
ಶಿವಮೊಗ್ಗ: ಲಷ್ಕರ್ ಮೊಹಲ್ಲಾ ಸರ್ಕಲ್ ನಲ್ಲಿ ಮಟನ್ ಅಂಗಡಿಯ ಮಾಲೀಕ ರೌಡಿಶೀಟರ್ ಯಾಸಿನ್ ಅನ್ನು ಹೊಡೆಯಲು ಬಂದ ಇಬ್ಬರನ್ನು ಕಲ್ಲು ಎತ್ತು ಹಾಕಿ ಸಾಯಿಸಿದ ಘಟನೆ ನಡೆದಿದೆ.
ಜನತಾ ಮಟನ್ ಸ್ಟಾಲ್ ಮಾಲೀಕ ಯಾಸಿನ್ ಗೆ ಕೂಡ ತೀವ್ರತರದ ಹಲ್ಲೆ ಆಗಿದ್ದು ಆಸ್ಪತ್ರೆ ಗೆ ಸೇರಿಸಲಾಗಿದೆ.
ಹಲವು ದಿನಗಳಿಂದ ನಡೆಯುತ್ತಿದ್ದ ಗ್ಯಾಂಗ್ ವಾರ್ ಗೆ ಇಬ್ಬರು ಇಂದು ಬಲಿಯಾಗಿದ್ದಾರೆ.
ಕೊಲೆಯಾದವರನ್ನು ಶಾಯಿನ್ ನೂರುಲ್ಲಾ ಶೋಯಿಬ್ ಗೌಸ್ ಎಂದು ಗುರುತಿಸಲಾಗಿದೆ.
ನಗರದ ಕೋಟೆ ಲಿಮಿಟ್ಸ್ ನಲ್ಲಿ ಈ ಪ್ರಕರಣ ನಡೆದಿದ್ದು ಯಾಸಿನ್ ಕಡೆಯವರು ಈ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳೀಯರ ಪ್ರಕಾರ 15 ರಿಂದ 20 ಜನರ ತಂಡ ಯಾಸಿನ್ ಅನ್ನು ಹೊಡೆಯಲು ಬಂದಿತ್ತು.
ಆಗ ಈ ಘಟನೆ ಸಂಭವಿಸಿದೆ.
ಪೊಲೀಸರ ತನಿಖೆಯಿಂದ ಪ್ರಕರಣದಲ್ಲಿ ಯಾರ ಯಾರ ಪಾತ್ರವಿದೆ ಎನ್ನುವುದು ಹೊರ ಬರಬೇಕಾಗಿದೆ.