Wednesday, April 30, 2025
Google search engine
Homeಬಿಜೆಪಿಯಡಿಯೂರಪ್ಪ ಕುಟುಂಬ ಬಂಗಾರಪ್ಪ ಋಣದಲ್ಲಿದೆ ಸಚಿವ ಮಧು ಬಂಗಾರಪ್ಪ..!

ಯಡಿಯೂರಪ್ಪ ಕುಟುಂಬ ಬಂಗಾರಪ್ಪ ಋಣದಲ್ಲಿದೆ ಸಚಿವ ಮಧು ಬಂಗಾರಪ್ಪ..!

ಇಂದು ತಮ್ಮ ಸ್ವ ಗೃಹದಲ್ಲಿ  ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಮಧು ಬಂಗಾರಪ್ಪನವರು ಕಾನ್ಫಿಡೆನ್ಸ್ ಲೆವೆಲ್ ಹೆಚ್ಚಾಗಿದೆ. ಯೋಜನೆ ಮೀರಿ ಜನರ ಆಶೀರ್ವಾದ ಮಾಡುತ್ತಿದ್ದಾರೆ ಗೀತಕ್ಕನ ಗೆಲುವು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಮತದಾರರ ವಿಶ್ವಾಸ ದೊಡ್ಡದಿದೆ ಎಂದರು. ಸುಳ್ಳು ಪ್ರಚಾರದಿಂದ ಎಲ್ಲದೂ ಹಾಳು. ಮೋದಿಯಿಂದ ಇಂಥ ಅನಾಹುತ ನಡೆಯುತ್ತಿದೆ. ಈಗಿನ ಸಂಸದರು ಕೂಡ ಅದನ್ನೇ ಮಾಡಿಕೊಂಡು ಬಂದಿದ್ದಾರೆ

ರಾಘವೇಂದ್ರ ರಿಗೆ ಮಾನ ಮರ್ಯಾದೆ ಇದಿಯಾ..?!

ಬಿಜೆಪಿಯಿಂದ ಬಂಗಾರಪ್ಪ ಸಂಸದರಾಗಿ ಗೆದ್ದಿದ್ದು ಅಂತ ಹೇಳ್ತಾರೆ. ರಾಘವೇಂದ್ರರಿಗೆ ಮಾನ, ಮರ್ಯಾದೆ ಇದೆಯಾ? ಬಿಜೆಪಿಗೆ ಶಕ್ತಿ ಕೊಟ್ಟಿದ್ದು ಬಂಗಾರಪ್ಪ. ಸೋಲನ್ನು ಕೀಳು ಮಟ್ಟದಲ್ಲಿ ಮಾತಾಡಬೇಡಿ. ಈಗ ಆ ರುಚಿ ನೀವು ಕಾಣಲಿದ್ದೀರಿ. ಯಡಿಯೂರಪ್ಪ ಸೋತಾಗ ಅವರನ್ನು ಗೆಲ್ಲಿಸಿದ್ದೇ ಬಂಗಾರಪ್ಪ.

ಯಡಿಯೂರಪ್ಪರೇ ಬಂಗಾರಪ್ಪರಿಂದ ಶಕ್ತಿ ತುಂಬಿಸಿಕೊಂಡಿದ್ದು. ನಂತರ ಬಿಜೆಪಿ ಬಿಟ್ಟು ಸಮಾಜವಾದಿ ಪಕ್ಷದಿಂದ ನಿಂತು ಗೆದ್ದರಲ್ಲ…ಮೂರನೇ ಸ್ಥಾನಕ್ಕೆ ಆಗ ಬಿಜೆಪಿ ತಳ್ಳಲ್ಪಟ್ಟಿತ್ತಲ್ಲ…ಆಗ ನಿಮಗೆ ಶಕ್ತಿ ಇರಲಿಲ್ವಾ?

ಯಡಿಯೂರಪ್ಪ ಫ್ಯಾಮಿಲಿ ಬಂಗಾರಪ್ಪ ಋಣದಲ್ಲಿದೆ:

ಜಿಲ್ಲಾಸ್ಪತ್ರೆಯನ್ನು ರಾಜಕಾರಣದ ಸ್ವಾರ್ಥಕ್ಕೆ ಶಿಕಾರಿಪುರಕ್ಕೆ ಒಯ್ದಿದ್ರು. ಜಿಲ್ಲಾಸ್ಪತ್ರೆ ಜಿಲ್ಲಾ ಕೇಂದ್ರದಲ್ಲೇ ಇರಬೇಕು. ಸಿಮ್ಸ್ ಕೂಡ ಕಾಂಗ್ರೆಸ್ ಕೂಸು. ಭ್ರಷ್ಟರನ್ನು ಸದೆಬಡಿಯೋ ಕೆಲಸ ನಡೆಯುತ್ತೆ. ಎಂ ಸ್ಯಾಂಡ್, ಜಲ್ಲಿ ಕಥೆ ಗೊತ್ತಿದೆ. ಬರದ ಬಗ್ಗೆ ಮಾತಾಡೋ ಯೋಗ್ಯತೆ ಇಲ್ಲ.

ನಾಚಿಕೆ ಆಗಬೇಕು ಸಂಸದ ರಾಘವೇಂದ್ರರಿಗೆ. ಶರಾವತಿ ಸಮಸ್ಯೆ ಬಗ್ಗೆ ಸುಳ್ಳು ಹೇಳ್ತಾನೇ ಇದಾರೆ. ಈಶ್ವರಪ್ಪ, ಯತ್ನಾಳ್, ಮಾಲೀಕಯ್ಯ ಗುತ್ತೇದಾರ್, ಕರಡಿಯವರಿಗೆ ಉತ್ರ ಕೊಡಿ. ಸ್ವಾರ್ಥದ ರಾಜಕಾರಣ ಬಿಡಿ.

ತಂದೆಯನ್ನು ಸೋಲಿಸಿದ್ದಿರಿ. ಈಗ ಮಗಳು ಸೋಲಿಸುತ್ತಾರೆ. ನೀರಾವರಿಗೋಸ್ಕರ ಮಧು ಬಂಗಾರಪ್ಪ ಹೆಸರನ್ನು ಜನ ಹೇಳ್ತಿದಾರೆ. ಪಾದಯಾತ್ರೆ ಮಾಡಿದ್ದು ಜನರಿಗೆ ನೆನಪಿದೆ.

ಬರಗಾಲಕ್ಕೆ ದುಡ್ಡು ತರೋ ಯೋಗ್ಯತೆ ಇಲ್ಲ. ಮೋದಿನ ವಿಶ್ವಗುರು ಮಾಡಬೇಕಂತೆ. ಮತಹಾಕಿದವರನ್ನು ಮನುಷ್ಯರಾಗಿ ಕಾಣಿ. ಕಾರ್ಖಾನೆಗಳೆಲ್ಲ ಸೇಲ್ ಆಗಿರೋ ಲೆಕ್ಕ ಗೊತ್ತಿದೆ.

ಸ್ವಾರ್ಥದ ರಾಜಕಾರಣ ಮಾಡ್ತಿದ್ದಾರೆ ರಾಘವೇಂದ್ರ. ಕಾರ್ಖಾನೆಗಳ ಅಭಿವೃದ್ಧಿಗೆ ನಮ್ಮದೇ ಯೋಜನೆಗಳಿವೆ. ಭ್ರಷ್ಟಾಚಾರ ತೊಳೆಯೋ ಪೌಡರ್ ಬಿಜೆಪಿಯಿಂದ ಬಂದಿದೆ. ವರ್ಸ್ಟ್ ವಾಷಿಂಗ್ ಪೌಡರ್ ಇದು. ಭ್ರಷ್ಟಾಚಾರ ತೊಳೆಯೋ ಮಾತಾಡಿ ಭ್ರಷ್ಟಾಚಾರಿಗಳಾಗಿದ್ದಾರೆ.

ಜಿಲ್ಲೆಯಲ್ಲಿ 7 ಕೋಟಿ ಹಣ ಗೃಹಲಕ್ಷ್ಮೀದು ಜನರಿಗೆ ಹೋಗ್ತಿದೆ. ನಾವೇನಿದ್ರೂ ಕ್ಲೀನ್. ನಮಗೆ ವಾಷಿಂಗ್ ಪೌಡರ್ ಅವಶ್ಯಕತೆ ಇಲ್ಲ. ಪಂಚ ಗ್ಯಾರಂಟಿಗಳು ಜನರ ಮನೆ ಬೆಳಕಾಗಿವೆ.

ಗ್ಯಾರಂಟಿ ಮನೆಮನೆಗೆ ತಲುಪಿಸೋ ಕಾರ್ಯ ಮಾಡ್ತೇವೆ. ರಾಜ್ಯದ್ದು ಕೊಟ್ಟಿದೀವಿ. ಈಗ ಕೇಂದ್ರದ ಗ್ಯಾರಂಟಿ ಕೊಡ್ತೀವಿ.

ಗಾಂಧಿ ಫ್ಯಾಮಿಲಿ ಬಗ್ಗೆ ಮಾತನಾಡುವ ಯೋಗ್ಯತೆ ಯಡಿಯೂರಪ್ಪಗೆ ಇಲ್ಲ :

ಗಾಂಧಿ ಫ್ಯಾಮಿಲಿ ಬಗ್ಗೆ ಮಾತಾಡೋ ಯೋಗ್ಯತೆ ಯಡಿಯೂರಪ್ಪ ಅವರಿಗೆ ಇಲ್ಲ. ರಾಹುಲ್ ಗಾಂಧಿ ಬಹಳಷ್ಟು ಜೀವಗಳನ್ನು ಕಳೆದುಕೊಂಡ ಜೀವ. ಅವರನ್ನು ಏನೇನೆಲ್ಲ ಟೀಕಿಸಿದ್ರಿ. ಅವರು ದೇಶ ಒಂದು ಮಾಡಲು ಪಾದಯಾತ್ರೆ ಮಾಡ

20 ರಿಂದ ಗ್ಯಾರಂಟಿ ಡ್ರೈವ್ ಆರಂಭ ಆಗಲಿದೆ. ಚಂದ್ರಭೂಪಾಲ ಮುಂದಾಳತ್ವದಲ್ಲಿ, ಪ್ರಸನ್ನ ಕುಮಾರ್ ಅಧ್ಯಕ್ಷತೆಯಲ್ಲಿ ಐದು ದಿನ ನಡೆಯಲಿದೆ.

ಡಿಕೆ ಶಿವಕುಮಾರ್ ಸಂತೋಷ ಪಟ್ಟಿದ್ದಾರೆ. ಅವರು ಹೊಗಳಿದ್ದಾರೆ ನನ್ನನ್ನು. ನನ್ನಲ್ಲಿ ಕಾನ್ಫಿಡೆನ್ಸ್ ಹೆಚ್ಚಾಗಿದೆ ಇದರಿಂದ. 70 ದಿನ ಟ್ರೈನಿಂಗ್ ತಗೊಂಡಿದೀನಿ, ಶಿಕ್ಷಣ ಇಲಾಖೆ ನಡೆಸಲು. ಅವರು ಒಳ್ಳೆ ಮಾತಾಡಿದ್ದು ನನ್ನ ಭಾಗ್ಯ…ನನ್ನ ಭಾಗ್ಯ…ನನ್ನ ಭಾಗ್ಯ…

ಸ್ಟಾರ್ ಗಳು ಸ್ವಯಂ ಪ್ರೇರಿತರಾಗಿ ಬರಲಿದ್ದಾರೆ. 26 ರ ನಂತರ ಪಕ್ಷದ ಹಿರಿಯರು ಬರಲಿದ್ದಾರೆ. ಕಾರ್ನರ್ ಮೀಟಿಂಗ್ ಗಳು ಸಾಕಷ್ಟು ಪರಿಣಾಮಕಾರಿಯಾಗಿ ನಡೆಯಲಿವೆ.

ಬಿಜೆಪಿ ವ್ಯವಹಾರಗಳು ನಾಳೆಯಿಂದ ಆರಂಭವಾಗಲಿವೆ. ಇಂಟೆಲಿಜೆನ್ಸ್ ಅಪಬಳಕೆ ಮಾಡಿಕೊಳ್ಳೋದಿಲ್ಲ.

ಈಶ್ವರಪ್ಪ ಗೆ ಉತ್ತರ ಕೊಡಿ ರಾಘವೇಂದ್ರ :

ಈಶ್ವರಪ್ಪರಿಗೆ ಮೊದಲು ಉತ್ತರ ಕೊಡಿ ರಾಘವೇಂದ್ರ. ಅವರು ನಿಮಗೆ ಬತ್ತಿ ಇಟ್ಟಿದ್ದಾರೆ. ಭ್ರಷ್ಟಾಚಾರ, ಎಲೆಕ್ಷನ್ ಬಾಂಡ್ ಬಗ್ಗೆ ಮಾತಾಡಿ…ಮೋದಿ ಕೂಡ ಮಾತಾಡೋಲ್ಲ. ಇದೆಲ್ಲ ಪ್ರೊಫೆಷನಲ್ ಭ್ರಷ್ಟಾಚಾರ ಪಾಪು ರಾಘವೇಂದ್ರ…ನಿಮ್ಮಪ್ಪನಿಗೆ ನಾ ಜೊತೆ ನಿಂತಾಗ ನೀ ಎಲ್ಲಿದ್ದೆ?
ಬಿಜೆಪಿ ಹಾಳಾಗಿದೆ. ಅದು ಶುದ್ಧೀಕರಣ ಆಗಬೇಕಿದೆ ಅಂತ ಅವರೇ ಮಾತಾಡ್ತಾರೆ ಎಂದು ಬಿಜೆಪಿ ವಿರುದ್ಧ ಹಾಗೂ ಸಂಸದ ರಾಘವೇಂದ್ರ ಯಡಿಯೂರಪ್ಪ ಕುಟುಂಬದ ವಿರುದ್ಧ ಹರಿಹಾಯ್ದರು.

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...