
ನಗರದ ದುರ್ಗಿಗುಡಿಯ ೨ನೇ ಸಮಾನಾಂತರ ರಸ್ತೆಯಲ್ಲಿ ಮಹಾಲಕ್ಷ್ಮಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ೩ನೇ ವರ್ಷದ ವಾರ್ಷಿಕೋತ್ಸವ ಮೇ ೨೪ರಿಂದ ೨೬ರವರೆಗೆ ಆಯೋಜಿಸಲಾಗಿದೆ ಎಂದು ಆಸ್ಪತ್ರೆಯ ವೈದ್ಯ ಡಾ.ಗೋಪಾಲಕೃಷ್ಣ ಶಾನ್‌ಭಾಗ್ ಹೇಳಿದರು.
ಅವರು ಇಂದು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಹಾಲಕ್ಷ್ಮಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯು ಕೇವಲ ಸೇವೆಯ ಆಧಾರದ ಮೇಲೆ ಪ್ರಾರಂಭವಾಗಿದೆ. ಅದರಲ್ಲೂ ಬಡವರ ಪರವಾಗಿ ನಮ್ಮ ಆಸ್ಪತ್ರೆಯಿದೆ. ಆಸ್ಪತ್ರೆಯ ವೆಚ್ಚ ಕೂಡ ಬಡವರು ಮತ್ತು ಮಧ್ಯಮ ವರ್ಗದವರನ್ನು ಗಣನೆಯಲ್ಲಿಟ್ಟುಕೊಂಡು ನಾವು ಸೇವೆ ಸಲ್ಲಿಸುತ್ತ ಬಂದಿದ್ದೇವೆ. ಹಣ ನಮಗೆ ಮುಖ್ಯವಲ್ಲ ಎಂದರು.
ಆಸ್ಪತ್ರೆಯಲ್ಲಿ ಬಡವರಿಗಾಗಿಯೇ ಒಂದು ವಿಶೇಷ ವಾರ್ಡ್‌ನ್ನು ಕಲ್ಪಿಸಲಾಗಿದೆ. ಇಲ್ಲಿ ಕೇವಲ ದಿನಕ್ಕೆ ೬೦೦ ರೂ.ಗಳು ಮಾತ್ರ ಶುಲ್ಕ ವಿಧಿಸಲಾಗುತ್ತದೆ. ಒಂದು ನಾರ್ಮಲ್ ಹೆರಿಗೆಗೆ ಈ ವಾರ್ಡ್‌ನಲ್ಲಿದ್ದಾರೆ ಕೇವಲ ೧೨ ಸಾವಿರದೊಳಗೆ ಖರ್ಚಾಗುತ್ತದೆ ಅಷ್ಟೇ ಎಂದರು.
ಇದಲ್ಲದೆ ವಿಶೇಷವಾಗಿ ಇನ್ನು ೨ ವಾರ್ಡ್‌ಗಳನ್ನು ನಾವು ತೆರೆದಿದ್ದೇವೆ. ಇವು ಮಧ್ಯಮ ವರ್ಗದವರಿಗೆ ಸುಲಭವಾಗಿ ಸಿಗುತ್ತದೆ. ಇದು ಕೂಡ ೨೦ ಸಾವಿರದೊಳಗೆ ಇರುತ್ತದೆ ಎಂದರು.
ವಿಶೇಷ ವಾರ್ಡ್‌ನಲ್ಲಿ ಶಸ್ತ್ರ ಚಿಕಿತ್ಸೆಯೊಂದಿಗೆ ಹೆರಿಗೆಯಾದರೆ ೩೫ ಸಾವಿರ ತಲುಪುತ್ತದೆ ಎಂದರು.
ಒಟ್ಟಾರೆ ವೈದ್ಯಕೀಯ ಎನ್ನುವುದು ಒಂದು ಸೇವೆಯ ಅಂಗವೇ ಆಗಿದೆ. ಇಂದಿನ ದುಬಾರಿ ಕಾಲದಲ್ಲಿ ನಾವು ಸೇವೆಯನ್ನೇ ಮುಂದಿಟ್ಟುಕೊಂಡು ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡುತ್ತಿದ್ದೇವೆ. ಇದು ಯಾವ ಆಸ್ಪತ್ರೆಗೂ ಸ್ಪರ್ಧೆಯಲ್ಲ ಎಂದರು.
೩ನೇ ವಾರ್ಷಿಕೋತ್ಸವದ ಅಂಗವಾಗಿ ನಮ್ಮ ಆಸ್ಪತ್ರೆಯಲ್ಲಿ ಮೇ ೨೬ರಂದು ಬೆಳಿಗ್ಗೆ ೧೨ ಗಂಟೆಗೆ ಪ್ರಸೂತಿ ಕೊಠಡಿ, ಶಸ್ತ್ರ ಚಿಕಿತ್ಸಾ ಕೊಠಡಿ, ವೈದ್ಯಕೀಯ ತೀವ್ರ ನಿಗಾ ಘಟಕ ನವಜಾತ ಶಿಶುಗಳ ತೀವ್ರ ನಿಗಾ ಘಟಕ ಮತ್ತು ಎಕಾನಮಿ ವಾರ್ಡ್‌ಗಳನ್ನು ಪ್ರಾರಂಭಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಸಂಜಯ್, ಆಕಾಶ್, ಪುನಿತ್ ಇದ್ದರು.