ಶಿವಮೊಗ್ಗ : ನಗರದಲ್ಲಿ ಲೋಕಸಭೆ ಚುನಾವಣೆ ಬಿರುಸಿನಿಂದ ನಡೆಯುತ್ತಿದೆ ಮತ ಭಿಕ್ಷೆಯನ್ನು ಮತದಾರ ಪ್ರಭುಗಳ ಹತ್ತಿರ ಚುನಾವಣೆಯಲ್ಲಿ ನಿಂತವರು ಅವರ ಪರವಾಗಿರುವವರು ಕಾರ್ಯಕರ್ತರು ಕೇಳುತ್ತಿದ್ದಾರೆ.
ಇನ್ನೊಂದೆಡೆ ಹಣ ಹಂಚಿಕೆಯ ಮಾತುಗಳು ಶುರುವಾಗಿದೆ ಅಲ್ಲಲ್ಲಿ ಈ ಚುನಾವಣೆಯಲ್ಲಿ ಹಣ ಸಿಕ್ಕಿದ್ದು ಸೀರೆ ಸಿಕ್ಕಿದ್ದು ಬಿಟ್ಟರೆ ಅಂತಹ ದೊಡ್ಡ ಪ್ರಮಾಣದ ಹಣವನ್ನು ಆಗಲಿ, ವಸ್ತುಗಳಾಗಲಿ ಸಿಕ್ಕಿದ ವರದಿಯಾಗಿಲ್ಲ.
ಮಾಜಿ ಮಹಾನಗರ ಪಾಲಿಕೆಯ ಸದಸ್ಯನ ಪೆಟ್ರೋಲ್ ಬಂಕ್ ನಲ್ಲಿ ಸಿಕ್ಕಿತಾ ಕೋಟಿಗಟ್ಟಲೆ ಹಣ..?!
ಮಾಜಿ ಮಹಾನಗರ ಪಾಲಿಕೆಯ ಸದಸ್ಯನ ಪೆಟ್ರೋಲ್ ಬಂಕ್ ನಲ್ಲಿ ಕೋಟಿಗಟ್ಟಲೆ ಲೆಕ್ಕ ಇಲ್ಲದ ಹಣ ಸಿಕ್ಕಿದೆ ಎನ್ನುವ ಪೋಸ್ಟರ್ ಒಂದು ಬಿಜೆಪಿಯ ವಲಯದಲ್ಲಿ ಹರಿದಾಡುತ್ತಿದ್ದು ಇದು ನಿಜಾನಾ ಎನ್ನುವ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.

ಬಿಜೆಪಿಯ ಶರತ್ ಕಲ್ಯಾಣಿ ಎನ್ನುವರು ಈ ಪೋಸ್ಟರ್ ಅನ್ನು ಹರಿಬಿಟ್ಟಿದ್ದು ಇದು ನಿಜಾನಾ ಹಣ ಸಿಕ್ಕಿರುವುದೇ ಆದರೆ ಅದು ಎಷ್ಟು..? ಅದಕ್ಕೆ ಲೆಕ್ಕವಿದೆಯಾ..? ಆ ಹಣ ಯಾರದು..? ಎನ್ನುವ ಸಂಪೂರ್ಣ ವರದಿ ತನಿಖೆಯಿಂದ ಹೊರ ಬರಬೇಕಾಗಿದೆ.