Wednesday, April 30, 2025
Google search engine
Homeರಾಜ್ಯಬದಲಾಗು ಮತದಾರ..!

ಬದಲಾಗು ಮತದಾರ..!

ಉತ್ತರ ಕರ್ನಾಟಕದ ಚುನಾವಣೆ ಮುಂಚೆ ಉತ್ತರ ಕರ್ನಾಟಕದ ಎಲ್ಲಾರೂ ಈ ಸಾಂಗ್ ನೋಡಬೇಕು ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಸಾಂಗ್ ಇದಾಗಿದ್ದು ಇದಕ್ಕೆ ಸಾಹಿತ್ಯ ಬರೆದಿರುವರು – ಮಹೇಶ್ ಬೆಂಗಳೂರು,ಸಂಗೀತ ನಿರ್ದೇಶಕರಾಗಿ
ದೇವೇಂದ್ರ ಕುಮಾರ್, ವೀಣಾ ಮತ್ತು ಅಭಿಶ್ರೀ, ಇವರೆಲ್ಲರೂ ಈ ಗೀತೆಯನ್ನು ರಚಿಸಿ ಹಾಡಿ ದೇಶದ ಮತದಾರರಲ್ಲಿ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಏಪ್ರಿಲ್ ನಲ್ಲಿ ಬಿಡುಗಡೆಯಾದ ” ಬದಲಾಗು ಮತದಾರ” ದಕ್ಷಿಣ ಕರ್ನಾಟಕದಲ್ಲಿ ನಡೆದ ಚುನಾವಣೆಯಲ್ಲಿ ಮತದಾರರನ್ನು ಬದಲಾಯಿಸುವಲ್ಲಿ ಪ್ರಮುಖ ಪಾತ್ರವಹಿಸಿ ಯಶಸ್ವಿಯಾಗಿದೆ.

ಮತದಾನವು ನಮ್ಮ ದೇಶದ ಭವಿಷ್ಯದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುವ ಪ್ರಮುಖ ನಾಗರಿಕ ಕರ್ತವ್ಯವಾಗಿದೆ. ಮಹೇಶ್ ಬೆಂಗಳೂರು ರವರು ರಚಿಸಿರುವ “ಬದಲಾಗು ಮತದಾರ” ಸಾಹಿತ್ಯ ಬಹಳ ಅರ್ಥಗರ್ಭಿತವಾಗಿದೆ. ಯಾವುದೇ ಆಮೇಷಗಳಿಗೆ ಬಲಿಯಾಗದೆ ದೇಶದ ಹಿತವನ್ನು ಕಾಯುವ ಒಳ್ಳೆಯ ಪ್ರಜೆಯನ್ನು ಆಯ್ಕೆ ಮಾಡಿ ಮತವನ್ನು ನೀಡು ಮತದಾರ ಎಂಬ ಸಂದೇಶವನ್ನು ಸಾರುವಂತಹ ರಚನೆ ಇದಾಗಿದೆ.

ಮತದಾನ ಮಾಡಲು ಸಮಾನ ಅವಕಾಶವಿರುತ್ತದೆ. ಮತದಾನ ಎನ್ನುವುದು ಕೇವಲ ನಮ್ಮ ಹಕ್ಕು ಆಗಿರದೆ ನಮ್ಮ ಶಕ್ತಿಯು ಆಗಿರುತ್ತದೆ. ಚುನಾವಣೆಗೆ ಸ್ಪರ್ಧಿಸುವ ವ್ಯಕ್ತಿಗಳ ಗುಣ, ನಡತೆ, ಚಾರಿತ್ರ್ಯ, ವಿದ್ಯಾಬ್ಯಾಸ, ಸಾಮಾಜಿಕ ಕಳಕಳಿ, ದೇಶಭಕ್ತಿ ಮತ್ತು ಸಹಭಾಗಿತ್ವ ಇವೆಲ್ಲವನ್ನೂ ಅಳೆದು ತೂಗಿ, ಆತನಿಂದ ದೇಶಕ್ಕೆ ಏನಾದರೂ ಸಹಾಯ ಆಗಬಹುದು ಎಂಬುದನ್ನು ಸಾಕಷ್ಟು ವಿಮರ್ಶಿಸಿ ಮತದಾನ ಮಾಡಬೇಕು.

ಪ್ರಜಾಪ್ರಭುತ್ವವಾದಿ ರಾಷ್ಟ್ರಗಳಲ್ಲಿ ಪ್ರಜೆಗಳಿಗೆ ಮತದಾನದ ಮುಖಾಂತರ ತಮ್ಮ ಹಕ್ಕನ್ನು ಚಲಾಯಿಸುವುದರ ಜೊತೆಗೆ, ತಮ್ಮ ವೈಯಕ್ತಿಕ ಅಭಿಪ್ರಾಯವನ್ನು ಸಾರ್ವಜನಿಕವಾಗಿ ಮಂಡಿಸಲು ಅವಕಾಶವಿರುತ್ತದೆ. ಒಬ್ಬ ವ್ಯಕ್ತಿ ತಾನು ಮತದಾನ ಮಾಡುವ ಮೂಲಕ ಒಬ್ಬ ವ್ಯಕ್ತಿಯನ್ನು ಗೆಲ್ಲಿಸಲು ಸಹಕಾರ ಮಾಡುವುದರ ಜೊತೆಗೆ, ಆ ಅಭ್ಯರ್ಥಿಯನ್ನು ತಾನು ಮಾಡುವ ಕೆಲಸಗಳಿಗೆ ಜವಾಬ್ದಾರರನ್ನಾಗಿ ಮಾಡುತ್ತದೆ. ತಾವು ನಂಬಿದ ತತ್ವ ಆದರ್ಶ ಮತ್ತು ದೃಷ್ಟಿಕೋನಗಳಿಗೆ ಗೌರವ ನೀಡುವ ವ್ಯಕ್ತಿಯನ್ನು ಆರಿಸುವ ಹಕ್ಕು ಮತದಾರರಿಗೆ ಇರುತ್ತದೆ. ಪ್ರಜಾಪ್ರಭುತ್ವದ ಪ್ರತಿಯೊಂದು ಮತವೂ ಅತ್ಯಮೂಲ್ಯ. ಹಾಗಾಗಿ ಪ್ರತಿಯೊಬ್ಬ ನಾಗರಿಕನು ಯಾವುದೇ ಆಮೇಷಗಳಿಗೆ ಬಲಿಯಾಗದೆ ನಿಮ್ಮ ಅಮೂಲ್ಯವಾದ ಮತವನ್ನು ಯೋಗ್ಯ ಅಭ್ಯರ್ಥಿಗೆ ನೀಡಬೇಕೆಂಬ ಆಶಯದ ಗೀತೆ ಇದಾಗಿದೆ

ಈ ಕೆಳಗಿನ ಲಿಂಕನ್ನು ಒತ್ತಿ ಬದಲಾಗು ಮತದಾರ ಗೀತೆಯನ್ನು ಕೇಳಿ ನಿಮ್ಮ ಅಮೂಲ್ಯವಾದ ಮತವನ್ನು ಯೋಗ್ಯ ವ್ಯಕ್ತಿಗೆ ನೀಡಿ ದೇಶವನ್ನು ಅಭಿವೃದ್ಧಿ ಪಥದತ್ತ ಸಾಗಿಸಿ.

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...