
ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿಯ ಟಿಕೆಟ್ ವಂಚಿತ ಬಂಡಾಯ ಅಭ್ಯರ್ಥಿ ರಘುಪತಿ ಭಟ್ ಪತ್ರಿಕೆ ಜೊತೆ ದೂರವಾಣಿಯ ಮೂಲಕ ಮಾತನಾಡುತ್ತಾ ತಮ್ಮ ಅಸಮಾಧಾನಕ್ಕೆ ಕಾರಣ ಹಾಗೂ ತಮ್ಮ ಮುಂದಿನ ನಡೆಯ ಬಗ್ಗೆ ವಿವರವಾಗಿ ತಿಳಿಸಿದರು.
ಪತ್ರಿಕೆ:
ಡಾ/ ಸರ್ಜಿ ಗೆ ಟಿಕೆಟ್ ನೀಡಿಕೆ ಬಗ್ಗೆ ನಿಮ್ಮ ಅಭಿಪ್ರಾಯವೇನು..?
ರಘುಪತಿ ಭಟ್:
ಡಾಕ್ಟರ್ ಸರ್ಜಿ ಒಂದುವರೆ ವರ್ಷದ ಹಿಂದೆ ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ ಪಕ್ಷಕ್ಕೆ ನಿಷ್ಠಾವಂತರಾಗಿ ದುಡಿದ ಸಾಕಷ್ಟು ಜನ ಹಿರಿಯರು ಇದ್ದಾರೆ ಅವರನ್ನು ಬಿಟ್ಟು ಸರ್ಜಿಗೆ ಕೊಟ್ಟಿರುವುದು ಎಷ್ಟರಮಟ್ಟಿಗೆ ಸರಿ ಹಣಬಲ ಜಾತಿಬಲದಿಂದ ಸರ್ಜಿಗೆ ಟಿಕೆಟ್ ನೀಡಿದ್ದಾರೆ ಇದು ಸರಿಯಾದ ಕ್ರಮವಲ್ಲ.
ಪತ್ರಿಕೆ:
ಡಾ/ ಸರ್ಜಿ ನಾನು ಆರ್ ಎಸ್ ಎಸ್ ನ ನಲ್ಲಿ ಕಾರ್ಯನಿರ್ವಹಿಸಿದ್ದೇನೆ ಎಂದು ಹೇಳುತ್ತಿದ್ದಾರಲ್ಲ..?
ರಘುಪತಿ ಭಟ್:
ಶಾಲಾ ಕಾಲೇಜು ದಿನಗಳಲ್ಲಿ ಆರ್ ಎಸ್ ಎಸ್ ನಲ್ಲಿ ಪ್ರತಿಯೊಬ್ಬರು ಭಾಗವಹಿಸಿರುತ್ತಾರೆ ಆದರೆ ನಂತರದ ದಿನಗಳಲ್ಲಿ ಅವರ ಸಿದ್ಧಾಂತ ಅವರ ಮನಸ್ಸಿಗೆ ಬಂದ ಹಾಗೆ ಅವರು ಬೇರೆ ಕಡೆ ವಾಲುವ ಸಾಧ್ಯತೆ ಇರುತ್ತದೆ ಆದರೆ ಸರ್ಜಿ ಎಲ್ಲೂ ಕೂಡ ಪಕ್ಷಕ್ಕೆ ಕೆಲಸ ಮಾಡಿದ ಉದಾಹರಣೆಗಳು ಇಲ್ಲ.
ಪತ್ರಿಕೆ:
ತಮ್ಮ ಮನವೊಲಿಕೆಯ ಕೆಲಸ ಆಗುತ್ತಿದೆ ಎನ್ನುತ್ತಾರಲ್ಲ ಸರ್ಜಿ..?
ರಘುಪತಿ ಭಟ್:
ಇದು ಸುಳ್ಳು ಬಿವೈ ರಾಘವೇಂದ್ರ ಬಿಟ್ಟರೆ ಕೆಲವೊಬ್ಬ ರಾಜ್ಯ ನಾಯಕರು ಹೊರತುಪಡಿಸಿ ಬಿಜೆಪಿ ರಾಜ್ಯಾಧ್ಯಕ್ಷರು ಸೇರಿದಂತೆ ಯಾರು ಇಲ್ಲಿಯವರೆಗೂ ನನ್ನನ್ನು ಸಂಪರ್ಕಿಸಿಲ್ಲ ಮನವೊಲಿಕೆಗೆ ಮಾಡುವುದಿದ್ದರೆ ಚುನಾವಣೆಗೆ ನಿಲ್ಲುವ ಮುಂಚೆನೇ ಮಾಡಬೇಕಿತ್ತು ಅಥವಾ ಚುನಾವಣೆಗೆ ಟಿಕೆಟ್ ನೀಡುವ ಮುನ್ನವೇ ಚರ್ಚಿಸಬೇಕಿತ್ತು ಈಗ ಯಾರು ನನ್ನನ್ನು ಸಂಪರ್ಕ ಮಾಡಿಲ್ಲ .
ಪತ್ರಿಕೆ:
ಡಾ/ ಸರ್ಜಿ ನಿಮ್ಮನ್ನು ಸಂಪರ್ಕ ಮಾಡಿದ್ದಾರಾ..?
ರಘುಪತಿ ಭಟ್:
ಅಭ್ಯರ್ಥಿ ಸರ್ಜಿ ಇಲ್ಲಿವರೆಗೂ ನನ್ನನ್ನು ಸಂಪರ್ಕ ಮಾಡಿಲ್ಲ.
ಪತ್ರಿಕೆ:
ಒಂದು ವೇಳೆ ಪಕ್ಷ ಮನವೊಲಿಸಿದರೆ ಅಭ್ಯರ್ಥಿ ನಿಮ್ಮ ಜೊತೆ ಮಾತನಾಡಿದರೆ ನೀವು ಒಪ್ಪುತ್ತೀರಾ..?
ರಘುಪತಿ ಭಟ್:
ಖಂಡಿತ ಸಾಧ್ಯವಿಲ್ಲ ಯಾರೇ ಮನವೊಲಿಸಿದರು ಒಪ್ಪುವ ಪ್ರಶ್ನೆಯೇ ಇಲ್ಲ ಏಕೆಂದರೆ ಈಗಾಗಲೇ ನನಗಾಗಿ ಸಾವಿರಾರು ಜನ ಕಾರ್ಯಕರ್ತರು ಎಲ್ಲೆಡೆ ಕಾರ್ಯನಿರ್ವಹಿಸುತ್ತಿದ್ದಾರೆ ಹಾಗಾಗಿ ನಾನು ಒಪ್ಪಿದರೆ ಅವರ ಮನಸ್ಸಿಗೆ ನೋವು ಉಂಟಾಗುತ್ತದೆ ಅವರಿಗೆ ನಾನು ಮೋಸ ಮಾಡಿದ ಹಾಗೆ ಆಗುತ್ತದೆ.
ಪತ್ರಿಕೆ:
ನಿಮ್ಮ ಅಸಮಾಧಾನಕ್ಕೆ ಕಾರಣವೇನು..?
ರಘುಪತಿ ಭಟ್:
ಹಿಂದೆ ನನಗೆ ಟಿಕೆಟ್ ನೀಡದೆ ಇದ್ದಾಗ ನಾನು ಅದನ್ನು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಒಪ್ಪಿ ಬೇರೆಯವರಿಗೆ ಕೆಲಸ ಮಾಡಿದ್ದೆ ಆ ಸಮಯದಲ್ಲಿ ನನಗೆ ಮುಂದಿನ ದಿನಗಳಲ್ಲಿ ಪದವೀಧರ ಕ್ಷೇತ್ರದ ಟಿಕೆಟ್ ಅಥವಾ ಶಿಕ್ಷಕರ ಕ್ಷೇತ್ರದ ಟಿಕೆಟ್ ನೀಡುವುದಾಗಿ ಆಶ್ವಾಸನೆ ನೀಡಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ ಅವರು ನೀಡಲಿಲ್ಲ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಬಿಜೆಪಿಯಲ್ಲಿ ಬೆಲೆ ಇಲ್ಲ ಕಾಂಗ್ರೆಸ್ ರೀತಿ ಗಾಡ್ ಫಾದರ್ ಸಂಸ್ಕೃತಿ ಬಿಜೆಪಿಯಲ್ಲಿ ಬೆಳೆಯುತ್ತಿದೆ ಯಾರು ನಿಂತರೂ ಗೆಲ್ಲುತ್ತಾರೆ ಯಾರನ್ನು ಬೇಕಾದರೂ ಗೆಲ್ಲಿಸಬಹುದು ಎನ್ನುವ ಭಾವನೆ ಬಿಜೆಪಿಯಲ್ಲಿ ಬಂದಿದೆ ಹಣ ಜಾತಿಗೆ ಬೆಲೆ ನೀಡುತ್ತಿದ್ದಾರೆ ನಿಷ್ಠಾವಂತ ಕಾರ್ಯಕರ್ತರಿಗೆ ಅಲ್ಲ ಪದವೀಧರ ಕ್ಷೇತ್ರದ ಬಿಜೆಪಿಯ ಅಭ್ಯರ್ಥಿ ಸರ್ಜಿ ಹಿಂದೆ ಹರ್ಷ ಪ್ರಕರಣ ನಡೆದಾಗ ಎಡಪಂಥೀಯರ ಜೊತೆ ಸೇರಿಕೊಂಡು ಪಕ್ಷದ ವಿರುದ್ಧ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು ಅಂತವರಿಗೆ ಟಿಕೆಟ್ ನೀಡಿದ್ದಾರೆ ಇದು ನನ್ನ ಅಸಮಾಧಾನಕ್ಕೆ ಕಾರಣ.
ಪತ್ರಿಕೆ:
ಮುಂದೆ ಹೇಗೆ ಬಿಜೆಪಿ ತೊರೆಯುತ್ತೀರಾ..?
ರಘುಪತಿ ಭಟ್:
ಬಿಜೆಪಿ ಪಕ್ಷ ನನ್ನ ಉಸಿರಿನಲ್ಲಿ ಇದೆ ಅದನ್ನು ತೊರೆಯುವ ಪ್ರಶ್ನೆಯೇ ಇಲ್ಲ ಹಿಂದೆ ಕೂಡ ನಾನು ಹೇಳಿದ್ದೆ ನಾನು ಸತ್ತ ನಂತರ ಕೂಡ ಬಿಜೆಪಿಯ ಬಾವುಟ ನನ್ನ ದೇಹದ ಮೇಲೆ ಇರಬೇಕು ಎಂದು ಹಾಗಾಗಿ ಯಾವಾಗಲೂ ನಾನು ಬಿಜೆಪಿಯ ಪಕ್ಷದಲ್ಲೇ ಇರುತ್ತೇನೆ ಆದರೆ ಈ ತೆರನಾದ ಬೆಳವಣಿಗೆಗಳ ವಿರುದ್ಧ ಬಂಡಾಯ ವೆದ್ದಿದ್ದೇನೆ ಹೊರತು ಬಿಜೆಪಿಯ ಪಕ್ಷದ ವಿರುದ್ಧ ಅಲ್ಲ.
ರಘುರಾಜ್ ಹೆಚ್. ಕೆ..9449553305..