
ಶಿವಮೊಗ್ಗ: ನಗರದ ಮಲೆನಾಡು ಮರ್ಚೆಂಟ್ಸ್ ಮನೋರಂಜನಾ ಕೇಂದ್ರದ ಮೇಲೆ ಶಿವಮೊಗ್ಗ ಪೊಲೀಸ್ ದಾಳಿ ನಡೆಸಿದ್ದು ಅಂದರ್ ಬಾಹರ್ ಆಡುತ್ತಿದ್ದ 19 ಜನರನ್ನು ವಶಪಡಿಸಿಕೊಂಡಿದ್ದಾರೆ.
ಇಂದು ಸಂಜೆ ಅಂದರ್ ಬಾಹರ್ ಆಡುತ್ತಿದ್ದಾರೆ ಎಂದು ಬಂದ ಖಚಿತ ಮಾಹಿತಿಯ ಮೇರೆಗೆ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಶಿವಮೊಗ್ಗ ಟೌನ್ ಬಿ.ಹೆಚ್ ರಸ್ತೆಯ
ಮಲೆನಾಡು ಸಿರಿಯ ಮುಂಬಾಗ ಹರ್ಷ ಆರ್ಕಿಡ್ ನ 2ನೇ ಮಹಡಿಯಲ್ಲಿರುವ ಮಲೆನಾಡು ಮರ್ಚೆಂಟ್ಸ್ ಮನೋರಂಜನಾ ಕೇಂದ್ರದಲ್ಲಿ ಎಸ್
ಪಿ ಮಿಥುನ್ ಕುಮಾರ್ ಜಿ ಕೆ,
ಹೆಚ್ಚುವರಿ ಪೊಲೀಸ್ ಅಧಿಕ್ಷಕರಾದ ಅನಿಲ್ ಕುಮಾರ್ ಭೂಮಾರೆಡ್ಡಿ
ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1 ಶಿವಮೊಗ್ಗ ಜಿಲ್ಲೆ ಮತ್ತು ಕಾರಿಯಪ್ಪ ಎ.ಜಿ,ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ರವರ ಮಾರ್ಗದರ್ಶದಲ್ಲಿ, ಬಾಬು ಅಂಜನಪ್ಪ ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ ಎ ಉಪ ವಿಭಾಗ ಮತ್ತು ಪ್ರಕಾಶ್
ಪೊಲೀಸ್ ಉಪಾಧೀಕ್ಷಕರು, ಡಿಎಆರ್ ಶಿವಮೊಗ್ಗ ರವರ ನೇತೃತ್ವದ
ಲ್ಲಿ, ತಿಪ್ಪೇಸ್ವಾಮಿ ಪಿಐ ಸಿಇಎನ್ ಪೊಲೀಸ್ ಠಾಣೆ, ಶ್ರೀಶೈಲ ಪಟ್ಟಣ ಶೆಟ್ಟಿ ಪಿಎಸ್ಐ ಡಿಸಿಆರ್. ಬಿ ಶಿವಮೊಗ್ಗ ಮತ್ತು ಸಿಬ್ಬಂಧಿಗಳನ್ನೊಳಗೊಂಡ ತಂಡವು ಸ್ಥಳಕ್ಕೆ ಹೋಗಿ ದಾಳಿ ನಡೆಸಿ, ಇಸ್ಪೀಟು ಜೂಜಾಟ ಆಡುತ್ತಿದ್ದ ಒಟ್ಟು 19 ಜನ ಆರೋಪಿತರನ್ನು ದಸ್ತಗಿರಿ ಮಾಡಿ, ಜೂಜಾಟದಲ್ಲಿ ಪಣವಾಗಿಟ್ಟಿದ್ದ ಒಟ್ಟು 1,25,850/- ರೂ ನಗದು ಹಣ, ಟೋಕನ್ ಗಳು ಮತ್ತು ಇಸ್ಪೀಟು ಎಲೆಗಳನ್ನು ಅಮಾನತ್ತು ಪಡಿಸಿಕೊಂಡು, ಆರೋಪಿತರ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣಾ ಗುನ್ನೆ ಸಂಖ್ಯೆ 0147/2024 ಕಲಂ 79, 80 ಕೆ.ಪಿ ಕಾಯ್ದೆ ಅಡಿಯಲ್ಲಿ ಪ್ರಕರಣ
ದಾಖಲಿಸಿದ್ದಾರೆ.
ಬಿಜೆಪಿಯ ಮಾಜಿ ಕಾರ್ಪೊರೇಟರ್ ಮಾಲಿಕತ್ವದ ಇಸ್ಪೀಟ್ ಅಡ್ಡೆ ಇದಾಗಿದ್ದು ನಿರಂತರವಾಗಿ ಇಲ್ಲಿ ಇಸ್ಪೀಟ್ ಆಟ ನಡೆಯುತ್ತಿದ್ದು ಇಂದು ಖಚಿತ ಮಾಹಿತಿಯ ಮೇರೆಗೆ ಎಸ್ಪಿ ನೇತೃತ್ವದಲ್ಲಿ ದಾಳಿ ನಡೆದಿದೆ.