Wednesday, April 30, 2025
Google search engine
Homeಬಿಜೆಪಿಬಂಗಾರಪ್ಪನವರಿಗೆ ಕೊಟ್ಟ 75 ಲಕ್ಷ ಎಲ್ಲಿ ಹೋಯಿತು..?!ಕುಮಾರ್ ಬಂಗಾರಪ್ಪ ಪ್ರಶ್ನೆ..!

ಬಂಗಾರಪ್ಪನವರಿಗೆ ಕೊಟ್ಟ 75 ಲಕ್ಷ ಎಲ್ಲಿ ಹೋಯಿತು..?!ಕುಮಾರ್ ಬಂಗಾರಪ್ಪ ಪ್ರಶ್ನೆ..!

ಶಿವಮೊಗ್ಗ: ನಗರದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿಯ ಮುಖಂಡರು ಮಾಜಿ ಶಾಸಕರಾದ ಕುಮಾರ್ ಬಂಗಾರಪ್ಪನವರು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಬಗ್ಗೆ ಹಲವು ಗಂಭೀರ ಆರೋಪಗಳನ್ನು ಮಾಡಿದರು ಹಾಗೆ ತಮ್ಮ ತಮ್ಮ ಹಾಗೂ ಉಸ್ತುವಾರಿ ಸಚಿವರು ಶಿಕ್ಷಣ ಮಂತ್ರಿಗಳಾದ  ಮಧು ಬಂಗಾರಪ್ಪ ವಿರುದ್ಧ ಹಲವು ಆರೋಪಗಳನ್ನು ಮಾಡಿದರು  ಕನ್ನಡ ಚಿತ್ರರಂಗ ಪೂರ್ಣ ಪ್ರಮಾಣದಲ್ಲಿ ಶಿವರಾಜ್ ಕುಮಾರ್ ಪರ ಇಲ್ಲ ಕೆಲವೇ ಜನ ಬೆಂಬಲಕ್ಕೆ ನಿಂತಿದ್ದಾರೆ .

ಬಗಾರಹುಕುಂ ವಿಷಯದಲ್ಲಿ ನಿಜವಾಗಿ ಹೋರಾಟ ಮಾಡಿರುವುದು ಬಿಎಸ್ ಯಡಿಯೂರಪ್ಪ ಹೊರತು ಕಾಂಗ್ರೆಸ್ ಸರ್ಕಾರವಲ್ಲ ಮಧು ಬಂಗಾರಪ್ಪ ಹಾಗೂ ಕಾಂಗ್ರೆಸ್ ಸರ್ಕಾರದ ಸಾಧನೆ ಶೂನ್ಯ ದುರಂಕಾರದಿಂದ ಮಧು ಬಂಗಾರಪ್ಪ ವರ್ತಿಸುತ್ತಿದ್ದಾರೆ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ನೀಡದೆ ಪತ್ರಕರ್ತರಿಗೆ ಪ್ರಶ್ನೆ ಮಾಡುತ್ತಾರೆ.

ಜಾತಿ ಲೆಕ್ಕಾಚಾರದಲ್ಲಿ ಜನ ವೋಟಿನ ರಾಜಕಾರಣ ನಡೆಯುತ್ತಿದೆ ಇದು ಸರಿಯಲ್ಲ ಸಣ್ಣ ಸಣ್ಣ ಜಾತಿಗಳಿಗೆ ಇವರು ಏನು ಮಾಡಿದ್ದಾರೆ ಹಿಂದೆ 2004ರಲ್ಲಿ ಬಂಗಾರಪ್ಪ ಬಿಜೆಪಿಯಲ್ಲಿ ಇದ್ದಾಗ ಬಿಜೆಪಿ ಉತ್ತಮ ಸ್ಥಾನಗಳನ್ನು ಗೆದ್ದಿತ್ತು ಆದರೆ ನಂತರ ಅವರನ್ನು ದಾರಿ ತಪ್ಪಿಸಿ ಸಮಾಜವಾದಿ ಪಕ್ಷಕ್ಕೆ ಕರೆತಂದವರು ಯಾರು? ಬಂಗಾರಪ್ಪನವರ ಎಪ್ಪತೈದನೇ ವರ್ಷದ ಸಂಭ್ರಮ ಕಂಠೀರವ ಸ್ಟುಡಿಯೋದಲ್ಲಿ ನಡೆದಾಗ ಆ ಸಮಾವೇಶದಲ್ಲಿ ಮುಲಾಯಂಸಿಂಗ್ ಯಾದವರು 75 ಲಕ್ಷ ಚೆಕ್ಕನ್ನು ನೀಡಿದರು ಆದರೆ ಆ ಚೆಕ್ಕನ್ನು ಹರಿದು ಹಾಕಿದವರು ಯಾರು..? ಬೇಳೂರು ಗೋಪಾಲಕೃಷ್ಣ ಅವರು ಮಧು ಬಂಗಾರಪ್ಪ ಬಗ್ಗೆ ಎಲ್ಲ ವಿಷಯಗಳನ್ನು ಹೇಳಿದ್ದಾರೆ ಮಧು ಬಂಗಾರಪ್ಪ ಈಗಾಗಲೇ ಕಲೆಕ್ಷನ್ ಶುರು ಮಾಡಿದ್ದಾರೆ ಮೂರರಿಂದ ನಾಲ್ಕು ಸಾವಿರ ಕೋಟಿ ಯೋಜನೆಗಳನ್ನು ನಾವು ಸರ್ಕಾರ ಇದ್ದಾಗ ನಮ್ಮ ಶಾಸಕರು ಮಂತ್ರಿಗಳು ತಂದಿದ್ದೇವೆ ಸುಮಾರು 25 ರಿಂದ 30 ಸಾವಿರ ಕೋಟಿಗಳನ್ನು ಶಿವಮೊಗ್ಗ ಜಿಲ್ಲೆಗೆ ತಂದಿದ್ದೇವೆ ಪ್ರಾಥಮಿಕ ಶಿಕ್ಷಣ ಸಚಿವರಾಗಿರುವ ಮಧು ಬಂಗಾರಪ್ಪನವರಿಗೆ ಪ್ರಾರ್ಥಮಿಕ ಶಿಕ್ಷಣದ ಜ್ಞಾನವೇ ಇಲ್ಲ ಶಿಕ್ಷಣ ಸಚಿವರ ವಿದ್ಯಾಭ್ಯಾಸದ ಬಗ್ಗೆ ಗೊಂದಲವಿದೆ ಎಸ್ ಎಲ್ ಸಿ ಪಿಯುಸಿ ಡಿಗ್ರಿ ಬಗ್ಗೆ ಗೊಂದಲವಿದೆ ಅವರು ಶಿಕ್ಷಣವನ್ನು ಎಲ್ಲಿ ಮಾಡಿದರು ಎನ್ನುವುದರ ಬಗ್ಗೆ ವಿಚಾರಿಸಿ ನೋಡಿ ಅವರಿಗೆ ಶಿಕ್ಷಣದ ಅವಶ್ಯಕತೆ ಇದೆ ಸೌಜನ್ಯದಿಂದ ಮಾತನಾಡುವ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕ ಶರಾವತಿಯ 87 ಎಕರೆ ಸಮಾಜದ ಆಸ್ತಿಯನ್ನು ಮಾರಾಟ ಮಾಡಿದ್ದಾರೆ.

ಕಾಂಗ್ರೆಸ್ ಗೆ ಸವಾಲ್ ಹಾಕುತ್ತೇನೆ ಖಚಿತವಾಗಿ ಕಾಂಗ್ರೆಸ್ ಸೋಲುತ್ತದೆ  ರಾಜಕುಮಾರ ಹೆಸರು ಇಲ್ಲಿ ದುರ್ಬಳಕೆ ಆಗುತ್ತಿದೆ ಜಾತಿಗಿಂತ ದೇಶಕ್ಕೆ ಮತ ಹಾಕಿ ಅಹಂಕಾರದಿಂದ ದ್ವೇಷದಿಂದ ಯಾವುದೇ ಸಾಧನೆ ಮಾಡಲು ಆಗುವುದಿಲ್ಲ ವಿವಿಧ ಸಮಾಜಕ್ಕೆ ಮಧು ಬಂಗಾರಪ್ಪನವರ ಕೊಡುಗೆ ಏನು ಅನ್ನುವುದರ ಬಗ್ಗೆ ಮಾಹಿತಿ ನೀಡಲಿ ನಮ್ಮಲ್ಲಿ ಇಲ್ಲಿಯವರೆಗೂ ಸಣ್ಣಪುಟ್ಟ ಸಮಸ್ಯೆಗಳು ಇದ್ದಿದ್ದು ನಿಜ ಆದರೆ ಆ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಈಗ ನಾನು ಬಂದಿದ್ದೇನೆ ನಾನು ಯಾವುದೇ ರೀತಿಯ ಭ್ರಷ್ಟಾಚಾರವನ್ನು ಮಾಡಿಲ್ಲ ಮಧು ಬಂಗಾರಪ್ಪನವರು ರಿಚಾರ್ಜ್ ವಿಚಾರ ಹೇಳುತ್ತಿದ್ದಾರೆ ಆ ರಿಚಾರ್ಜ್ ಬಗ್ಗೆ ಮಧು ಬಂಗಾರಪ್ಪ ಹಾಗೂ ಡಿಕೆ ಶಿವಕುಮಾರ್ ಅವರಿಗೆ ಕೇಳಬೇಕು ಅದರ ಬಗ್ಗೆ ನನಗೆ ಮಾಹಿತಿ ಇಲ್ಲ ಗೀತಾ ಶಿವರಾಜ್ ಕುಮಾರ್ ಅವರು ಬಾಡಿಗೆ ಮನೆಯನ್ನು ಮಾಡಿಕೊಂಡು ಇದ್ದಾರೆ ಯಾವಾಗ ಮನೆ ಖಾಲಿ ಮಾಡುತ್ತಾರೋ ಗೊತ್ತಿಲ್ಲ ಬಂಗಾರಪ್ಪ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ರಾಜಕುಮಾರ್ ಹೆಸರನ್ನು ರಾಜಕುಮಾರ್ ಕುಟುಂಬವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಹಿಂದೆ ಜಿಲ್ಲಾಧಿಕಾರಿಗಳಾದ ದಯಾನಂದ್ ಅವರು ಇದ್ದಾಗ ಬಗಾರಹುಕಂ ಬಗ್ಗೆ ಸಾಕಷ್ಟು ಕ್ರಮ ಕೈಗೊಂಡಿದ್ದರು ಆ ಸಮಯದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ಸಾಕಷ್ಟು ಶ್ರಮ ವಹಿಸಿದ್ದರು ಆದರೆ ನಂತರ ಬಂದ ಜಿಲ್ಲಾಧಿಕಾರಿಗಳು ಆ ದಿಕ್ಕಿನಲ್ಲಿ ಹೆಚ್ಚಿನ ಗಮನ ವಹಿಸಲಿಲ್ಲ ಸುಳ್ಳಿನ ಸರಮಾಲೆಗಳನ್ನು ಹೇಳುತ್ತಿರುವ ಕಾಂಗ್ರೆಸ್ ಅಭಿವೃದ್ಧಿ ಶೂನ್ಯ ಅಭಿವೃದ್ಧಿಗೆ ಮತ ನೀಡಿ ರಾಘವೇಂದ್ರ ಅವರು ಸಾಕಷ್ಟು ಅಭಿವೃದ್ಧಿಗಳನ್ನು ಮಾಡಿದ್ದಾರೆ ಆ ಅಭಿವೃದ್ಧಿಗೆ ಮತ ನೀಡಿ ವೈಯಕ್ತಿಕವಾಗಿ ಟೀಕೆ ಮಾಡುವ ಅವಶ್ಯಕತೆ ನನಗಿಲ್ಲ ಆದರೆ ಅವರು ಮಾತನಾಡಿದ್ದಕ್ಕೆ ನಾನು ಮಾತನಾಡುತ್ತಿದ್ದೇನೆ ಅಷ್ಟೇ ಎಂದು ಹೇಳುವುದರ ಮುಖಾಂತರ ಹಲವು ದಿನಗಳಿಂದ ಕಣ್ಮರೆಯಾಗಿದ್ದ ಕುಮಾರ ಬಂಗಾರಪ್ಪ ಇಂದು ದಿಢೀರ್ ಪತ್ರಿಕಾಗೋಷ್ಠಿಯನ್ನು ನಡೆಸಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡರು.

ರಘುರಾಜ್ ಹೆಚ್‌ ಕೆ.9449553305.

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...