
ಶಿವಮೊಗ್ಗದ ಜನಪ್ರಿಯ ತಾಂತ್ರಿಕ ತಜ್ಞರಾಗಿದ್ದ ಎ. ಟಿ. ಅನಂತಕೃಷ್ಣ ಅವರು ನಿನ್ನೆ ರಾತ್ರಿ ೧೧ ರ ಸುಮಾರಿಗೆ ಎಲ್ಲರನ್ನೂ ಅಗಲಿ ಹೋಗಿದ್ದಾರೆ. ಅವರ ಪಾರ್ಥಿವ ಶರೀರವನ್ನು ಹೊಸಮನೆಯ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗಿದೆ.
ಮಧ್ಯಾಹ್ನ ೩ ಗಂಟೆಗೆ ಶಿವಮೊಗ್ಗ ರೋಟರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.
ಸೌಮ್ಯ ಸ್ವಭಾವದವರಾದ ಅನಂತ್ ಕೃಷ್ಣ ಅವರು ಶಿವಮೊಗ್ಗ ಜಿಲ್ಲೆಯಾದ್ಯಂತ ಹಲವು ಕಡೆ ಸಾಕಷ್ಟು ಉತ್ತಮ ಕೆಲಸಗಳನ್ನು ಮಾಡಿದ್ದರು ಆದಿಚುಂಚನಗಿರಿ ಸಮುದಾಯ ಭವನ ಸೇರಿದಂತೆ ಒಕ್ಕಲಿಗರ ಸಂಘ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಕಟ್ಟಡ ಸೇರಿದಂತೆ ಆನೇಕ ಕಟ್ಟಡಗಳ ನಿರ್ಮಾಣಕ್ಕೆ ಯಾವುದೇ ಶುಲ್ಕವನ್ನು ತೆಗೆದುಕೊಳ್ಳದೆ ಉಚಿತವಾಗಿ ಕಾರ್ಯನಿರ್ವಹಿಸಿದ ಸೇವೆ ಇವರದು.
ಅಪಾರ ಬಂಧುಗಳನ್ನು ಸ್ನೇಹಿತರನ್ನು, ಹಿತೈಷಿಗಳನ್ನು, ಅಗಲಿರುವ ಶ್ರೀಯುತರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಮಾಜಿ ಉಪ ಮುಖ್ಯ ಮಂತ್ರಿಗಳಾದ ಕೆ. ಎಸ್. ಈಶ್ವರಪ್ಪ ನವರು, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಆದಿಮೂರ್ತಿ ಹಾಗೂ ಪದಾಧಿಕಾರಿಗಳು ಕಸಾಪ ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ಡಾ. ಶಿವರಾಮಕೃಷ್ಣ, ಮಾನಸ, ಮಲೆನಾಡು ಕ್ರೆಡಿಟ್ ಕೋ. ಸೊಸೈಟಿಯ ಅಧ್ಯಕ್ಷರಾದ ಕೆ. ಎನ್. ರಾಮಕೃಷ್ಣ, ಅಶಿತ್, ಭೈರಾಪುರ ಶಿವಪ್ಪಗೌಡ, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶಿವಮೊಗ್ಗ ಶಾಖೆಯ ವ್ಯವಸ್ಥಾಪಕರು, ಶಿಕ್ಷಣ ಟ್ರಸ್ಟ್ ಪದಾಧಿಕಾರಿಗಳು, ಸಿಬ್ಬಂದಿ, ಸೇರಿದಂತೆ ನಗರದ ಅನೇಕ ಗಣ್ಯರು ಅಂತಿಮ ದರ್ಶನ ಪಡೆದರು.