚುನಾವಣೆಗೆ ಸಂಬಂಧಿಸಿದಂತೆ ಪದವೀಧರ ಮತದಾರರನ್ನು ಮುಟ್ಟಿ ತಮಗೆ ಮತ ನೀಡುವಂತೆ ಈಗಾಗಲೇ ಒಂದು ಬಾರಿ ಮನವಿ ಮಾಡಿಕೊಂಡಿದ್ದಾರೆ ಇಷ್ಟೆಲ್ಲಾ ತಯಾರಿ ನಡೆಸಿರುವ ಸರ್ಜಿ ಅವರಿಗೆ ಪಕ್ಷದ ಸಂಘಟನೆಯ ದೃಷ್ಟಿಯಿಂದ ಪಕ್ಷದಲ್ಲಿ ಓಡಾಡಿಕೊಂಡು ಬರುತ್ತಿರುವ ಅವರಿಗೆ ಬಿಜೆಪಿ ಗುರುತಿಸಿ ಉಪಾಧ್ಯಕ್ಷ ಸ್ಥಾನವನ್ನು ಈಗಾಗಲೇ ನೀಡಿದೆ ಆದರೆ ನೈರುತ್ಯ ಪದವೀಧರ ಕ್ಷೇತ್ರದ ಟಿಕೆಟ್ ನೀಡುತ್ತಾ ಕಾದು ನೋಡಬೇಕು.
ರಘುರಾಜ್ ಹೆಚ್.ಕೆ..9449553305.