
ವಾಲ್ಮೀಕಿ ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಚಂದ್ರಶೇಖರ್ ಶಿವಮೊಗ್ಗದ ವಿನೋಬನಗರದ ಸ್ವ ಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ಈ ಆತ್ಮಹತ್ಯೆಗೆ ಮೂರು ಜನ ಕಾರಣರೂ ಎಂದು ಡೆತ್ ನೋಟ್ ಬರೆದು ಸಾವನ್ನಪ್ಪಿದ್ದರು .
ಅದರಲ್ಲಿ ಲೆಕ್ಕಾಧಿಕಾರಿ ಪರುಶುರಾಮ್ ಹಾಗೂ ಎಂಡಿ ಜೆ ಜೆ ಪದ್ಮನಾಭ ಅವರುಗಳ ಹೆಸರು ಕೂಡ ಇತ್ತು ಇದೀಗ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಸರ್ಕಾರ ಎಂ ಡಿ ಪದ್ಮನಾಭ ಹಾಗೂ ಲೆಕ್ಕಾಧಿಕಾರಿ ಪರಶುರಾಮ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿರುವ ಸಚಿವ ನಾಗೇಂದ್ರ ಅವರು ಇದರಲ್ಲಿ ಯಾರನ್ನು ರಕ್ಷಣೆ ಮಾಡುವ ಉದ್ದೇಶ ನಮಗೆ ಇಲ್ಲ ಈಗಾಗಲೇ ಅಧಿಕಾರಿಗಳು 88 ಕೋಟಿ ಹಣವನ್ನು ವಾಪಸ್ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ ಎಂದು ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಬೀಡು ಬಿಟ್ಟಿರುವ ಸಿಐಡಿ ಅಧಿಕಾರಿಗಳು:
ಶಿವಮೊಗ್ಗದಲ್ಲಿ ದೇವರ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಶಿವಮೊಗ್ಗ ಹಾಗೂ ಬೆಂಗಳೂರಿನಲ್ಲಿ ತನಿಖೆ ನಡೆಸುತ್ತಿದ್ದು ಶಿವಮೊಗ್ಗದ ವಿನೋದ್ ನಗರದ ಚಂದ್ರಶೇಖರ್ ಗೃಹದಲ್ಲಿ ಇಂದು ಸುಮಾರು ಮೂರರಿಂದ ನಾಲ್ಕು ತಾಸುಗಳ ತನಕ ತನಿಖೆ ನಡೆಸಿದ್ದಾರೆ ಹಾಗೆ ಪುನಹ ತನಿಖೆ ಮುಂದುವರಿಸುವ ಸಾಧ್ಯತೆ ಕೂಡ ಇದೆ.
ಬ್ಯಾಂಕ್ ಅಧಿಕಾರಿಗಳ ವಿರುದ್ಧ ಬಿತ್ತು ಎಫ್ಐಆರ್ :
ಈ ಪ್ರಕರಣದಲ್ಲಿ ಬ್ಯಾಂಕ್ ಅಧಿಕಾರಿಗಳ ವಿರುದ್ಧವು ಗಂಭೀರ ಆರೋಪಗಳು ಕೇಳಿ ಬರುತ್ತಿದ್ದು ಅವರನ್ನು ಕೂಡ ಈ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಅವರ ವಿರುದ್ಧ ಕೂಡ ಎಫ್ ಆರ್ ದಾಖಲಿಸಿದ್ದಾರೆ.
ವಿನಿಯನ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ನ ಅಧಿಕಾರಿಗಳ ವಿರುದ್ಧ ಎಫ್ಐಆರ್ ಬ್ಯಾಂಕ್ ಎಂ.ಡಿ & ಸಿಇಓ ಹಾಗೂ ಎಲ್ಲಾ ನಿರ್ದೇಶಕರ ಮೇಲೆ FIR ಒಟ್ಟು ಆರು ಜನರ ಮೇಲೆ ಎಫ್ ಐ ಆರ್ ಎಫ್. ಎಸ್. ಎಲ್ &ಸಿ. ಐ. ಡಿ ವರದಿ ಬಂದ ಮೇಲೆ ಪ್ರಕರಣದಲ್ಲಿ ಯಾರು ಆ ತಪ್ಪಿತಸ್ಥರು ಎನ್ನುವುದು ಬಹಿರಂಗವಾಗುವ ಸಾಧ್ಯತೆ ಇದೆ.