
ಬೆಂಗಳೂರು>ಇಂದು ಗಣೇಶ ಚತುರ್ಥಿ ಸಂಭ್ರಮ. ನಾಡಿನೆಲ್ಲೆಡೆ ಕೊರೊನಾ ಭಯದ ನಡುವೆ, ಒಂದಷ್ಟು ಷರತ್ತುಗಳ ನಡುವೆ ಗಣೇಶನನ್ನ ಕೂರಿಸಿ ಸಂಭ್ರಮಿಸುತ್ತಿದ್ದಾರೆ.
ಮನೆ ಮನೆಗಳಲ್ಲಿ ಗಣೇಶನ ಮೂರ್ತಿ ರಾರಾಜಿಸುತ್ತಿದೆ. ಮಾಜಿ ಪ್ರಧಾನಿ ದೇವೆಗೌಡರ ಮನೆಯಲ್ಲೂ ಗಣಪತಿ ಹಬ್ಬವನ್ನ ಆಚರಣೆ ಮಾಡಲಾಗಿದೆ.
ಪ್ರತಿ ವರ್ಷದಂತೆ ಈ ವರ್ಷವೂ ದೇವೇಗೌಡ ಅವರ ಮನೆಯಲ್ಲಿ ಗಣೇಶನ ಮೂರ್ತಿಯನ್ನಿಟ್ಟು ಪೂಜೆ ಸಲ್ಲಿಸಿದ್ದಾರೆ. ಪತ್ನಿ ಚೆನ್ನಮ್ಮ ಹಾಗೂ ದೇವೇಗೌಡ ಅವರು ವಿಘ್ನ ವಿನಾಶಕನಿಗೆ ಮೊದಲ ಪೂಜೆ ಅರ್ಪಿಸಿದ್ದಾರೆ.
ಪದ್ಮನಾಭನಗರದ ನಿವಾಸದಲ್ಲಿ ಗಣಪನನ್ನಿಟ್ಟು ಪೂಜೆ ಸಲ್ಲಿಸಿದ್ದಾರೆ. ಈ ವಿಶೇಷ ಪೂಜೆಯಲ್ಲಿ ಕುಟುಂಬಸ್ಥರು ಭಾಗಿಯಾಗಿದ್ದಾರೆ. ಹೆಣ್ಣು ಮಕ್ಕಳು ಕೂಡ ಪೂಜೆ ಸಲ್ಲಿಸಿದ್ದಾರೆ.
ವರದಿ ..ರಘುರಾಜ್ ಹೆಚ್. ಕೆ…
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ…9449553305/7892830899…