
ಮೋದಿ ಭಾವಚಿತ್ರ ಪ್ರಕರಣ ಈಗ ನ್ಯಾಯಾಲಯದಲ್ಲಿ ಇರುವುದು ಎಲ್ಲರ ಗಮನದಲ್ಲಿದೆ ಮೋದಿ ಭಾವಚಿತ್ರ ಬೇಕು ಎಂದು ಈಶ್ವರಪ್ಪ ಮೋದಿ ಭಾವಚಿತ್ರ ಹಾಕಿಕೊಳ್ಳಬಾರದು ಎಂದು ಭಾರತೀಯ ಜನತಾ ಪಾರ್ಟಿ ನಡುವೆ ವಾಕ್ ಸಮರ ತಾರಕಕ್ಕೇರಿದ್ದು ನಂತರ ಅದು ನ್ಯಾಯಾಲಯದ ಮೆಟ್ಟಿಲೇರಿದೆ .
ಇಂದು ನ್ಯಾಯಾಲಯದಲ್ಲಿ ಏನೇನಾಯ್ತು..?!
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಭಾರತೀಯ ಜನತಾ ಪಾರ್ಟಿಯ ಪರವಾಗಿ ಜಿಲ್ಲಾಧ್ಯಕ್ಷರಾದ ಮೇಘರಾಜ್ ಅವರು ಯಾವುದೇ ಕಾರಣಕ್ಕೂ ಈಶ್ವರಪ್ಪನವರಿಗೆ ಮೋದಿ ಭಾವಚಿತ್ರ ಬಳಸಲು ಅವಕಾಶ ನೀಡಬಾರದು ಎಂದು ನ್ಯಾಯಾಲಯವನ್ನು ಕೋರಿಕೊಂಡಿದ್ದರು ನ್ಯಾಯಾಲಯ ಕೂಡ ಈಶ್ವರಪ್ಪನವರಿಗೆ ಇದಕ್ಕೆ ಸಂಬಂಧಪಟ್ಟಂತೆ ಉತ್ತರವನ್ನು ಕೇಳಿದ್ದು ಈಶ್ವರಪ್ಪನವರು ಸಮಯಾವಕಾಶ ಕೇಳಿದ್ದರು ನ್ಯಾಯಾಲಯ ಇಂದಿನವರೆಗೆ ಸಮಯಾವಕಾಶ ನೀಡಿತ್ತು ಇಂದು ನ್ಯಾಯಾಲಯ ಭಾರತೀಯ ಜನತಾ ಪಾರ್ಟಿಯ ಸಲ್ಲಿಸಿರುವ ಕೇಸ್ ಅನ್ನು ಕಾಯ್ದಿರಿಸಿ ಕೆ ಎಸ್ ಈಶ್ವರಪ್ಪ ನವರು ಸದರಿ ಕೇಸ್ ನಲ್ಲಿ ಮಧ್ಯಂತರ ಅರ್ಜಿಸಲ್ಲಿಸಿದ್ದು ಸದರಿ ಮಧ್ಯಂತರ ಅರ್ಜಿಗೆ ಬಿಜೆಪಿಯವರಿಗೆ ತಕರಾರು ಅರ್ಜಿ ಸಲ್ಲಿಸಲು ನಾಳೆ ಗೆ ಅವಕಾಶ ನೀಡಿದೆ.