
ಶಿವಮೊಗ್ಗ : ನಗರದಲ್ಲಿ ಬಿಜೆಪಿ ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರು ಆತ್ಮಹತ್ಯೆ ಮಾಡಿಕೊಂಡ ಚಂದ್ರಶೇಖರ್ ಕುಟುಂಬಕ್ಕೆ ಸಾಂತ್ವನ ಹೇಳಲು ಅವರ ವಿನೂಬನಗರದ ನಿವಾಸಕ್ಕೆ ಇಂದು ಭೇಟಿ ನೀಡಿದ್ದರು.
ಪ್ರಮಾಣಿಕ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆಯಿಂದ ಅವರ ಕುಟುಂಬಕ್ಕೆ ನಷ್ಟವಾಗಿದೆ
ಈ ಹಗರಣವನ್ನು ನನ್ನ ತಲೆಗೆ ಕಟ್ಟುತ್ತಿದ್ದಾರೆ ಎಂದು ಚಂದ್ರಶೇಖರನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ
ಇಬ್ಬರು ಪುತ್ರರೊಂದಿಗೆ ಜೀವನ ನಡೆಸುವುದು ಕಷ್ಟವಾಗಿದೆ ಎಂದು ಚಂದ್ರಶೇಖರನ್ ಪತ್ನಿ ಕವಿತಾ ಹೇಳುವುದು ಕೇಳಿ ದುಃಖವಾಗುತ್ತದೆ.
ಪರಿಶಿಷ್ಟ ಪಂಗಡಗಳ ಇಲಾಖೆಯ ಸಚಿವ ನಾಗೇಂದ್ರನನ್ನು ಸಂಪುಟದಿಂದ ವಜಗೊಳಿಸಬೇಕು.
ರಾಜಾರೋಷವಾಗಿ ಪರಿಶಿಷ್ಟ ಪಂಗಡದ ನಿಗಮದ 87 ಕೋಟಿ ಹಣವನ್ನು ಲೂಟಿ ಮಾಡಲಾಗಿದೆ.
ಸಚಿವ ನಾಗೇಂದ್ರನನ್ನು ವಜಗೊಳಿಸದಿದ್ದರೆ ಈ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಕೂಡ ದೋಷಿ ಆಗುತ್ತೀರಾ..?;ಈ ಹಗರಣದ ತನಿಖೆಯನ್ನು ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳ ಕಡೆಯಿಂದ ನ್ಯಾಯಾಂಗ ತನಿಖೆ ನಡೆಸಬೇಕು.
ಈ ಪ್ರಕರಣವನ್ನು ಸಿಬಿಐ ತನಿಖೆಗೂ ವಹಿಸಿ ತಕ್ಷಣವೇ 25 ಲಕ್ಷ ರೂ ಪರಿಹಾರ ನೀಡಬೇಕು ಸರ್ಕಾರದ ಅಧೀನದಲ್ಲಿರುವ ಸಿಓಡಿ ತನಿಖೆಯಿಂದ ಈ ಪ್ರಕರಣಕ್ಕೆ ನ್ಯಾಯ ಸಿಗುವುದಿಲ್ಲಸರ್ಕಾರ ಈ ಪ್ರಕರಣವನ್ನು ಮುಚ್ಚಿ ಹಾಕಲು ಹೊರಟಿದೆ ಎಂಬ ಅನುಮಾನ ಉಂಟಾಗಿದೆ ಈ ಪ್ರಕರಣದ ಆರೋಪಿಗಳನ್ನು ಇದುವರೆಗೂ ಕೂಡ ಬಂಧಿಸಿಲ್ಲ.
ಈಶ್ವರಪ್ಪನವರ ಪ್ರಕರಣದಲ್ಲಿ ಯಾರು ಡೆತ್ ನೋಟ್ ಬರೆದಿದ್ದಕ್ಕೆ ರಾಜೀನಾಮೆ ಕೇಳಿರಲಿಲ್ಲವಾ..?!
ಈಶ್ವರಪ್ಪನವರ ಪ್ರಕರಣಕ್ಕೆ ಒಂದು ನ್ಯಾಯ? ನಾಗೇಂದ್ರ ಪ್ರಕರಣಕ್ಕೆ ಒಂದು ನ್ಯಾಯನಾ? ಎಂದು ಪ್ರಶ್ನಿಸಿದ ಕೋಟ ಶ್ರೀನಿವಾಸ ಪೂಜಾರಿ ನೂಂದ ಕುಟುಂಬಕ್ಕೆ ನ್ಯಾಯ ಸಿಗದೇ ಇದ್ದರೆ ಮುಂದಿನ ದಿನಗಳಲ್ಲಿ ರಾಜ್ಯಪಾಲರಿಗೆ ದೂರು ನೀಡಲಾಗದು ಎಂದರು.