
ಶಿಕ್ಷಣ ಸಚಿವ ಮಧು ಬಂಗಾರಪ್ಪನವರ ತವರು ಜಿಲ್ಲೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿಗೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಭೂಮೇಶ್ ಎ ಎಚ್ ಎನ್ನುವ ಮುಖ್ಯೋಪಾಧ್ಯಾಯರು ಅನಧಿಕೃತವಾಗಿ ನಿಯಮಬಾಹಿರವಾಗಿ ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ ಸಾಗರ ತಾಲೂಕು ಇಲ್ಲಿಗೆ ವರ್ಗಾವಣೆಯಾಗಿ ಬಂದಿರುತ್ತಾರೆ.

ನಿಯಮಗಳ ಪ್ರಕಾರ ಯಾವುದೇ ಕಾರಣಕ್ಕೂ ಈ ರೀತಿಯ ವರ್ಗಾವಣೆಯಾಗಿ ಬರುವಂತಿಲ್ಲ ಈ ವರ್ಗಾವಣೆ ಹಲವು ಅನುಮಾನಗಳನ್ನು ಮೂಡಿಸುವಂತಿದೆ. ಇಂತಹ ಸ್ಥಳಗಳಿಗೆ ಬರಬೇಕಾದರೆ ಅದರದೇ ಆದ ನೀತಿ ನಿಯಮಗಳಿವೆ ಒಮ್ಮೆ ಆ ನೀತಿ ನಿಯಮಗಳು ಏನು ಎನ್ನುವುದನ್ನು ನೋಡೋಣ ಬನ್ನಿ;
1) ನಿರ್ದಿಷ್ಟ ಹುದ್ದೆಗಳಿಗೆ ಪರೀಕ್ಷೆಗಳ ಮೂಲಕವೇ ಬರಬೇಕು.
2) ಕೌನ್ಸಿಲ್ ಮೂಲಕ ಮೆರಿಟ್ ಆಧಾರದ ಮೇಲೆ ಅರ್ಹತೆ ಇರುವ ಅಭ್ಯರ್ಥಿಗಳ ಆಯ್ಕೆಯಾಗಬೇಕು.
3) ಈ ಹುದ್ದೆಗಳಿಗೆ ಐದು ವರ್ಷಗಳ ಅವಧಿ ಇರುತ್ತದೆ ಒಂದು ಸಲ ಬಂದರೆ ಐದು ವರ್ಷ ಅದೇ ಜಾಗದಲ್ಲಿ ಮುಂದುವರಿಯಬೇಕು.
4) ಪರೀಕ್ಷೆಗೆ ಹಾಜರಾಗದೆ ಮೆರಿಟ್ ಇಲ್ಲದೆ ಯಾವುದೇ ಶಿಫಾರಸ್ಸುಗಳ ಮೂಲಕ ಬರಲು ಈ ಹುದ್ದೆಗೆ ಅವಕಾಶವಿಲ್ಲ. ಇಷ್ಟೆಲ್ಲಾ ನಿಯಮಗಳಿದ್ದರೂ ನಿಯಮ ಮೀರಿ ವರ್ಗಾವಣೆ ಮಾಡಲು ಕಾರಣವೇನು..? ಆದೇಶದಲ್ಲಿ ಪ್ರತಿಯನ್ನು ಶಿಕ್ಷಣ ಸಚಿವರಿಗೆ ಅವರ ಕಾರ್ಯಾಲಯಕ್ಕೆ ಹಾಕಬೇಕು ಆದರೆ ಇದರಲ್ಲಿ ಶಿಕ್ಷಣ ಸಚಿವರ ಆಪ್ತ ಕಾರ್ಯದರ್ಶಿಗೆ ಹಾಕಿರುವ ಕಾರಣವೇನು..? ನಿಯಮಬಾಯಿರವಾಗಿದ್ದರೂ ಇವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿದ ಉತ್ತರ ಕನ್ನಡ ಜಿಲ್ಲೆಯ ಡಿಡಿಪಿಐ ಹಾಗೂ ಸಾಗರದ ಅಕ್ಷರ ದಾಸೋಹಕ್ಕೆ ನೇಮಕ ಮಾಡಿಕೊಂಡ ಶಿವಮೊಗ್ಗ ಜಿಲ್ಲೆಯ ಡಿಡಿಪಿಐ ನಿಲುವೇನು..?! ಮುಖ್ಯಮಂತ್ರಿಗಳಿಂದ ಸಿಪಾರಸ್ಸಿಗೆ ಬಳಸಲ್ಪಟ್ಟ ಆದೇಶ ಇದಲ್ಲ ಅಧೀನ ಕಾರ್ಯದರ್ಶಿಗಳು ಈ ಆದೇಶ ಮಾಡಿದ್ದಾರೆ ಅಂದರೆ ಅವರಿಗೆ ಕಾನೂನಿನ ಅರಿವಿಲ್ಲವೇ..?! ಇದೇ ತಿಂಗಳ 25/ 6/2024 ರಂದು ಪರೀಕ್ಷೆ ಬರೆದ ಆಕಾಂಕ್ಷಿಗಳಿಗೆ ಬೆಂಗಳೂರಿನಲ್ಲಿ ಕೌನ್ಸಿಲಿಂಗ್ ನಡೆಯುತ್ತದೆ.
ಈ ಸಮಯದಲ್ಲಿ ಖಾಲಿ ಇರುವ ಸಾಗರ ಸಹಾಯಕ ನಿರ್ದೇಶಕ ಹುದ್ದೆಯನ್ನು ಖಾಲಿ ತೋರಿಸುತ್ತಾರಾ? ಅಥವಾ ನಿಯಮವಿಲ್ಲದ ವರ್ಗಾವಣೆಯಿಂದ ಬಂದಿರುವ ಅಧಿಕಾರಿಯನ್ನು ಮುಂದುವರಿಸುತ್ತಾರ..?! ಕುರುಡು ಕಾಂಚಾಣ ಇಲ್ಲಿ ಕೆಲಸ ಮಾಡಿದೆಯಾ..? ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಒಂದಷ್ಟು ಅಧಿಕಾರಿಗಳು ಇದೇ ರೀತಿ ಅನಧಿಕೃತವಾಗಿ ವರ್ಗಾವಣೆಯಾಗಿ ಬಂದಿದ್ದರು ಆಗ ಇದ್ದ ಕಮಿಷನರ್ ವಿಶಾಲ್ ಅವರು ಮತ್ತೆ ಅದನ್ನು ರದ್ದುಗೊಳಿಸಿ ಕೌನ್ಸಿಲಿಂಗ್ ಮೂಲಕವೇ ಆಯ್ಕೆ ಮಾಡಿದ್ದರು.
ಒಟ್ಟಾರೆ ಈ ಪ್ರಕರಣದಲ್ಲಿ ನಿಯಮಬಾಯಿರವಾಗಿ ವರ್ಗಾವಣೆ ಆಗಿರುವ ವರ್ಗಾವಣೆ ರದ್ದಾಗಬೇಕು ನಿಜವಾದ ಆಕಾಂಕ್ಷಿಗಳಿಗೆ ನ್ಯಾಯ ಸಿಗಬೇಕು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಈ ವಿಷಯದಲ್ಲಿ ಗಮನಹರಿಸಿ ಸರಿಪಡಿಸಬೇಕು ಎನ್ನುವುದು ಪತ್ರಿಕೆಯ ಕಳಕಳಿ.
ರಘುರಾಜ್ ಹೆಚ್. ಕೆ..9449553305.