
ಶಿವಮೊಗ್ಗ: ತಾಲೂಕಿನ ಮಂಡಗದ್ದೆಯಲ್ಲಿ ನಿರಂತರವಾಗಿ ಅಕ್ರಮ ಮರಳು ದಂಧೆ ನಡೆಯುತ್ತಿದೆ ಎಂದು ಬಂದ ದೂರಿನ ಹಿನ್ನೆಲೆಯಲ್ಲಿ ಈಗಾಗಲೇ ಸಾಕಷ್ಟು ಬಾರಿ ಮರಳು ದಂಧೆಗೆ ಬಳಸುತ್ತಿದ್ದ ರಸ್ತೆಗಳನ್ನು ಟ್ರಂಚ್ ಹೂಡಿಸಿ ಅತ್ತ ವಾಹನಗಳು ಓಡಾಡದಂತೆ ಶಿವಮೊಗ್ಗ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಂಡಿದ್ದರು.
ಆದರೂ ನಿರಂತರವಾಗಿ ನಡೆಯುತ್ತಿದ್ದ ಮರಳುದಂದೆ:

ಗಣಿ ಇಲಾಖೆಯ ಅಧಿಕಾರಿಗಳು ಟ್ರಂಚ್ ಒಡಿಸಿ ರಸ್ತೆಗಳನ್ನು ಮುಚ್ಚಿದ್ದರು ಕೂಡ ಮತ್ತೊಂದಷ್ಟು ಕಡೆ ರಸ್ತೆಗಳನ್ನು ಮಾಡಿಕೊಂಡು ಅಕ್ರಮವಾಗಿ ಮರಳುಗಳನ್ನು ತೆಗೆದು ನಿರಂತರವಾಗಿ ಹಗಲು ರಾತ್ರಿ ಎನ್ನದೆ ದಂದೆ ನಡೆಸುತ್ತಿದ್ದಾರೆ ಎಂದು ಬಂದ ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಂಬಂಧಪಟ್ಟ ಎಲ್ಲಾ ಭಾಗಗಳಲ್ಲಿ ರಸ್ತೆಗಳಿಗೂ ಟ್ರಂಚ್ ಹೊಡಿಸಿ ಮುಚ್ಚಿ ತಾತ್ಕಾಲಿಕವಾಗಿ ಅಕ್ರಮ ಮರಳು ದಂಧೆ ನಡೆಯದಂತೆ ಬ್ರೇಕ್ ಹಾಕಿದ್ದಾರೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ನವೀನ್ ಬಂದಮೇಲೆ ನಿರಂತರವಾಗಿ ಅಕ್ರಮ ಮರಳು ದಂಧೆಗಳ ಮೇಲೆ ದಾಳಿ :
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ನವೀನ್ ಅವರು ಬಂದಮೇಲೆ ನಿರಂತರವಾಗಿ ಅಕ್ರಮ ಮರಳು ದಂಧೆ ಮೇಲೆ ದಾಳಿ ನಡೆಯುತ್ತಿದ್ದು ದಿಟ್ಟ ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಎಲ್ಲೇ ಖಚಿತ ಮಾಹಿತಿ ಬಂದರು ಅಲ್ಲಿಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಕಳುಹಿಸಿ ದಿಟ್ಟ ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಇಲ್ಲಿವರೆಗೂ ಸುಮಾರು ಒಂದುವರೆ ಕೋಟಿ ಅಷ್ಟು ಸರ್ಕಾರಕ್ಕೆ ವಂಚನೆ ಆಗುತ್ತಿದ್ದ ರಾಜಸ್ವ ಹಣವನ್ನು ಅಕ್ರಮ ದಂಧೆಗೆ ಮಾಡುತ್ತಿದ್ದವರಿಂದ ವಸೂಲಿ ಮಾಡಿದ್ದಾರೆ.