
ಮಾಜಿ ಸಚಿವ ಬಿಜೆಪಿಯ ಹಿರಿಯ ಮುಖಂಡ ಶಿವಮೊಗ್ಗದ ಬಂಡಾಯ ಲೋಕಸಭಾ ಅಭ್ಯರ್ಥಿ ಕೆಎಸ್ ಈಶ್ವರಪ್ಪನವರು ಅಮಿತ್ ಶಾ ಕರೆ ಬೆನ್ನಲ್ಲೇ ಇಂದು ದೆಹಲಿಗೆ ಭೇಟಿಯಾಗಲು ತೆರಳಿದ್ದರು ಒಂದು ಹಂತದಲ್ಲಿ ರಾತ್ರಿ 10 ಗಂಟೆಗೆ ಬೇಟಿಗೆ ಸಮಯ ನಿಗದಿಯಾಗಿತ್ತು. ಆದರೆ ನಾಳೆ ಬೆಳಗ್ಗೆ ಭೇಟಿಯಾಗುತ್ತೇನೆ ಎಂದು ಅಮಿತ್ ಶಾ ಸೂಚನೆ ಕೊಟ್ಟ ಹಿನ್ನೆಲೆ ಬೆಳಿಗ್ಗೆ ಆಗೋಲ್ಲ ಆದರೆ ಇಂದೆ ಆಗುತ್ತೇನೆ ಬೆಳಗ್ಗೆ ನನಗೆ ಸ್ಥಳೀಯವಾಗಿ ಸಾಕಷ್ಟು ಕಾರ್ಯಕ್ರಮಗಳಿವೆ ಅಲ್ಲಿಗೆ ತೆರಳಬೇಕು ಎಂದು ಹೇಳುತ್ತಾ ವ್ಯಂಗ್ಯವಾಗಿ ರಾಘವೇಂದ್ರ ಸೋಲಿಸಲು ನನಗೆ ಪರೋಕ್ಷವಾಗಿ ಬೆಂಬಲ ನೀಡಿದ್ದಾರೆ ಎನ್ನುವ ರೀತಿಯಲ್ಲಿ ಮಾತನಾಡಿದ್ದಾರೆ ಎನ್ನಲಾಗುತ್ತಿದೆ.
ತಪ್ಪು ಸಂದೇಶ ಹೋಗುತ್ತದೆ ಎಂದು ಮೀಟಿಂಗ್ ನಿರಾಕರಿಸಿರಬಹುದು ಅಮಿತ್ ಶಾ :
ಈಶ್ವರಪ್ಪ ನಾನು ನಿಲ್ಲುವುದು ಸ್ಪಷ್ಟ ನಿಮಗೆ ಗೌರವ ಕೊಟ್ಟು ಅಲ್ಲಿಗೆ ಬರುತ್ತೇನೆ ಆದರೆ ನನ್ನ ನಿಲುವಿನಲ್ಲಿ ಬದಲಾವಣೆ ಇಲ್ಲ ಎಂದು ಕರೆ ಮಾಡಿದಾಗ ಹೇಳಿದ್ದರಿಂದ ಅಮಿತ್ ಶಾ ಒಂದುವೇಳೆ ಈಶ್ವರಪ್ಪನವರ ಭೇಟಿಯಾಗಿ ನನ್ನ ಮನವಲಿಕೆ ಯಶಸ್ವಿಯಾಗದಿದ್ದರೆ ತಪ್ಪು ಸಂದೇಶ ರವಾನೆ ಆದಂತಾಗುತ್ತದೆ ಎಂದು ಅರಿತು ಈ ಭೇಟಿಯನ್ನು ಮುಂದುಡಿರಬಹುದು ಎಂದು ಅಂದಾಜಿಸಲಾಗಿದೆ.
ಈಶ್ವರಪ್ಪನವರ ನಿಲುವು ಸ್ಪಷ್ಟ :
ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಪಕ್ಷೇತರವಾಗಿ ಈಶ್ವರಪ್ಪನವರು ಬಿ ವೈ ರಾಘವೇಂದ್ರ ವಿರುದ್ಧ ನಿಲ್ಲುವುದು ಸ್ಪಷ್ಟವಾಗಿದೆ.