
ಅಂಜಲಿ ಸ್ಕೂಲ್ ಆಫ್ ಡ್ಯಾನ್ಸ್ ಅಂಡ್ ಮ್ಯೂಸಿಕ್ ಸಂಸ್ಥೆ ವತಿಯಿಂದ ಕೆ.ಲಿಖಿತಾ ರವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ :
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಾ. ಸಿ.ಜಿ.ಹಳ್ಳಿ ಮೂರ್ತಿ ರವರು ಕಲೆಗೆ ದೊಡ್ಡ ಶಕ್ತಿ ಇದೆ ಅದು ಮಾನವ ಸಂಬಂಧಗಳನ್ನು ಗಟ್ಟುಗೊಳಿಸುವ ವಷ್ಟು ಶಕ್ತಿ ಇದೆ ಅದು ಮನುಷ್ಯನಲ್ಲಿ ಮನುಷ್ಯತ್ವವನ್ನು ಮೂಡಿಸುತ್ತದೆ ಎಂದು ತಿಳಿಸಿದರು ಹಾಗೆಯೇ ಮಕ್ಕಳಿಗೆ ಪುಸ್ತಕ ಓದುವ ಸಂಸ್ಕೃತಿಯನ್ನು ರೂಪಿಸಬೇಕು ಹಾಗೇಯೇ ತಂದೆ ತಾಯಂದಿರು ಮಕ್ಕಳನ್ನು ಕ್ರೀಡೆಯಲ್ಲಿ ಕಲೆಯಲ್ಲಿ ಪುಸ್ತಕ ಓದುವಲ್ಲಿ ತೊಡಗಿಸುವಂತೆ
ನೋಡಿಕೊಳ್ಳಬೇಕು ಆಗ ಮಕ್ಕಳೂ ಕ್ರಿಯಾಶೀಲರಾಗುತ್ತಾರೆ ಅವರಲ್ಲಿ ಆತ್ಮವಿಶ್ವಾಸ ಮೂಡುತ್ತಿದೆ ಹಾಗೂ ಅವರು ಬುದ್ಧಿಮಟ್ಟ ಹೆಚ್ಚು
ಚುರುಕಾಗುತ್ತದೆ ಎಂದು ತಿಳಿಸಿದರು.
ಹಾಗೇಯೇ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ನನ್ನ ವಿದ್ಯಾರ್ಥಿಗಳು ಹಲವಾರು ವೃತ್ತಿ ರಂಗಗಳಲ್ಲಿ ತೊಡಗಿಕೊಂಡಿದ್ದಾರೆ ಕೆಲವರು ಡಾಕ್ಟರ್ ಗಳಾಗಿದ್ದಾರೆ , ಕೆಲವರು ಇಂಜಿನೀಯರ್ ಗಳಾಗಿದ್ದರು, ಕೆಲವರು ಶಿಕ್ಷಕರಾಗಿದ್ದಾರೆ ಆದರೆ ಭರತನಾಟ್ಯ ದಲ್ಲಿ ನನ್ನ ಇಬ್ಬರು ವಿದ್ಯಾರ್ಥಿಗಳು ಭಾರತ ನಾಟ್ಯದಲ್ಲಿ ರಂಗಪ್ರವೇಶ ಮಾಡಿದ್ದಾರೆ ಇದೇ ಕಲಾಭವನದಲ್ಲಿ ಮೊದಲಿಗೆ ನನ್ನ ವಿದ್ಯಾರ್ಥಿ ಕುಮಾರಿ ಮಂಜುಶ್ರೀ ರಂಗ ಪ್ರವೇಶ ಮಾಡಿದರೆ ಎರಡನೇಯದಾಗಿ ಕುಮಾರಿ ನಿಖಿತಾ.ಕೆ.ರವರು ರಂಗಪ್ರವೇಶ ಮಾಡುತ್ತಿರುವುದು ತುಂಬಾ ಸಂತೋಷವಾಗಿದೆ ಇಂತಹ ಪ್ರತಿಭೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕು ಎಂದು ತಿಳಿಸುತ್ತಾ ಭರತನಾಟ್ಯದಲ್ಲಿ ಪ್ರಾವೀಣ್ಯತೆಯನ್ನು ಪಡೆದು ರಂಗಪ್ರವೇಶ ಪಡೆಯುತ್ತಿರುವ ಕಮಾರಿ ಲಿಖಿತಾ.ಕೆ ಅವರು ರಾಜ್ಯಮಟ್ಟದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಲಿ ಎಂದು ಆಶೀರ್ವದಿಸಿದರು.