
ಶಿವಮೊಗ್ಗ: ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ನವೀನ್ ಅವರ ನೇತೃತ್ವದಲ್ಲಿ ಭೂವಿಜ್ಞಾನಿಗಳಾದ ಅವಿನಾಶ್ ಜ್ಯೋತಿ ರಶ್ಮಿ ಅವರನ್ನು ಒಳಗೊಂಡ ತಂಡ ನಿರಂತರವಾಗಿ ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ನಡೆಯುತ್ತಿರುವ ವ್ಯಾಪಕವಾದ ಆಕ್ರಮ ಮರಳುದಂದೆಗೆ ಬ್ರೇಕ್ ಹಾಕಲು ಮುಂದಾಗಿದ್ದು ದಿನನಿತ್ಯ ಹಗಲು ರಾತ್ರಿ ಎನ್ನದೆ ಸಾಕಷ್ಟು ಆಕ್ರಮ ಮರಳು ಲಾರಿಗಳನ್ನು ಖಚಿತ ಮಾಹಿತಿಯ ಆಧಾರದ ಮೇಲೆಯೇ ವಶಪಡಿಸಿಕೊಂಡು ಸಂಬಂಧಪಟ್ಟ ಠಾಣೆಗೆ ಒಪ್ಪಿಸುತ್ತಿದ್ದಾರೆ.
ಇಂದು ಬೆಳಗ್ಗೆ ಕೂಡ ಪಿಲ್ಲಂಗೆರೆ, ರಿಪ್ಪಿನ ಪೇಟೆ ,ಹೊಳೆ ಹೊನ್ನೂರು, ಭಾಗದ ಅಕ್ರಮ ಮರಳು ಲಾರಿಗಳನ್ನು ವಶಪಡಿಸಿಕೊಂಡು ಸಂಬಂಧಪಟ್ಟ ಠಾಣೆಗೆ ಒಪ್ಪಿಸಿದ್ದಾರೆ.
ಬೇಡರ ಹೊಸಳ್ಳಿಯಲ್ಲಿ ಒಂದು ಲಾರಿ ಹಾಗೂ ಒಂದು ಜೆಸಿಬಿ ಯನ್ನು ವಶಪಡಿಸಿಕೊಂಡು ಗ್ರಾಮಾಂತರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

ಮಂಡಗದ್ದೆಯ ಮರಳು ಲೂಟಿಗೆ ಬಿದ್ದಿಲ್ಲ ಬ್ರೇಕ್;
ಮಂಡಗದ್ದೆಯ ಸೇರಿದಂತೆ ತೀರ್ಥಹಳ್ಳಿಯ ಕೆಲವು ಭಾಗಗಳಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆಗೆ ಇನ್ನೂ ಬ್ರೇಕ್ ಬಿದ್ದಿಲ್ಲ ಇಲಾಖೆಯವರು ಹಗಲು ರಾತ್ರಿ ಎನ್ನದೆ ಮಂಡಗದ್ದೆಯ ಅಕ್ರಮ ಮರಳುದಂದೆಗೆ ಬ್ರೇಕ್ ಹಾಕಲು ಮುಂದಾಗಿದ್ದರು ಕೂಡ ಅಲ್ಲಿಯ ಕೆಲವು ಪುಡಾರಿಗಳು ರಾಜಕೀಯ ನಾಯಕರಗಳ ಹೆಸರುಗಳನ್ನು ದುರುಪಯೋಗ ಪಡಿಸಿಕೊಂಡು ನಿರಂತರವಾಗಿ ದಂಧೆ ನಡೆಸುತ್ತಿದ್ದು ತುಂಗೆಯ ಒಡಲನ್ನು ಲೂಟಿ ಮಾಡುತ್ತಿದ್ದಾರೆ.