
ಶಿವಮೊಗ್ಗ: ಇತ್ತೀಚಿಗೆ ನಗರದ ಲಷ್ಕರ್ ಮೊಹಲ್ಲಾ ದಲ್ಲಿ ಪುರಾತನ ಪಾತಕಿ ಯಾಸಿನ್ ಖುರೇಷಿ ಹಾಗೂ ಕೆ ಆರ್ ಪುರಂ ನ ಪಾತಕಿ ಆದಿಲ್ ಗುಂಪುಗಳ ನಡುವೆ ಗ್ಯಾಂಗ್ ವಾರ್ ನಡೆದಿತ್ತು.
ಯಾಸಿನ್ ಅನ್ನು ಹೊಡೆಯಲು ಬಂದ ಆದಿಲ್ ಗುಂಪು ಯಾಸಿನ್ ಗೆ ಮಾರಕಾಸ್ತ್ರಗಳಿಂದ ಹೂಡೆದು ಎಸ್ಕೇಪ್ ಆಗುತ್ತಿದ್ದಾಗ ಯಾಸೀನ್ ಕಡೆಯ ಹುಡುಗರು ಅವರ ಮೇಲೆ ಅಟ್ಯಾಕ್ ಮಾಡಿದರು ಈ ಅಟ್ಯಾಕ್ ನಲ್ಲಿ ಆದಿಲ್ ಗುಂಪಿನ ಇಬ್ಬರು ಬೈಕಿನಲ್ಲಿ ಹೋಗುತ್ತಿದ್ದಾಗ ಕೆಳಗೆ ಬಿದ್ದರು ಆಗ ಯಾಸಿನ್ ಕಡೆಯ ಹುಡುಗರು ಅವರಿಗೆ ಮಾರಕಾಸ್ತ್ರಗಳಿಂದ ಹೊಡೆದು ಅವರ ಮೇಲೆ ಕಲ್ಲು ಎತ್ತಾಕಿದ್ದರು.
ಸ್ಥಳದಲ್ಲಿ ಇಬ್ಬರು ಮೃತಪಟ್ಟಿದ್ದರು ಸೇಬು ಮತ್ತು ಗೌಸ್ ಎನ್ನುವವರು ಮೃತಪಟ್ಟವರಾಗಿದ್ದರು ಇದರಲ್ಲಿ ಶೇಬು ಎನ್ನುವವನು ಕುಖ್ಯಾತ ಪಾತಕಿ ಹಂದಿ ಅಣ್ಣಿ ತಮ್ಮ ಗಿರಿ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಲ್ಲಿ ಒಬ್ಬನಾಗಿದ್ದ ಇತ್ತ ತೀವ್ರತರದ ಹಲ್ಲೆಗೊಳಗಾಗಿದ್ದ ಯಾಸಿನ್ ಖುರೇಷಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದ.
ಅಲ್ಲಿಗೆ ಈ ಗ್ಯಾಂಗ್ ವಾರ್ ನಲ್ಲಿ ಮೂರು ಕೊಲೆಗಳು ಆಗಿದ್ದವು.
ಘಟನೆ ನಡೆದು 24 ಗಂಟೆ ಒಳಗೆ ಪ್ರಮುಖ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳಿಸಿದ ಶಿವಮೊಗ್ಗ ಪೊಲೀಸರು :
ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಶಿವಮೊಗ್ಗ ಎಸ್ ಪಿ ಮಿಥುನ್ ಕುಮಾರ್ ಘಟನೆ ನಡೆದು 24 ಗಂಟೆ ಒಳಗೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಮುಖ ಆರೋಪಿ ಆದಿಲ್ ಸೇರಿದಂತೆ ಯಾಸಿನ್ ಕಡೆಯ 10 ಹಾಗೂ ಆದಿಲ್ ಕಡೆಯ ಒಂಬತ್ತು ಜನರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು.
ಆರೋಪಿಯನ್ನು ಹಿಡಿಯಲು ವಿಶೇಷ ತಂಡ ರಚನೆ :
ಇನ್ನೊಬ್ಬ ಪ್ರಮುಖ ಆರೋಪಿ ಶೋಯಿಬ್ ಯಾನೆ ಅಂಡ ತಲೆಮರಿಸಿಕೊಂಡಿದ್ದ ಆತನ ಹುಡುಕಾಟದಲ್ಲಿ ಪೊಲೀಸರು ಇದ್ದರು ಶಿವಮೊಗ್ಗ ಎಸ್ ಪಿ ಮಿಥುನ್ ಕುಮಾರ್ ವಿಶೇಷ ತಂಡವನ್ನು ರಚಿಸಿದ್ದರು ಆ ತಂಡದಲ್ಲಿ ಹಿಂದೆ ತುಂಗಾ ನಗರದಲ್ಲಿ ರೌಡಿ ನಿಗ್ರಹದಳದ ಪಿಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ್ದ ಪ್ರಸ್ತುತ ಮಾಲೂರು ಠಾಣೆಯ ಪಿಎಸ್ಐ ಆಗಿ ಕಾರ್ಯನಿರ್ವಹಿಸುತ್ತಿರುವ ಕುಮಾರ್ ಹಾಗೂ ನಾಗರಾಜ್ ಅಣ್ಣಪ್ಪ ಎನ್ನುವರು ಇದ್ದರು.
ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆತನ ಕಾಲಿಗೆ ಬಿತ್ತು ಗುಂಡೇಟು :
ತಪ್ಪಿಸಿಕೊಂಡಿದ್ದ ಪ್ರಮುಖ ಆರೋಪಿ ಶೋಯಿಬ್ ಯಾನೆ ಅಂಡ ಖಚಿತ ಮಾಹಿತಿಯ ಮೇರೆಗೆ ಗ್ರಾಮಾಂತರ ಭಾಗದ ಭೀರನಕೆರೆಯಲ್ಲಿ ಇದ್ದಾನೆ ಎಂದು ಸುಳಿವು ಸಿಕ್ಕಿತು ಇದರ ಆದರದ ಮೇಲೆ ಪಿಎಸ್ಐ ಕುಮಾರ್ ತಂಡ ಆರೋಪಿಯನ್ನು ಹಿಡಿಯಲು ಹೋದಾಗ ಆತ ದಪೇದರ್ ಅಣ್ಣಪ್ಪ ಮೇಲೆ ದಾಳಿ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಆಗ ಪಿಎಸ್ಐ ಕುಮಾರ್ ಶರಣಾಗುವಂತೆ ಒಂದು ಸುತ್ತು ಗುಂಡನ್ನು ಹಾರಿಸಿದರು ಆದರೂ ಆತ ಮಾತು ಕೇಳದೆ ತಪ್ಪಿಸಿಕೊಳ್ಳಲು ಯತ್ನಿಸಿದ ಮತ್ತೆ ದಾಳಿ ಮಾಡಲು ಪ್ರಯತ್ನಿಸಿದ ಆಗ ಆತ್ಮ ರಕ್ಷಣೆಗಾಗಿ ಪಿಎಸ್ಐ ಕುಮಾರ್ ತಮ್ಮ ಸೊಂಟದಲ್ಲಿದ್ದ ರಿವಾಲ್ವರ್ ಗೆ ಕೆಲಸ ಕೊಟ್ಟರು ಆರೋಪಿ ಶೋಯಬ್ ಕಾಲಿಗೆ ಬಿತ್ತು ಗುಂಡೇಟು.
ಗಾಯಾಳು ದಪೇದಾರ್ ಅಣ್ಣಪ್ಪ ಖಾಸಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ಶೋಯಿಬ್ ನಗರದ ಮೇಗನ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ.
ಯಾರು ಈ ಗುಂಡೇಟು ತಿಂದ ಪುಡಿ ರೌಡಿ :
ಪೊಲೀಸರಿಂದ ಗುಂಡೇಟು ತಿಂದು ಆಸ್ಪತ್ರೆಯಲ್ಲಿ ದಾಖಲಾಗಿರುವ ಪುಡಿ ರೌಡಿ ಶೋಯಿಬ್ ಒಂದಷ್ಟು ಕೊಲೆ ಹಾಗೂ ಕೊಲೆ ಯತ್ನ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲುವಾಸ ಅನುಭವಿಸಿ ಬಂದಿದ್ದ ಈತ ಆದಿಲ್ ನ ಪ್ರಮುಖ ಸಹಚರನಾಗಿದ್ದ.
ಶಿವಮೊಗ್ಗ ಎಸ್ ಪಿ ನೀಡಿದರು ರೌಡಿಗಳಿಗೆ ಖಡಕ್ ವಾರ್ನಿಂಗ್ :
ಶಿವಮೊಗ್ಗಕ್ಕೆ ಎಸ್ಪಿ ಆಗಿ ಬಂದ ನಂತರ ಮಿಥುನ್ ಕುಮಾರ್ ಈ ಪುಂಡರ ವಿಷಯದಲ್ಲಿ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತಿದ್ದು ಸಾಕಷ್ಟು ಪ್ರಕರಣಗಳಲ್ಲಿ ಇದೇ ರೀತಿ ಪುಂಡರು ತಪ್ಪಿಸಿಕೊಂಡು ಓಡುತ್ತಿದ್ದಾಗ ಕಾಲಿಗೆ ಗುಂಡೇಟು ತಿಂದಿದ್ದಾರೆ. ಪುಂಡರಿಗೆ ಖಡಕ್ ವಾರ್ನಿಂಗ್ ನೀಡಿರುವ ಎಸ್ ಪಿ ಮಿಥುನ್ ಕುಮಾರ್ ಬಾಲ ಬಿಚ್ಚಿದ್ರೆ ಹುಷಾರ್ ಎನ್ನುವ ಸಂದೇಶವನ್ನು ಪರೋಕ್ಷವಾಗಿ ನೀಡಿದ್ದಾರೆ.
ರಘುರಾಜ್ ಹೆಚ್ ಕೆ..9449553305.