Wednesday, April 30, 2025
Google search engine
Homeಶಿವಮೊಗ್ಗಅದಿಶಕ್ತಿ ಸಮೂಹ ಸಂಸ್ಥೆಯಿಂದ ಭಾವಸಾರ ಕ್ಷತ್ರಿಯ ಮಹಾಜನ ಸಮಾಜಕ್ಕೆ ಮೋಕ್ಷ ವಾಹಿನಿ ವಾಹನ ಹಸ್ತಾಂತರ..!

ಅದಿಶಕ್ತಿ ಸಮೂಹ ಸಂಸ್ಥೆಯಿಂದ ಭಾವಸಾರ ಕ್ಷತ್ರಿಯ ಮಹಾಜನ ಸಮಾಜಕ್ಕೆ ಮೋಕ್ಷ ವಾಹಿನಿ ವಾಹನ ಹಸ್ತಾಂತರ..!

ಶಿವಮೊಗ್ಗ : ವ್ಯಾಪಾರದೊಂದಿಗೆ ಸಮಾಜ ಸೇವೆ ಮಾಡಬೇಕೆಂಬುದು ನಮ್ಮ ಸಂಸ್ಥೆಯ ಉದ್ದೇಶ. ರಾಜ್ಯದ ಹಲವು ಕಡೆ ಶಾಖೆಗಳನ್ನು ತೆರೆದು ಇಲ್ಲಿಯವರೆಗೆ ೧೦೦೦ ಉದ್ಯೋಗಗಳನ್ನು ಸೃಷ್ಟಿ ಮಾಡಿದ್ದೇವೆ. ಇವರನ್ನು ಅವಲಂಬಿಸಿದ ಜನರನ್ನು ಲೆಕ್ಕ ಹಾಕಿದರೆ ೫೦೦೦ ಸಾವಿರದಷ್ಟು ಜನ ನಮ್ಮ ಸಂಸ್ಥೆಯಿಂದಾಗಿ ಬದುಕು ಸಾಗಿಸುತ್ತಿದ್ದಾರೆ ಎಂದು ಅದಿಶಕ್ತಿ ಸಮೂಹ ಸಮಸ್ಥೆ ಚೇರ್ ಮನ್ ನಾರಾಯಣ ರಾವ್ ತಾತುಸ್ಕರ್ ಹೇಳಿದರು.

ಬುಧವಾರ ನಗರದ ಶಂಕರಮಠ ರಸ್ತೆಯಲ್ಲಿರುವ ಅಧಿಶಕ್ತಿ ಟಾಟಾ ಮೋಟರ್ಸ್ ನ ಸಭಾಂಗಣದಲ್ಲಿ ತಮ್ಮ ಸಂಸ್ಥೆವತಿಯಿಂದ ಭಾವಸಾರ ಕ್ಷತ್ರಿಯ ಮಹಾಜನ ಸಮಾಜಕ್ಕೆಕೊಡುಗೆಯಾಗಿ ಮೋಕ್ಷವಾಹಿನಿ (ಡಿಸ್ಟ್ರಿಬುಶನ್ ಅಫ್ ಹಾರ್ಸ್ ವ್ಯಾನ್) ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸಂಸ್ಥೆಯ ಸಮೂಹ ಘಟಕಗಳನ್ನು ವಿಸ್ತರಿಸಿ ಉದ್ಯೋಗ ಸೃಷ್ಟಿಸುವ ಜೊತೆಗೆ ಈ ರೀತಿಯ ಸಮಾಜ ಸೇವೆಯು ನಮ್ಮ ಕುಟುಂಬ ಸದಸ್ಯರಿಗೆ ಖುಷಿ ಕೊಡುತ್ತದೆ ಎಂದರು.

ಇತ್ತೀಚಿನ ದಿನಗಳಲ್ಲಿ ಮನುಷ್ಯನ ಯಾಂತ್ರಿಕ ಬದುಕು ಶವ ಸಂಸ್ಕಾರ ಕಾರ್ಯಗಳಲ್ಲಿ ಪಾಲ್ಗೊಳ್ಳಲು ಸಮಯವಿಲ್ಲದಂತಾಗಿದ್ದು ದುರದೃಷ್ಟಕರ, ಪಟ್ಟಣದ ಪ್ರದೇಶದಲ್ಲಂತೂ ಇಂತಹವರ ಪ್ರಮಾಣ ಇನ್ನೂ ಹೆಚ್ಚಾಗಿದ್ದು ಹೀಗಾಗಿ ಮೃತದೇಹವನ್ನು ಸಾಗಿಸಲು ಮೋಕ್ಷ ವಾಹಿನಿ ಎಂಬ ವಾಹನವನ್ನು ಸಾರ್ವಜನಿಕ ಸೇವೆಗೆ ಅರ್ಪಿಸಲಾಗುತ್ತಿದೆ ಮೃತರಾದ ಬಳಿಕ ನಮ್ಮ ಶವ ಸಂಸ್ಕಾರ ಹೀಗೆ ಆಗಬೇಕೆಂಬ ಬಯಕೆ ಯಾರಿಗೂ ಇರುವುದಿಲ್ಲ, ಆದರೆ ಶಿವಮೊಗ್ಗದ ರೋಟರಿ ಚಿತಾಗಾರದಲ್ಲಿ ಭಾವಸಾರ ಕ್ಷತ್ರಿಯ ಮಹಾಜನ ಸಮಾಜದ ಅಂಗ ಸಂಸ್ಥೆಗಳಾದ ಯುವಕ ಮಂಡಳಿ ಹಾಗೂ ಭಾವಸಾರ ವಿಷನ್ ಇಂಡಿಯಾದಿಂದ ಒಲೆಗಳ ನಿರ್ಮಾಣವಾಗಿದೆ. ಇದೀಗ ಮೃತ ದೇಹವನ್ನು ಮೆರವಣಿಗೆ ಮೂಲಕ ಸಾಗಿಸಲು ಮೋಕ್ಷ ವಾಹಿನಿ ಎಂಬ ಸುಂದರ ವಾಹನವನ್ನು ಅರ್ಪಿಸಲಾಗಿದೆ ಎಂದರು.

ಈ ವೇಳೆ ಸಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶ್ ಎನ್.ತಾತುಸ್ಕರ್ ಮಾತನಾಡಿ, ಸಮಾಜ ಸೇವೆಯ ಭಾಗವಾಗಿ ನಮ್ಮ ಅಧಿಶಕ್ತಿ ಸಮೂಹ ಸಂಸ್ಥೆ ವತಿಯಿಂದ ೨೧ ಲಕ್ಷ ರೂ. ವೆಚ್ಚದ ಮೋಕ್ಷ ವಾಹಿನಿಯೆಂಬ ಮೃತದೇಹವನ್ನು ಸಾಗಿಸುವ ವಾಹನವನ್ನು ಇಂದು ಲೋಕಾರ್ಪಣೆ ಮಾಡುತ್ತಿದ್ದೇವೆ. ಈ ಹಿಂದೆಯು ನಮ್ಮ ಸಂಸ್ಥೆಯು ಕೃತಕ ಕಾಲು ಜೋಡಣೆ, ಉಚಿತ ಹೊಲಿಗೆ ಯಂತ್ರಗಳ ವಿತರಣೆಯಂತಹ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದೆ. ಇದಕ್ಕೆನಮ್ಮ ವ್ಯಾಪಾರ ವಹಿವಾಟಿನ ಕರ್ಮಭೂಮಿಯಾದ ಶಿವಮೊಗ್ಗ ನಗರಕ್ಕೆ ಇದನ್ನು ಸಮರ್ಪಿಸುವುದಕ್ಕೆ ನಮಗೆ ಹೆಮ್ಮೆ ಎನಿಸುತ್ತದೆ. ಕೇವಲ ೧೭ ವರ್ಷದ ಹಿಂದೆ ೨೫ ಉದ್ಯೋಗಿಗಳೊಂದಿಗೆ ಪ್ರಾರಂಭವಾದ ನಮ್ಮ ಸಂಸ್ಥೆಯು ಇಂದು ೧೦೦೦ ಉದ್ಯೋಗ ಸೃಷ್ಟಿಸುವುದರ ಜೊತೆಗೆ ೫೦೦೦ ಜನರ ಬದುಕಿಗೆ ಆಸರೆಯಾಗಿರುವುದು ನಮ್ಮ ಸಂಸ್ಥೆಯ ಸಮಾಜ ಸೇವೆ ಒಂದು ಭಾಗ. ತಾನಿಷ್ಕ್ ಜ್ಯುಯೆಲ್ಲರಿಯಂತಹ ಕಂಪೆನಿಗಳನ್ನು ಸ್ಥಾಪಿಸುವ ಮಟ್ಟಕ್ಕೆ ನಮ್ಮ ಪ್ರಯಾಣ ಮುಂದುವರಿದಿದೆ. ಇದಕ್ಕೆಲ್ಲಾ ಸಮಾಜವು ಕಾರಣವಾಗಿದೆ. ಆ ಸಮಾಜಕ್ಕೆ ಮೋಕ್ಷ ವಾಹಿನಿ ವಾಹನ ಸಮರ್ಪಣೆ ಒಂದು ಚಿಕ್ಕ ಸೇವೆ ಎಂದು ನುಡಿದರು.

ಅದಿಶಕ್ತಿ ಸಂಸ್ಥೆವತಿಯಿಂದ ಮೋಕ್ಷವಾಹಿನಿ ವಾಹನವನ್ನು ಹುಬ್ಬಳ್ಳಿಯ ರೋಟರಿ ಕ್ಲಬ್ ಗೆ ಹಸ್ತಾಂತರಿಸಿ, ಬಳಿಕ ಭಾವಸರ ಕ್ಷತ್ರಿಯ ಮಹಾಜನ ಸಮಾಜಕ್ಕೆ ಉಸ್ತುವಾರಿಗಾಗಿ ಹಸ್ತಾಂತರಿಸಲಾಯಿತು.

ಈ ವೇಳೆ ಭಾವಸಾರ ಸಮಾಜದ ಅಧ್ಯಕ್ಷ ಗಜೇಂದ್ರನಾಥ್ ಮಾಳೋದೆ, ರೋಟರಿ ಕ್ಲಬ್ ಹುಬ್ಬಳ್ಳಿಯ ಅಧ್ಯಕ್ಷ ಅರವಿಂದ್ ಕುಪ್ಸದ್, ಸಂಸ್ಥೆ ನಿರ್ದೇಶಕರಾದ ಜಯಶ್ರೀ ತಾತುಸ್ಕರ್, ಗೀತಾ ತಾತುಸ್ಕರ್, ಪ್ರತೀಕ್ ತಾತುಸ್ಕರ್, ಉಪಸ್ಥಿತರಿದ್ದರು. ಗೊ.ವ. ಮೋಹನಕೃಷ್ಣ ಕಾರ್ಯಕ್ರಮದ ನಿರೂಪಣೆ ನೆರವೇರಿಸಿದರೆ, ಬಿವಿಐ ಅಧ್ಯಕ್ಷ ದಿನೇಶ್ ಕುಂಟೆ ವಂದನಾರ್ಪಣೆಯನ್ನು ನೆರವೇರಿಸಿದರು.

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...