
ಮಂಡ್ಯ: ಸಕ್ಕರೆನಾಡಲ್ಲಿ ಹೆಣ್ಣು ಬ್ರೂಣ ಹತ್ತೆ ಹೆಚ್ಚಾಗಿದ್ದು ಇದೊಂದು ಪ್ರಕರಣದಲ್ಲಿ ರೆಡ್ ಹ್ಯಾಂಡ್ ಆಗಿ ಅಧಿಕಾರಗಳ ಕೈಗೆ ಹೆಣ್ಣು ಬ್ರೂಣ ಹತ್ಯೆ ಮಾಡುವಾಗಲೇ ಸಿಕ್ಕಿಬಿದ್ದಿದ್ದಾರೆ.
ದುರಂತವೆಂದರೆ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಹಿಡಿದರು ಕೂಡ ಆ ಮಗುವನ್ನು ಉಳಿಸಲು ಆಗಲಿಲ್ಲ ಪ್ರಪಂಚವನ್ನು ನೋಡುವ ಮೊದಲೇ ಮಗು ಕಣ್ಮುಚ್ಚಿಕೊಂಡಿತ್ತು. ಆನಂದ್ ಮತ್ತು ಅಶ್ವಿನಿ ಎನ್ನುವ ದಂಪತಿಗಳಿಂದ ಹೆಣ್ಣು ಭ್ರೂಣ ಹತ್ಯೆ ಮಾಡುವ ಕೆಲಸ ನಡೆದಿತ್ತು.
ಮಂಡ್ಯದ ಪಾಂಡವಪುರದಲ್ಲಿರುವ ಹೆಲ್ತ್ ಕ್ವಾಟ್ರಸ್ ನಲ್ಲಿ ಈ ಕೆಲಸ ನಡೆದಿದ್ದು ಆರೋಗ್ಯ ಇಲಾಖೆಯಲ್ಲಿ ಹೊರಗುತ್ತಿಗೆಯ ನೌಕರರಾಗಿ ಕಾರ್ಯ ನಿರ್ವಹಿಸುತ್ತಿದ್ದ ಈ ದಂಪತಿಗಳು ಮಂಡ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ದಾಳಿಯಿಂದ ಈ ಪ್ರಕರಣ ಹೊರಬಂದಿದ್ದು ಹೆಣ್ಣು ಭ್ರೂಣ ಹತ್ಯೆಗೆ ಔಷಧಿಯನ್ನು ನೀಡಿದ ಆನಂದ್ ಮತ್ತು ಅಶ್ವಿನಿ ದಂಪತಿಗಳು ಮೈಸೂರು ಮೂಲದ ಪುಷ್ಪವತಿಗೆ ಔಷಧಿ ನೀಡಲಾಗಿತ್ತು.
ಈಗಾಗಲೇ ಎರಡು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ಪುಷ್ಪವತಿ ಮೂರನೇ ಮಗು ಹೆಣ್ಣು ಎಂದು ಗೊತ್ತಾದಾಗ ಅದನ್ನು ಕೂಡ ಗರ್ಭಪಾತ ಮಾಡಿಸಿಕೊಳ್ಳಲು ಪಾಂಡವಪುರಕ್ಕೆ ಈ ದಂಪತಿಗಳ ಹತ್ತಿರ ಬಂದಿದ್ದಳು ನಿನ್ನೆ ತಡರಾತ್ರಿ ಆರೋಗ್ಯ ಇಲಾಖೆಯ ಕ್ವಾಟ್ರಸ್ ನಲ್ಲಿ ಇದಕ್ಕೆ ಪೂರ್ವ ತಯಾರಿಯನ್ನು ಮಾಡಿಕೊಳ್ಳಲಾಗಿತ್ತು.
ಅಧಿಕಾರಿಗಳು ದಾಳಿ ನಡೆಸುವ ಅಷ್ಟರಲ್ಲಿ ಗರ್ಭಪಾತದ ಔಷಧಿ ನೀಡಲಾಗಿತ್ತು ವೈದ್ಯರು ಎಷ್ಟೇ ಪ್ರಯತ್ನ ಪಟ್ಟರು ಮಗುವನ್ನು ಉಳಿಸಲಾಗಲಿಲ್ಲ ಆನಂದ್ ಮತ್ತು ಅಶ್ವಿನಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಪೊಲೀಸರ ಸಮಗ್ರ ತನಿಖೆಯಿಂದ ಈ ದಂಪತಿಗಳಿಂದ ಇನ್ನೆಷ್ಟು ಕಂದಮ್ಮಗಳು ಬಲಿಯಾಗಿವೆ ಅನ್ನೋದು ಹೊರಬರಬೇಕಾಗಿದೆ.