
ತೀರ್ಥಹಳ್ಳಿ: ತಾಲೂಕಿನ ಮಾಲೂರು ಪೊಲೀಸ್ ಠಾಣೆಯ ಪಕ್ಕದಲ್ಲಿ ಇರುವ ಪೊಲೀಸ್ ಕ್ವಾರ್ಟರ್ಸ್ ನ ಹಿಂಭಾಗದಲ್ಲಿ ಬೆಲೆಬಾಳುವ ಏಳು ಟೀಕ್ ವುಡ್ ಪೀಸ್ ಗಳು ಸಿಕ್ಕಿದ್ದು ಇದು ಯಾರದು..? ಇದರ ಹಿಂದೆ ಯಾರಿದ್ದಾರೆ..? ಆ ಪೊಲೀಸ್ ಪೇದೆಯ ಪಾತ್ರ ಇದರಲ್ಲಿ ಏನು..? ಎನ್ನುವ ಪ್ರಶ್ನೆ ಅರಣ್ಯ ಇಲಾಖೆಯಲ್ಲಿ ಕಾರ್ಯಾಚರಣೆ ಕೈಗೊಂಡ ಅಧಿಕಾರಿಗಳಲ್ಲಿ ಮೂಡಿದೆ.
ಏನಿದು ಪ್ರಕರಣ:
ಖಚಿತ ಮಾಹಿತಿ ಆಧರಿಸಿ ಶಿವಮೊಗ್ಗ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ತೀರ್ಥಹಳ್ಳಿ ತಾಲೂಕಿನ ಮಾಳೂರು ಪೊಲೀಸ್ ಠಾಣೆಯ ಪಕ್ಕದಲ್ಲಿರುವ ಕ್ವಾರ್ಟರ್ಸ್ ಹಿಂಬಾಗದಲ್ಲಿ ಬೆಲೆಬಾಳುವ 7 ಟೀಕ್ ವುಡ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಯಾರದು ಈ ಮರದ ತುಂಡುಗಳು ..?
ಮರದ ತುಂಡುಗಳನ್ನು ವಶಪಡಿಸಿಕೊಂಡ ಅಧಿಕಾರಿಗಳಿಗೆ ಶಾಕ್ ಆಗಿದೆ ಪೊಲೀಸ್ ಠಾಣೆಯ ಪಕ್ಕದಲ್ಲಿರುವ ಕ್ವಾಟ್ರಸ್ ನ ಹಿಂಭಾಗದಲ್ಲಿ ಈ ಮರದ ತುಂಡುಗಳು ಸಿಕ್ಕಿರುವುದು ಅದನ್ನು ತಂದಿರುವುದು ಯಾರು..? ತಂದಿರುವುದು ಏಕೆ ..?ಇದರ ಹಿಂದೆ ಯಾರ ಕೈವಾಡವಿದೆ ಅವರಿಗೆ ಸಿಕ್ಕ ಮಾಹಿತಿ ಆಧಾರದ ಮೇಲೆ ಕೇಳಿ ಬರುತ್ತಿರುವ ಆ ಪೊಲೀಸ್ ಪೇದೆಯ ಪಾತ್ರ ಇದರಲ್ಲಿ ಎಷ್ಟಿದೆ ..?ಆತನೇ ಇದನ್ನು ತಂದನಾ..? ಎನ್ನುವ ಸಾಕಷ್ಟು ಅನುಮಾನಗಳು ಇದರಲ್ಲಿ ಹುಟ್ಟು ಹಾಕಿದೆ.
ಅರಣ್ಯ ಇಲಾಖೆ ಅಧಿಕಾರಿಗಳ ಸಮಗ್ರ ತನಿಖೆಯಿಂದ ಎಲ್ಲಾ ಸತ್ಯವೂ ಹೊರ ಬರಬೇಕಾಗಿದೆ.
ಈ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಡಿಆರ್‌ಎಫ್ ಓ ಅಧಿಕಾರಿಗಳಾದ ಹನುಮಂತಪ್ಪ, ದಾನೇಶ್, ಪ್ರಶಾಂತ್, ಮೋಹನ್ ಅವರನ್ನು ಒಳಗೊಂಡ ತಂಡ ಪಾಲ್ಗೊಂಡಿತ್ತು.
ರಘುರಾಜ್ ಹೆಚ್. ಕೆ..9449553305.