
ಶಿವಮೊಗ್ಗ: ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಡಾ/ ಆರ್ ಎಂ ಮಂಜುನಾಥ್ ಗೌಡರು ಇಂದು ತಮ್ಮ ಅಧ್ಯಕ್ಷತೆಯಲ್ಲಿ ಅನುಷ್ಠಾನ ಸಭೆಯನ್ನು ಕರೆದು ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾಹಿತಿಯನ್ನು ಅಧಿಕಾರಗಳ ಮೂಲಕ ಪಡೆದುಕೊಂಡರು .
ಎಲ್ಲಾ ಜಿಲ್ಲೆಗಳ 2019- 2020& 2021 -2022 &2023 ಸಾಲಿನ ಕಾಮಗಾರಿಗಳ ಸಂಪೂರ್ಣ ಮಾಹಿತಿ ಪಡೆದು ಗುಣಮಟ್ಟದ ಬಗ್ಗೆ ಮಾಹಿತಿ ತೆಗೆದುಕೊಂಡು ಅದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿವಂತೆ ಸೂಚಿಸಿದರು ಮತ್ತು ಹಳೇ ಕಾಮಗಾರಿ ಹೊಸ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಸಿದರು ಮತ್ತು ನಮ್ಮ ಈಗಿನ ಸರ್ಕಾರದ ಹೊಸ ಶಾಸಕರುಗಳ ಗಮನಕ್ಕೆ ತಂದು ಕಾಮಗಾರಿಗಳ ಬದಲಾವಣೆ ಇದ್ದರೆ ನನ್ನ ಗಮನಕ್ಕೆ ತರಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು
ಒಟ್ಟಿನಲ್ಲಿ ನಮ್ಮ ಕಾಂಗ್ರೆಸ್ ನೇತೃತ್ವದಲ್ಲಿ ರಾಜ್ಯ ಸರ್ಕಾರ ಮಾನ್ಯ ಮುಖಮಂತ್ರಿಗಳು ಶ್ರೀ ಸಿದ್ದರಾಮಯ್ಯ ಉಪಮುಖ್ಯಮಂತ್ರಿಗಳು ಶ್ರೀ ಡಿಕೆ ಶಿವಕುಮಾರ್ ಅವರ ಮತ್ತು ನಮ್ಮ ಮಂಡಳಿಯ ಸಚಿವರು ಡಿ ಸುಧಾಕರ್ ಅವರ ಮಾರ್ಗದರ್ಶನಲ್ಲಿ ಇನ್ನೂ ಹೊಸ ಕಾಮಗಾರಿ ಮತ್ತು ನಮ್ಮ ಪ್ರವಾಸೋದ್ಯಮ ಅಭಿವೃದ್ಧಿ ಬಗ್ಗೆ ನಮ್ಮ ಗಮನವನ್ನು ಹೆಚ್ಚಿನ ರೀತಿಯಲ್ಲಿ ನೀಡಿ ಅಭಿವೃದ್ಧಿಗೊಳಿಸಬೇಕು ಇದಕ್ಕೆ ನಿಮ್ಮ ಸಹಕಾರ ಹೆಚ್ಚು ಇರಬೇಕು ಎಂದು ಸಭೆಯಲ್ಲಿ ತಿಳಿಸಿದರು.
ಸಭೆಯಲ್ಲಿ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಇಲಾಖೆಯ ಸಹ ಕಾರ್ಯದರ್ಶಿ ಹನುಮ ನಾಯ್ಕ್ ಇಂಜಿನಿಯರ್ ಹೆಚ್ ವಿ ವಿಜಯ್ ಹಾಗೂ ಬಂಗಾರಪ್ಪ ಅವರು ಇದ್ದರು.