
ಶಿವಮೊಗ್ಗ : ಜಿಲ್ಲೆಯ ಹೊಸನಗರ ತಾಲೂಕಿನ ಅರಸಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವಾಪುರ ಗ್ರಾಮದಲ್ಲಿ ಕಾಡಿಗೆ ದರಗು ತರಲು ಹೋದ ತಿಮ್ಮಪ್ಪ ಎನ್ನುವ ವ್ಯಕ್ತಿ ಕಾಡಾನೆ ದಾಳಿಗೆ ಸಿಲುಕಿ ಸಾವನ್ನಪ್ಪಿದ್ದರು.
ಘಟನೆ ತಿಳಿದ ತಕ್ಷಣ ತಳಕ್ಕೆ ಶಾಸಕರ ಅಧಿಕಾರಿಗಳ ಭೇಟಿ :
ಘಟನೆ ತಿಳಿದ ತಕ್ಷಣ ವಿಧಾನ ಪರಿಷತ್ ಶಾಸಕರು ಮತ್ತು ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ಡಿ ಎಸ್ ಅರುಣ್ ಅವರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿ, ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ವಿಷಯ ತಿಳಿಸಿ, ಅರಣ್ಯ ಇಲಾಖೆಯವರಿಗೆ ಇನ್ನೂ ಮುಂದೆ ಇತರದ ಅನಾಹುತಗಳು ಆಗದಂತೆ ಎಚ್ಚರವಹಿಸಲು ತಿಳಿಸಿ, ಸರ್ಕಾರದ ವತಿಯಿಂದ ಸೂಕ್ತ ಪರಿಹಾರ ನೀಡಲು ತಿಳಿಸಿದರು. ನಂತರ ಮೃತರಾದ ತಿಮ್ಮಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿ, ಧನ ಸಹಾಯ ನೀಡಿ, ನಿಮ್ಮ ಕುಟುಂಬದ ಜೊತೆ ನಾವಿದ್ದೇವೆ ಎಂದು ತಿಳಿಸಿದರು.
ಶಾಸಕರಾದ ಬೇಳೂರು ಗೋಪಾಲಕೃಷ್ಣ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ವೀರೇಶ್ ಆಲುವಳ್ಳಿ, CCF ಹನುಮಂತಪ್ಪ, ಡಿಸಿಎಫ್, RFO, ಹೊಸನಗರ ನಾಗಾರ್ಜುನ ಸ್ವಾಮಿ, ರಾಜೇಶ್, ಸತೀಶ್ ಹಾಗೂ ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ತಿಮ್ಮಪ್ಪನ ಸಾವಿಗೆ ಸಾಂತ್ವಾನ ಪರಿಹಾರ ಭೇಟಿ ಇಲ್ಲ ಏಕೆ ..?!
ಡಿಎಸ್ ಅರುಣ್ ಹಾಗೂ ಬೇಳೂರ್ ಗೋಪಾಲ್ ಕೃಷ್ಣ ಬಿಟ್ಟರೆ ಯಾವುದೇ ಶಾಸಕರಾಗಲಿ ,ಸಂಸದರಾಗಲಿ ಜಿಲ್ಲಾ ಉಸ್ತುವಾರಿ ಸಚಿವರಾಗಲಿ ತಿಮ್ಮಪ್ಪನವರ ಕುಟುಂಬವನ್ನು ಭೇಟಿ ಮಾಡಿಲ್ಲ ಏಕೆ..? ಸರ್ಕಾರದ ವತಿಯಿಂದ ಪರಿಹಾರ ನೀಡುವ ಮಾತು ಬಂದಿಲ್ಲ ಏಕೆ..? ಅರಣ್ಯ ಅಧಿಕಾರಿಗಳು ಪರಿಹಾರವನ್ನು ಕೊಡು ಕೊಡಲು ಬರುವುದಿಲ್ಲವೆಂದು ಕೈ ತೊಳೆದುಕೊಂಡಿದ್ದಾರೆ ಹಾಗಾದರೆ ಆ ಅ ಮೃತನ ಕುಟುಂಬಕ್ಕೆ ನ್ಯಾಯ ದೊರಕುವುದು ಹೇಗೆ..?! ಎಲ್ಲರೂ ಚುನಾವಣೆ ಬಿಸಿಯಲ್ಲಿ ತೊಡಗಿರುವ ಇಂತಹ ಸಂದರ್ಭದಲ್ಲಿ ಕಾಡಾನೆ ತುಳಿತಕ್ಕೆ ಒಳಗಾಗಿ ಮೃತನಾದ ತಿಮ್ಮಪ್ಪನ ಕುಟುಂಬಕ್ಕೆ ನ್ಯಾಯ ಬೇಡವೇ..? ಆ ಸಾವಿಗೆ ಪರಿಹಾರ ಬೇಡವೇ..? ಈ ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು ಇದರ ಬಗ್ಗೆ ಗಮನ ಹರಿಸಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿ ಪರಿಹಾರ ನೀಡುವ ವ್ಯವಸ್ಥೆ ಮಾಡಿಸಲಿ ಎನ್ನುವುದು ಆ ಭಾಗದ ಗ್ರಾಮಸ್ಥರ ಮನವಿ ಹಾಗೂ ಆಗ್ರಹ.