
ಶಿವಮೊಗ್ಗ ಜಿಲ್ಲೆಯಾದ್ಯಂತ ಎಲ್ಲೆಡೆ ಮತದಾನದ ಸಂಭ್ರಮ ಮತದಾನ ಮಾಡಲು ಬೆಂಗಳೂರು ಸೇರಿದಂತೆ ಹೊರ ಜಿಲ್ಲೆಗಳಲ್ಲಿ ಹೊರ ರಾಜ್ಯಗಳಲ್ಲಿ ವಾಸವಿದ್ದ ಅನೇಕರು ಊರಿಗೆ ಮರಳಿ ಮತದಾನ ಮಾಡಿ ತೆರಳಿದ್ದಾರೆ.
ಇದರ ನಡುವೆ ಭದ್ರಾವತಿಗೆ ಮತದಾನ ಮಾಡಲು ತೆರಳುತ್ತಿದ್ದ ಶಿಕಾರಿಪುರದ ಹಿತ್ತಲ ಗ್ರಾಮದ ನಿವಾಸಿ ಸುಮಾರು 32 ವರ್ಷ ವಯಸ್ಸಿನ ಮಂಜುನಾಥ್ ಎನ್ನುವವರು ಚುರ್ಚಿ ಗುಂಡಿಯಿಂದ ಭದ್ರಾವತಿಗೆ ಮತದಾನ ಮಾಡಲು ತೆರಳುತ್ತಿದ್ದರು ಈ ವೇಳೆ ಹಿತ್ತಲ ಬಳಿಯಲ್ಲಿ ಖಾಸಗಿ ಬಸ್ ಹಾಗೂ ಇವರು ತೆರಳುತ್ತಿದ್ದ ಬೈಕ್ ನಡುವೆ ಡಿಕ್ಕಿ ಆದ ಪರಿಣಾಮ ಮಂಜುನಾಥ್ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ.