
ಪ್ರಕರಣದ ಪ್ರಮುಖ ಆರೋಪಿ ಆದಿಲ್ ಬಂಧನ
ಶಿವಮೊಗ್ಗ: ಲಷ್ಕರ್ ಮೌಲದಲ್ಲಿ ನಿನ್ನೆ ನಡೆದ ಭೀಕರ ಗ್ಯಾಂಗ್ ವಾರ್ ನಲ್ಲಿ ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಯಾಸಿನ್ ಖುರೇಶಿ ಚಿಕಿತ್ಸೆ ಫಲಕಾರಿಯಾಗದೆ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಯಾಸಿನ್ ಖುರೇಶಿ ಕಡೆಯವರು ಈತನ ಮೇಲೆ ದಾಳಿಗೆ ಬಂದಿದ್ದ ಇಬ್ಬರನ್ನು ಮಾರಕಾಸ್ತ್ರಗಳಿಂದ ತಳಿಸಿ ಬೈಕ್ ಮೇಲೆ ಕಲ್ಲು ಎತ್ತು ಹಾಕಿದ್ದರು.
ಸೇಬು ಮತ್ತು ಗೌಸ್ ಎನ್ನುವ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರು.
ಇದರ ಬೆನ್ನಲ್ಲೇ ಇಂದು ಸಂಜೆ ಯಾಸಿನ್ ಕೂಡ ಸಾವನ್ನಪ್ಪಿದ್ದಾನೆ .
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ ಪಿ ಮಿಥುನ್ ಕುಮಾರ್ ಮಾರ್ಗದರ್ಶನದಲ್ಲಿ ಅಲರ್ಟ್ ಆದ ಪೊಲೀಸರು ಯಾಸಿನ್ ಕಡೆಯ 10ಹಾಗೂ ಆದಿಲ್ ಗುಂಪಿನ 8 ಜನರನ್ನು ವಶಪಡಿಸಿಕೊಂಡಿದ್ದಾರೆ.
ಅವರ ಮೇಲೆ 302 ಹಾಗೂ 307 ಪ್ರಕರಣವನ್ನು ದಾಖಲಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಕೆ ಆರ್ ಪುರಂ ನ ನಿವಾಸಿ ಪಾತಕಿ ಆದಿಲ್ ಹಾಗೂ ಆತನ ಸಹಚರ ಒಬ್ಬನನ್ನು ವಶಕ್ಕೆ ಪಡೆದ ಪೊಲೀಸರು ಜೈಲಿಗೆ ಕಳಿಸಿದ್ದಾರೆ.
ಒಟ್ಟಿಗೆ ಇಲ್ಲಿಯವರೆಗೂ 18 ಜನರನ್ನು ಬಂಧಿಸಿದ್ದಾರೆ ಇನ್ನಷ್ಟು ಜನರ ಹುಡುಕಾಟದಲ್ಲಿ ಪೊಲೀಸರು ಇದ್ದಾರೆ.
ಘಟನೆ ನಡೆದ 24 ಗಂಟೆ ಒಳಗೆ ಶಿವಮೊಗ್ಗ ಪೊಲೀಸರು ಅಲರ್ಟ್ ಆಗಿ ಆದಿಲ್ ಮತ್ತು ಆತನ ಸಹಚರರನ್ನು ಹಾಗೂ ಆದಿಲ್ ಗುಂಪಿನ ಮೇಲೆ ಹಲ್ಲೆ ಮಾಡಿ ಇಬ್ಬರನ್ನು ಕೊಲೆ ಮಾಡಿದ ಪಾತಕಿಗಳನ್ನು ಬಂಧಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.