
ಜಿಲ್ಲಾ ಕಾಂಗ್ರೆಸ್ ಗೆ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಮಾಜಿ ಮಹಾನಗರ ಪಾಲಿಕೆ ಸದಸ್ಯರು ಹಾಗೂ ಕಾಂಗ್ರೆಸ್ಸಿನ ಹಿರಿಯ ಮುಖಂಡರು ಆಗಿರುವ ರಮೇಶ್ ಹೆಗ್ಡೆ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾದ ವಿನಯ್ ಕುಮಾರ್ ಸೂರಕೆ ಅವರು ಆಯ್ಕೆ ಮಾಡಿ ಆದೇಶ ನೀಡಿದ್ದಾರೆ.
ಹಾಗೂ ಹಿರಿಯ ಪತ್ರಕರ್ತರು ಕಾಂಗ್ರೆಸ್ ಮುಖಂಡರು ಆದ ಜಿ ಪದ್ಮನಾಭ ಅವರನ್ನ ಕರ್ನಾಟಕ ರಾಜ್ಯ ಅಹಿಂದ (ಅಲ್ಪಸಂಖ್ಯಾತರ, ಹಿಂದುಳಿದವರ, ದಲಿತ ಒಕ್ಕೂಟ) ಶಿವಮೊಗ್ಗ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಯನ್ನಾಗಿ ಕರ್ನಾಟಕ ಅಹಿಂದ ಸಂಘಟನೆಯ ರಾಜ್ಯ ಅಧ್ಯಕ್ಷರಾದ ಪ್ರಭುಲಿಂಗ ಎಲ್ ದೊಡ್ಮನಿ ರವರ ನಿರ್ದೇಶನದ ಮೇರೆಗೆ ಅಹಿಂದ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷರಾದ ಸಿ ಎಸ್ ಚಂದ್ರಭೂಪಾಲ್ ಅವರು ಆಯ್ಕೆ ಮಾಡಿ ಆದೇಶ ನೀಡಿದ್ದಾರೆ.