
ಕೇಂದ್ರ ಗೃಹ ಸಚಿವ ಬಿಜೆಪಿಯ ಮುಖಂಡ ಅಮಿತ್ ಶಾ ಕರೆ ಬೆನ್ನಲ್ಲೇ ಇಂದು ದೆಹಲಿಗೆ ತೆರಳಿರುವ ಮಾಜಿ ಉಪ ಮುಖ್ಯಮಂತ್ರಿ ಬಿಜೆಪಿಯ ಹಿರಿಯ ಮುಖಂಡ ಈಶ್ವರಪ್ಪ ಮೀಟಿಂಗ್ ರಾತ್ರಿ 10 ಗಂಟೆಗೆ ಫಿಕ್ಸ್ ಆಗಿದ್ದು ಈ ಬೇಟಿ ಕುತೂಹಲ ಕೆರಳಿಸಿದ್ದು ಯಡಿಯೂರಪ್ಪ ಕುಟುಂಬದ ವಿರುದ್ಧ ಸಿಡಿದೆದ್ದಿರುವ ಈಶ್ವರಪ್ಪನವರ ಭಿನ್ನಮತ ಶಮನಮಾಡುವತ್ತ ಅಮಿತ್ ಶಾ ಯಶಸ್ವಿಯಾಗುತ್ತಾರ ಕಾದುನೋಡಬೇಕು.
ಈಶ್ವರಪ್ಪ ಬೇಡಿಕೆ ಸರಿಯಾಗಿದೆ ಯತ್ನಾಳ್..!
ಇನ್ನೊಂದೆಡೆ ಮಾತನಾಡಿರುವ ಯತ್ನಾಳ್ ಈಶ್ವರಪ್ಪನವರ ಬೇಡಿಕೆ ಸರಿಯಾಗಿದೆ ಕುಟುಂಬ ರಾಜಕಾರಣದಿಂದ ಬಿಜೆಪಿ ಪಕ್ಷ ರಾಜ್ಯ ಮತ್ತು ರಾಷ್ಟ್ರದಿಂದ ಹೊರಬರಬೇಕು ಆ ದಿಕ್ಕಿನಲ್ಲಿ ಇಂದಿನ ಅವರ ಭೇಟಿ ಕುತೂಹಲ ಕೆರಳಿಸಿದ್ದು ಅಮಿತ್ ಶಾ ಅವರಗೆ ಸೂಕ್ತ ಸ್ಥಾನಮಾನ ನೀಡಿ ಈಶ್ವರಪ್ಪನವರ ಮನವೊಲಿಸುತ್ತಾರೆ ಎನ್ನುವ ನಂಬಿಕೆ ಇದೆ ಎಂದಿದ್ದಾರೆ.
ಪಕ್ಷ ಸೂಚಿಸಿದರೆ ರಾಘವೇಂದ್ರ ಪರ ಚುನಾವಣಾ ಪ್ರಚಾರ ಹಾಗೆ ಈಶ್ವರಪ್ಪರ ಮನವಳಿಕೆಗೆ ಯತ್ನ ಯತ್ನಾಳ್:
ಸಂಸದ ರಾಘವೇಂದ್ರ ಪರ ಪ್ರಚಾರಕ್ಕೆ ಹೋಗುತ್ತೀರಾ ಎನ್ನುವ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಯತ್ನಾಳ್ ಪಕ್ಷ ಸೂಚಿಸಿದರೆ ಖಂಡಿತ ಹೋಗುತ್ತೇನೆ ಎಂದಿದ್ದಾರೆ ಹಾಗೆ ಈಶ್ವರಪ್ಪರ ಮನವಳಿಕೆಗೆ ಹೇಳಿದರೆ ಖಂಡಿತ ಮಾಡುತ್ತೇನೆ ಆದರೆ ಅವರ ಬೇಡಿಕೆ ಈಡೇರಬೇಕು ಎಂದಿದ್ದಾರೆ.