
ತೀರ್ಥಹಳ್ಳಿ: ದಿನಾಂಕ 12 /4/ 2024 ರಂದು ತಾಲೂಕಿನ ಮಾಲೂರು ಪೊಲೀಸ್ ಠಾಣೆಯ ಪಕ್ಕದಲ್ಲಿ ಇರುವ ಪೊಲೀಸ್ ಕ್ವಾರ್ಟರ್ಸ್ ನ ಹಿಂಭಾಗದಲ್ಲಿ ಬೆಲೆಬಾಳುವ ಏಳು ಟೀಕ್ ವುಡ್ ಪೀಸ್ ಗಳು ಸಿಕ್ಕಿದ್ದವು ಇದು ಯಾರದು..? ಇದರ ಹಿಂದೆ ಯಾರಿದ್ದಾರೆ..? ಆ ಪೊಲೀಸ್ ಪೇದೆಯ ಪಾತ್ರ ಇದರಲ್ಲಿ ಏನು..? ಎನ್ನುವ ಪ್ರಶ್ನೆ ಅರಣ್ಯ ಇಲಾಖೆಯಲ್ಲಿ ಕಾರ್ಯಾಚರಣೆ ಕೈಗೊಂಡ ಅಧಿಕಾರಿಗಳಲ್ಲಿ ಮೂಡಿದೆ
ಮರದ ತುಂಡುಗಳನ್ನು ವಶಪಡಿಸಿಕೊಂಡ ಅಧಿಕಾರಿಗಳಿಗೆ ಶಾಕ್ ಆಗಿದೆ ಪೊಲೀಸ್ ಠಾಣೆಯ ಪಕ್ಕದಲ್ಲಿರುವ ಕ್ವಾಟ್ರಸ್ ನ ಹಿಂಭಾಗದಲ್ಲಿ ಈ ಮರದ ತುಂಡುಗಳು ಸಿಕ್ಕಿರುವುದು ಅದನ್ನು ತಂದಿರುವುದು ಯಾರು..? ತಂದಿರುವುದು ಏಕೆ ..?ಇದರ ಹಿಂದೆ ಯಾರ ಕೈವಾಡವಿದೆ ಅವರಿಗೆ ಸಿಕ್ಕ ಮಾಹಿತಿ ಆಧಾರದ ಮೇಲೆ ಕೇಳಿ ಬರುತ್ತಿರುವ ಆ ಪೊಲೀಸ್ ಪೇದೆಯ ಪಾತ್ರ ಇದರಲ್ಲಿ ಎಷ್ಟಿದೆ ..?ಆತನೇ ಇದನ್ನು ತಂದನಾ..? ಎನ್ನುವ ಸಾಕಷ್ಟು ಅನುಮಾನಗಳು ಇದರಲ್ಲಿ ಹುಟ್ಟು ಹಾಕಿದೆ. ಅರಣ್ಯ ಇಲಾಖೆ ಅಧಿಕಾರಿಗಳ ಸಮಗ್ರ ತನಿಖೆಯಿಂದ ಎಲ್ಲಾ ಸತ್ಯವೂ ಹೊರ ಬರಬೇಕಾಗಿದೆ. ಎನ್ನುವ ಸುದ್ದಿಯನ್ನು ನ್ಯೂಸ್ ವಾರಿಯರ್ಸ್ ಪತ್ರಿಕೆ ಬಿತ್ತರ ಮಾಡಿತ್ತು.
ಈ ಸುದ್ದಿಯ ಬೆನ್ನಲ್ಲೇ ಖಡಕ್ ಆದೇಶ ಹೊರಡಿಸಿದ ಎಸ್ ಪಿ ಮಿಥುನ್ ಕುಮಾರ್ ಜಿ ಕೆ :
ಈ ಸುದ್ದಿಯ ಬೆನ್ನಲ್ಲೇ ಮಾಳೂರು ಪೊಲೀಸ್ ಠಾಣೆಯ ಕ್ವಾರ್ಟರ್ಸ್ ಹಿಂಭಾಗದಲ್ಲಿ ಏಳು ಟೀಕ್ ವುಡ್ ಫೀಸ್ ಗಳು ಸಿಕ್ಕಿದ್ದು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿಎಸ್ಐ ಸಿದ್ದಪ್ಪ ಹಾಗೂ ಎಸ್ ಬಿ ಕಾನ್ಸ್ಟೇಬಲ್ ಪ್ರದೀಪ್ ಎನ್ನುವ ಇಬ್ಬರನ್ನು ಕರ್ತವ್ಯ ಲೋಪದಡಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಮಿಥುನ್ ಕುಮಾರ್ ಜಿ ಕೆ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಡಿಆರ್‌ಎಫ್ ಓ ಅಧಿಕಾರಿಗಳಾದ ಹನುಮಂತಪ್ಪ, ದಾನೇಶ್, ಪ್ರಶಾಂತ್, ಮೋಹನ್ ಅವರನ್ನು ಒಳಗೊಂಡ ತಂಡ ಪಾಲ್ಗೊಂಡಿತ್ತು.
ಖಚಿತ ಮಾಹಿತಿ ಆಧರಿಸಿ ಶಿವಮೊಗ್ಗ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ತೀರ್ಥಹಳ್ಳಿ ತಾಲೂಕಿನ ಮಾಳೂರು ಪೊಲೀಸ್ ಠಾಣೆಯ ಪಕ್ಕದಲ್ಲಿರುವ ಕ್ವಾರ್ಟರ್ಸ್ ಹಿಂಬಾಗದಲ್ಲಿ ಬೆಲೆಬಾಳುವ 7 ಟೀಕ್ ವುಡ್ ಗಳನ್ನು ವಶಪಡಿಸಿಕೊಂಡಿದ್ದರು.
ಅರಣ್ಯ ಇಲಾಖೆ ಅಧಿಕಾರಿಗಳ ಸಮಗ್ರ ತನಿಖೆಯಿಂದ ಈ ಬೆಲೆಬಾಳುವ ಮರಗಳು ಯಾರದು..? ಇದನ್ನು ತಂದವರು ಯಾರು..? ಇದರಲ್ಲಿ ಯಾರ ಕೈವಾಡವಿದೆ ಎನ್ನುವುದು ಹೊರಬರಬೇಕಾಗಿದೆ.
ರಘುರಾಜ್ ಹೆಚ್.ಕೆ..9449553305.