
ಬಿಜೆಪಿಯ ರೆಬೆಲ್ ನಾಯಕ ಕೆಎಸ್ ಈಶ್ವರಪ್ಪ ಬಿಜೆಪಿಗೆ ದೊಡ್ಡ ತಲೆ ನೋವಾಗಿದ್ದಾರೆ ಬಿಜೆಪಿಗೆ ಬಂಡಾಯವಾಗಿ ತಾವೇ ಸಂಸದ ರಾಘವೇಂದ್ರ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ನಿಂತಿದ್ದಾರೆ. ಯಾರ ಮನವಲಿಕೆಗೂ ಬಗ್ಗದೆ ಮೂರು ಬಾರಿ ನಾಮಪತ್ರ ಸಲ್ಲಿಸಿ ತಮ್ಮ ಉಮೇದುವಾರಿಕೆಯನ್ನುಸಾಬೀತುಪಡಿಸಿದ್ದಾರೆ.
ಈಶ್ವರಪ್ಪ ವೋಟ್ ಬ್ಯಾಂಕ್ ಕೀಳಲು ಬಿಜೆಪಿ ರಣತಂತ್ರ :
ಹಲವು ಕಡೆ ಒಂದೇ ಹೆಸರಿನ ಹಲವು ಅಭ್ಯರ್ಥಿಗಳನ್ನು ನಿಲ್ಲಿಸಿ ರಣತಂತ್ರಗಳನ್ನು ಬಳಸಿದ ಉದಾಹರಣೆಗಳು ಸಾಕಷ್ಟು ಇದೆ ಇದೇ ರೀತಿ ಶಿವಮೊಗ್ಗದಲ್ಲೂ ಕೂಡ ಕೆಎಸ್ ಈಶ್ವರಪ್ಪನವರ ವಿರುದ್ಧ ಅದೇ ಹೆಸರಿನ ಇನ್ನೊಬ್ಬ ವ್ಯಕ್ತಿಯನ್ನು ಕಣಕ್ಕಿಳಿಸಿ ಬಿಜೆಪಿ ತನ್ನ ರಣತಂತ್ರ ವನ್ನು ರೂಪಿಸಿದೆಯಾ..?!
ಯಾರು ಈ ಶಿಕಾರಿಪುರದ ಶಿಕಾರಿ ವೀರ..?!
ಪಕ್ಷೇತರ ಅಭ್ಯರ್ಥಿಯಾಗಿ ಡಿ.ಎಸ್.ಈಶ್ವರಪ್ಪ ಎಂಬುವವರು ಇವತ್ತು ನಾಮಪತ್ರ ಸಲ್ಲಿಸಿದ್ದಾರೆ. ನಾಲ್ವರು ಸೂಚಕರೊಂದಿಗೆ ಆಗಮಿಸಿ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ ಅವರಿಗೆ ನಾಮಪತ್ರ ಸಲ್ಲಿಸಿದ್ದಾರೆ. ಡಿ.ಎಸ್.ಈಶ್ವರಪ್ಪ ಶಿಕಾರಿಪುರ ಪಟ್ಟಣದ ಮಾಯಪ್ಪನ ಕೇರಿಯವರು ಎಂದು ತಿಳಿದು ಬಂದಿದೆ.
ಈಶ್ವರಪ್ಪನವರ ವೋಟ್ ಬ್ಯಾಂಕ್ ಕೀಳಲು ಅದೇ ಹೆಸರಿನ ಇನ್ನೊಬ್ಬ ವ್ಯಕ್ತಿಯನ್ನು ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲಿಸುವ ಮೂಲಕ ಬಿಜೆಪಿ ಪಕ್ಷ ಪರೋಕ್ಷವಾಗಿ ಈಶ್ವರಪ್ಪನವರನ್ನು ಮಣಿಸಲು ಪ್ಲಾನ್ ರೂಪಿಸುತ್ತಿದ್ಯಾ..? ಇದು ವರ್ಕೌಟ್ ಆಗುತ್ತಾ..? ಕಾದು ನೋಡಬೇಕು…