
ವಿನೂತನ ಕಾರ್ಯಕ್ರಮಗಳಿಗೆ ಹೆಸರುವಾಸಿಯಾಗಿರುವ ಜೆಸಿಐ ಶಿವಮೊಗ್ಗ ರಾಯಲ್ಸ್ ನೇತೃತ್ವದಲ್ಲಿ ಶಿವಮೊಗ್ಗದ ಎಲ್ಲಾ ಜೆಸಿಐ ಸಂಸ್ಥೆಗಳ ಸಹಯೋಗದೊಂದಿಗೆ ಮೇ 23ರ ಮಧ್ಯರಾತ್ರಿ 12 ಗಂಟೆಯಿಂದ ಮೇ 24ರ ಮಧ್ಯರಾತ್ರಿ 12 ಗಂಟೆಯವರೆಗೆ “ಅನವರತ-24” ಎಂಬ ಶೀರ್ಷಿಕೆ ಅಡಿಯಲ್ಲಿ ವಿಶ್ವ ದಾಖಲೆಯ 24 ಗಂಟೆಗಳ ನಿರಂತರ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ .
ಜೆಸಿಐನ ನೇತೃತ್ವ ವಹಿಸಿರುವ ಸುದರ್ಶನ್ ತಾಯಿಮನೆ ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಈ ತರಬೇತಿ ವಿಶೇಷತೆ ಎಂದರೆ 24 ತರಬೇತುದಾರರು 24 ವಿವಿಧ ವಿಷಯಗಳನ್ನು ಒಳಗೊಂಡ 24ಕ್ಕೂ ಹೆಚ್ಚು ಶಿಬಿರಾರ್ಥಿಗಳು ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಇದು ನಿರಂತರವಾಗಿ ನಡೆಯುವ ಕಾರ್ಯಕ್ರಮ ಎಂದು ಹೇಳಿದರು.
ತರಬೇತುದಾರರಾದ ಜೆಎಫ್‍ಎಮ್ ಮೋಹನ್ ಕಲ್ಪತರು ಅವರು ಈ ತರಬೇತಿಯನ್ನು ಪ್ರತಿ ವರ್ಷ ಜೆಸಿಐ ಭಾರತದಿಂದ ಆಚರಿಸುವ ರಾಷ್ಟ್ರೀಯ ತರಬೇತಿ ದಿನದ ಪ್ರಯುಕ್ತ ಅನೇಕ ಸಂಸ್ಥೆಗಳ ಸಹಕಾರದಿಂದ ನಡೆಸಲಾಗುತ್ತಿದೆ, ಇದು “ನೊಬೆಲ್ ವರ್ಲ್ಡ್ ರೆಕಾರ್ಡ್” , “ಲಿಮ್ಕಾ ಬುಕ್ ಆಫ್ ರೆಕಾರ್ಡ್” ಅನ್ನು ಸೇರಲಿದೆ.
ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತಿ ಇರುತ್ತಾರೆ ಎಂದು ತಿಳಿಸಿದರು.
ಮತ್ತೊಬ್ಬ ತರಬೇತುದಾರರಾದ ಜೆಸಿ ಪ್ರಮೋದ್ ಶಾಸ್ತ್ರಿ ರವರು ಮಾತನಾಡಿ ಎಲ್ಲಾ 24 ವಿಷಯಗಳ ತರಬೇತಿಯನ್ನು ವಿವಿಧ ವರ್ಗದ ಶಿಬಿರಾರ್ಥಿಗಳಿಗೆ ಉಪಯೋಗವಾಗುವಂತೆ ಸಿದ್ಧಪಡಿಸಲಾಗಿದ್ದು. ಕ್ರಿಯಾತ್ಮಕ ಶೈಲಿಯಲ್ಲಿ ಜೆಸಿಐ ಭಾರತದಿಂದ ಪ್ರಮಾಣಿಕೃತಗೊಂಡ ರಾಷ್ಟ್ರೀಯ ಮತ್ತು ವಲಯ ತರಬೇತುದಾರರಿಂದ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಸ್ಮಿತಾ ಮೋಹನ್, ದಿವ್ಯ ಪ್ರವೀಣ್, ಮಧು, ನವೀನ್ ತಲಾರಿ ಉಪಸ್ಥಿತರಿದ್ದರು.
ರಘುರಾಜ್ ಹೆಚ್.ಕೆ 9449553305.