Wednesday, April 30, 2025
Google search engine
Homeಶಿವಮೊಗ್ಗಆರೋಗ್ಯಡಾ.ಬಿ ಆರ್ ಅಂಬೇಡ್ಕರ್ ಜಯಂತಿಯನ್ನು ವಿಶಿಷ್ಟವಾಗಿ ಆಚರಿಸಿದ ತೀರ್ಥಹಳ್ಳಿ ಸರ್ಕಾರಿ ನೌಕರರ ಸಂಘ..!

ಡಾ.ಬಿ ಆರ್ ಅಂಬೇಡ್ಕರ್ ಜಯಂತಿಯನ್ನು ವಿಶಿಷ್ಟವಾಗಿ ಆಚರಿಸಿದ ತೀರ್ಥಹಳ್ಳಿ ಸರ್ಕಾರಿ ನೌಕರರ ಸಂಘ..!


ಡಾ.ಬಿ ಆರ್ ಅಂಬೇಡ್ಕರ್ ಎಲ್ಲರಿಗೂ ಚಿರಪರಿಚಿತವಾದ ಬಹು ದೊಡ್ಡ ಹೆಸರು. ಆದರೆ ಅವರ ಘನ ವ್ಯಕ್ತಿತ್ವದ ಪರಿಚಯ ಎಷ್ಟು ಜನರಿಗಿದೆಯೋ ಗೊತ್ತಿಲ್ಲ. ದೃಷ್ಟಿ ಇಲ್ಲದಿರುವವನು ಆನೆಯನ್ನು ವರ್ಣಿಸಿದಂತೆ ತಮ್ಮ ತಮ್ಮ ಗ್ರಹಿಕೆಯ ಮಿತಿಯಲ್ಲಷ್ಟೇ ಅವರನ್ನು ಗ್ರಹಿಸಿದವರೇ ಹೆಚ್ಚಿರಬಹುದು. ಅವರ ಧೀಮಂತ ವ್ಯಕ್ತಿತ್ವದ ಪರಿಚಯವಾಗಬೇಕಿದ್ದರೆ ಅಂಬೇಡ್ಕರ್ ರವರನ್ನು ಸಾಕಷ್ಟು ಓದಿಕೊಳ್ಳಬೇಕು. ಬಹುತೇಕರಿಗೆ ಅಷ್ಟೆಲ್ಲಾ ಓದುವ ತಾಳ್ಮೆಯಾಗಲಿ, ಕುತೂಹಲವಾಗಲಿ ಇರಲಿಕ್ಕಿಲ್ಲ. ಅಂತವರಾದರೂ ಎಫ್ ಹೆಚ್ ಜಕ್ಕಪ್ಪನವರ ಅನುವಾದಿಸಿದ “ಪುಸ್ತಕ ಮನೆ” ಪ್ರಕಟಿತ ಅವರ ಈ ಭಾಷಣವನ್ನಾದರೂ ಓದಿದರೆ ಅಂಬೇಡ್ಕರ್ ಎಂತಹ ಮಹಾನ್ ವ್ಯಕ್ತಿಯಾಗಿದ್ದರು ಎಂಬ ಅರಿವಾಗುವುದು ಖಂಡಿತ.ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ ಮಹೋನ್ನತ ವ್ಯಕ್ತಿತ್ವದ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಕೂಡ ಸಂವಿದಾನ ಶಿಲ್ಪಿಗೆ ನಾವು ಸಲ್ಲಿಸುವ ಗೌರವ ಎಂದು ನಾವು ಭಾವಿಸಿದ್ದೇವೆ. ಅದಕ್ಕಾಗಿ ಕಳೆದ ಕೆಲ ವರ್ಷಗಳಿಂದ ಅವರ ಜನ್ಮ ದಿನದಂದು ವಿಶೇಷವಾಗಿ ಅವರ ಈ ಭಾಷಣದ ಪ್ರತಿಗಳನ್ನು ಹಂಚುವ ಮೂಲಕ ಅಂಬೇಡ್ಕರ್ ರವರ ಬಗ್ಗೆ ಅರಿವು ಹೆಚ್ಚಿಸುವ ಪುಟ್ಟ ಪ್ರಯತ್ನವನ್ನು ನಮ್ಮ ಸಂಘ ಮಾಡುತ್ತಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘ ತೀರ್ಥಹಳ್ಳಿ ಶಾಖೆಯ ಅಧ್ಯಕ್ಷ ಟಿ ವಿ ಸತೀಶ ನುಡಿದರು. ಅವರು ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಡಾ.ಬಿ ಆರ್ ಅಂಬೇಡ್ಕರ್ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಸಂಘದ ಕಾರ್ಯದರ್ಶಿ ರಾಮು ಬಿ, ಅಂಬೇಡ್ಕರ್ ರವರ ಬಗ್ಗೆ, ಅವರ ವಿಚಾರಧಾರೆಯ ಬಗ್ಗೆ ಯುವ ಪೀಳಿಗೆಗೆ ಅರಿವು ಮೂಡಿಸುವುದು ನಮ್ಮೆಲ್ಲರ ಜವಬ್ದಾರಿಯಾಗಿದೆ. ಈ ದಿಸೆಯಲ್ಲಿ ನಮ್ಮ ವ್ಯಾಪ್ತಿಯಲ್ಲಿ ನಡೆಸುತ್ತಿರುವ ನಮ್ಮ ಈ ಪುಟ್ಟ ಪ್ರಯತ್ನಗಳು ಒಂದಿಷ್ಟು ಸಾರ್ಥಕತೆಯ ಭಾವ ತಂದಿದೆ ಎಂದರು.

ಉಪಾಧ್ಯಕ್ಷ ಎಲ್ಲಪ್ಪ ವಡ್ಡರ್ ಮಾತನಾಡಿ, ಡಾ. ಅಂಬೇಡ್ಕರ್ ರವರ ಬದುಕು ನಮಗೆ ಆದರ್ಶವಾಗಬೇಕು. ನಮ್ಮ ಯುವ ಜನತೆ ಅವರ ತತ್ವ ಆದರ್ಶಗಳಿಂದ ಪ್ರೇರೇಪಿತರಾಗಬೇಕು ಎಂದರು.ಸಂಘಟನಾ ಕಾರ್ಯದರ್ಶಿ ವೆಂಕಟೇಶ್, ನವೀನ್, ಮಂಜುನಾಥ, ಅಕ್ಷಯ್,ಆದಿತ್ಯ, ರಾಜೇಶ್ವರಿ, ಕಾಡಪ್ಪ ಗೌಡ, ಮಲ್ಯ ಮತ್ತಿತರರಿದ್ದ ಕಾರ್ಯಕ್ರಮದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ರವರಿಗೆ ಅರವತ್ತು ವರ್ಷ ತುಂಬಿದ ಸಂದರ್ಭದಲ್ಲಿ ಹಮ್ಮಿಕೊಂಡಿದ್ದ ನಾಗರೀಕ‌ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾಡಿದ್ದ ಭಾಷಣದ ಕನ್ನಡ ಅನುವಾದಗಳ ಪ್ರತಿಯನ್ನು ಹಂಚುವ ಮೂಲಕ ಅಂಬೇಡ್ಕರ್ ಜಯಂತಿ ವಿಶಿಷ್ಟವಾಗಿ ಆಚರಿಸಿತು.

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...