
ಶಿವಮೊಗ್ಗ: ನಗರದ ಅಲ್ಲಮಪ್ರಭು ಫ್ರೀಡಂ ಪಾರ್ಕ್ ನಲ್ಲಿ ಕಾಂಗ್ರೆಸ್ ಚುನಾವಣಾ ಬೃಹತ್ ಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ ಮಾಸ್ ರೇಪಿಸ್ಟ್ ನ ಪರವಾಗಿ ಬಿಜೆಪಿ ನಿಂತಿದೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಒಬ್ಬ ರೇಪಿಸ್ಟ್ ನ ಪರವಾಗಿ ನಿಂತಿದ್ದಾರೆ. ಅವರ ಪರವಾಗಿ ಚುನಾವಣೆ ಪ್ರಚಾರಕ್ಕೆ ಬರುತ್ತಾರೆ ಇಂಥವರಿಗೆ ವೋಟ್ ಹಾಕುವುದು ಎಷ್ಟು ಸರಿ ಭಾರತದ ಇತಿಹಾಸದಲ್ಲಿ ಎಂದು ಕೇಳರಿಯದ ಬೃಹತ್ ಪ್ರಕರಣ ಇದು ಇಂಥ ಪ್ರಕರಣ ಹಿಂದೆ ಎಲ್ಲೂ ಕೇಳಿಲ್ಲ ಮುಂದೆ ಕೇಳಲು ಸಾಧ್ಯವಿಲ್ಲ.
ಹಾಗಾಗಿ ಇಂಥವರಿಂದ ಭಾರತದ ರಕ್ಷಣೆ ಸಾಧ್ಯವಿಲ್ಲ ಕಾಂಗ್ರೆಸ್ಗೆ ಮತ ನೀಡಿ ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ನುಡಿದಂತೆ ನಡೆದಿದೆ ಗ್ಯಾರಂಟಿಗಳನ್ನು ಜಾರಿಗೆ ತಂದಿದೆ ಹಾಗೆ ಕೇಂದ್ರ ಸರ್ಕಾರದಲ್ಲೂ ಕೂಡ ಗ್ಯಾರಂಟಿಗಳನ್ನು ಜಾರಿಗೆ ತರುತ್ತದೆ ನಮ್ಮ ಅಭ್ಯರ್ಥಿಗೆ ಮತ ನೀಡಿ.
ಗ್ಯಾರೆಂಟಿಗಳನ್ನು ವಿಸ್ತಾರವಾಗಿ ವಿವರಿಸಿದ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಯಿಂದ ಈ ದೇಶ ಉದ್ಧಾರವಾಗಲು ಸಾಧ್ಯವಿಲ್ಲ ಬಿಜೆಪಿ ಬರೀ ಸುಳ್ಳು ಭರವಸೆಗಳನ್ನು ನೀಡಿ ಸರ್ಕಾರ ನಡೆಸುತ್ತಿದೆ.
ಬಡವರ ಪರವಾಗಿ ಬಿಜೆಪಿ ಸರ್ಕಾರವಿಲ್ಲ ಏನಿದ್ದರೂ ಆದಾನಿ ಅಂಬಾನಿ ಅಂತ ಶ್ರೀಮಂತರ ಪರವಾಗಿ ಬಿಜೆಪಿ ಸರ್ಕಾರ ಇದೆ.
ಎಲ್ಲಾ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ಹೇಳಿದ ರಾಹುಲ್ ಗಾಂಧಿ.
ರೈತರಿಗೆ ಮಿನಿಮಮ್ ಗ್ಯಾರಂಟಿ ನೀಡುತ್ತೇವೆ.
ರಾಷ್ಟ್ರದಲ್ಲಿ ಯುನಿವರ್ಸಿಟಿಗಳನ್ನು ಖಾಸಗಿಕರಣ ಮಾಡುವುದರ ಮೂಲಕ ಬಡವರ ಜಮೀನನ್ನು ಕೊಳ್ಳೆ ಹೊಡೆಯುತ್ತಿದೆ ಇಂತಹ ಕ್ರಮವನ್ನು ನಮ್ಮ ಸರ್ಕಾರ ಬಂದರೆ ನಿಲ್ಲಿಸುತ್ತದೆ.