
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕುಟುಂಬದ ವಿರುದ್ಧ ಸಿಡಿದೆದ್ದಿರುವ ಈಶ್ವರಪ್ಪನವರು ತನ್ನ ಮಗ ಕಾಂತೇಶ್ ಗೆ ಹಾವೇರಿಯಲ್ಲಿ ಟಿಕೆಟ್ ತಪ್ಪಿಸಿದ್ದು ಯಡಿಯೂರಪ್ಪ ಕುಟುಂಬ ಹಾಗೆ ಯಡಿಯೂರಪ್ಪ ಕುಟುಂಬದವರು ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ ಆ ಕುಟುಂಬ ರಾಜಕಾರಣವನ್ನು ಕರ್ನಾಟಕದಿಂದ ತೊಲಗಿಸಬೇಕು ಯಡಿಯೂರಪ್ಪ ಕುಟುಂಬದಿಂದ ಬಿಜೆಪಿಯನ್ನು ಹೊರ ತರಬೇಕು ಎನ್ನುವ ಉದ್ದೇಶದಿಂದ ನಾನು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಲೋಕಸಭಾ ಕ್ಷೇತ್ರಕ್ಕೆ ನಿಲ್ಲುತ್ತಿದ್ದೇನೆ ಎಂದು ಯಡಿಯೂರಪ್ಪ ಕುಟುಂಬದ ವಿರುದ್ಧ ಮಾಜಿ ಸಚಿವ ಒಂದು ಕಾಲದ ಆಪ್ತ ಗೆಳೆಯ ಬಿಜೆಪಿ ಕಟ್ಟಿ ಬೆಳಿಸಿದವರಲ್ಲಿ ಪ್ರಮುಖರಾದ ಈಶ್ವರಪ್ಪನವರು ಸವಾಲ್ ಹಾಕಿದ್ದಾರೆ.
ಬಿಗ್ ಶಾಕ್ ನೀಡಲು ಮುಂದಾದ ಬಿಜೆಪಿ ಹೈಕಮಾಂಡ್ :
ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಯಡಿಯೂರಪ್ಪನವರ ಪುತ್ರ ಹಾಲಿ ಸಂಸದರಾದ ಬಿ ವೈ ರಾಘವೇಂದ್ರ ಅವರಿಗೆ ಬಿಜೆಪಿಯಿಂದ ಟಿಕೆಟ್ ನೀಡಲಾಗಿದೆ ಆದರೆ ಇದನ್ನು ಪ್ರಶ್ನಿಸಿ ಸ್ವತಃ ಈಶ್ವರಪ್ಪನವರು ಪಕ್ಷೇತರವಾಗಿ ಸ್ಪರ್ಧೆ ಮಾಡಿರುವುದು ಬಿಜೆಪಿ ಹೈಕಮಾಂಡ್ ವಲಯದಲ್ಲಿ ತೀವ್ರ ಚರ್ಚೆಗೆ ಒಳಗಾಗಿದೆ ಸಾಕಷ್ಟು ಜನ ಬಿಜೆಪಿ ನಾಯಕರು ಈಶ್ವರಪ್ಪ ನವರ ಮನವೊಲಿಸಲು ಪ್ರಯತ್ನಿಸಿದರು ಆ ಮನವೂಳಿಕೆ ವಿಫಲವಾಗಿದೆ ಸ್ವತಃ ರಾಘವೇಂದ್ರ ಈಶ್ವರಪ್ಪನವರಿಗೆ ಮಾಧ್ಯಮಗಳ ಮೂಲಕ ಕೇಳಿಕೊಂಡರು ಕೂಡ ಈಶ್ವರಪ್ಪನವರು ಇದಕ್ಕೆ ಒಪ್ಪಿಲ್ಲ .
ಇದನ್ನೆಲ್ಲಾ ಅರಿತ ಬಿಜೆಪಿಯ ಮುಖಂಡ ಹಾಗೂ ಕೇಂದ್ರದ ಗೃಹ ಸಚಿವರು ಆಗಿರುವ ಅಮಿತ್ ಶಾ ಈಶ್ವರಪ್ಪನವರಿಗೆ ಕರೆ ಮಾಡಿ ಚುನಾವಣೆಗೆ ನಿಲ್ಲದಂತೆ ಸೂಚಿಸಿದ್ದರು ಆದರೆ ನಾನು ಯಾವುದೇ ಕಾರಣಕ್ಕೂ ಚುನಾವಣೆ ಕಣದಿಂದ ಹಿಂದೆ ಸರಿಯುವುದಿಲ್ಲ ಎನ್ನುವ ಮಾತುಗಳನ್ನಾಡಿದರು ಯಾವುದಕ್ಕೂ ಬಂದು ಹೋಗಿ ಮಾತನಾಡೋಣ ಎಂದು ದೆಹಲಿಗೆ ಬರುವಂತೆ ಬುಲಾವ್ ನೀಡಿದ್ದರು ಅವರ ಕರೆಯ ಮೇರೆಗೆ ದೆಹಲಿಗೆ ಹೋದ ಈಶ್ವರಪ್ಪನವರಿಗೆ ನಿರಾಸೆ ಕಾದಿತ್ತು ಅಮಿತ್ ಶಾ ಈಶ್ವರಪ್ಪನವರು ಭೇಟಿ ಮಾಡಲಿಲ್ಲ ಇದ್ರಿಂದ ಮರಳಿ ವಾಪಸ್ ಬಂದ ಈಶ್ವರಪ್ಪನವರು ನಾನು ನಿಲ್ಲುವುದೇ ಅಮಿತ್ ಶಾ ಅವರಿಗೂ ಬೇಕಾಗಿದೆ ನಿಂತು ನೀನು ಗೆದ್ದು ಬಾ ಎನ್ನುವ ಸಂದೇಶವನ್ನು ಪರೋಕ್ಷವಾಗಿ ಹೇಳಿದ್ದಾರೆ ಎನ್ನುವ ಮಾತುಗಳನ್ನು ಆಡಿದ್ದರು .
ಆದರೆ ಇದೀಗ ಬಿಜೆಪಿ ಹೈಕಮಾಂಡ್ ಗೆ ಇದು ತಲೆ ನೋವಾಗಿದ್ದು ಒಂದು ಕಡೆ ಪಕ್ಷದ ಅಭ್ಯರ್ಥಿ ಇನ್ನೊಂದು ಕಡೆ ಸ್ವತಃ ಬಿಜೆಪಿ ಪಕ್ಷವನ್ನು ಕರ್ನಾಟಕದಲ್ಲಿ ಕಟ್ಟಿ ಬೆಳೆಸಿದ ಪ್ರಮುಖ ನಾಯಕರೇ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವುದು ಒಂದು ಬಹುದೊಡ್ಡ ರಾಷ್ಟ್ರೀಯ ಪಕ್ಷಕ್ಕೆ ಇರಿಸು ಮುರುಸಾಗಿರುವುದರಿಂದ ಈಶ್ವರಪ್ಪನವರನ್ನು ಪಕ್ಷದಿಂದ ಉಚ್ಚಾಟನೆ ಮಾಡುವ ಕ್ರಮ ಕೈಗೊಳ್ಳಲು ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ.
ಸದ್ಯದಲ್ಲಿ ಪಕ್ಷದಿಂದ ಈಶ್ವರಪ್ಪ ಉಚ್ಚಾಟನೆ ಆಗುವ ಸಾಧ್ಯತೆ ..!
ಬಿಜೆಪಿ ಪಕ್ಷದಿಂದ ಹೊರಬಂದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಗೆ ನಿಂತಿರುವ ಮಾಜಿ ಸಚಿವ ಬಿಜೆಪಿಯ ಹಿರಿಯ ಮುಖಂಡ ಈಶ್ವರಪ್ಪನವರನ್ನು ಪಕ್ಷದಿಂದ ಉಚ್ಚಾಟನೆ ಮಾಡುವ ಸಾಧ್ಯತೆಯಿದ್ದು ಅಧಿಕೃತವಾಗಿ ಘೋಷಣೆಯಾಗುವ ಸಾಧ್ಯತೆ ಇದೆ.