
ತೀರ್ಥಹಳ್ಳಿ : ಮಲೆನಾಡಿನಲ್ಲಿ ಆರಿದ್ರಾ ಮಳೆಯ ಆರ್ಭಟ ಹೆಚ್ಚಾಗಿದ್ದು ಇದರಿಂದ ಹಲವು ಕಡೆ ಅನಾಹುತ ಸಂಭವಿಸಿದ್ದು ತಾಲೂಕಿನ ಗುಡ್ಡೆಕೊಪ್ಪದ ಜಂಬೇತಲ್ಲೂರಿನಲ್ಲಿ ಇಂದು ಬೆಳಗ್ಗೆ ಮನೆಯೊಂದು ಕುಸಿದು ಬಿದ್ದಿದೆ.
ತಾಲೂಕಿನ ಗುಡ್ಡೆಕೊಪ್ಪ ಗ್ರಾಮ ಪಂಚಾಯತ್ ಜಂಬೇತಲ್ಲೂರು ಗ್ರಾಮದ ಮಾಲ ಹಲ್ಕಾರಿನ ಸುಶೀಲ ಕೋಮ್ ಸಂಜೀವ ಎಂಬುವರ ಮನೆ ಮಳೆಯಿಂದ ಕುಸಿದು ಬಿದ್ದಿದ್ದು ವಿಷಯ ತಿಳಿದು ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಸದಸ್ಯರು ಮತ್ತು ಪಂಚಾಯತಿಯ PDO ಹಾಗು ಕಂದಾಯ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿದರು.
ಪ್ರಕೃತಿ ವಿಕೋಪ ಪರಿಹಾರ ನಿಧಿಯಲ್ಲಿ ಬಡತನ ಕುಟುಂಬದ ಮಹಿಳೆ ಸುಶೀಲರವರಿಗೆ ನೂತನವಾಗಿ ಮನೆ ಕಟ್ಟಿಕೊಳ್ಳಲು ಪರಿಹಾರ ನೀಡಿ ಸಹಕರಿಸಬೇಕೆಂದು ಪಂಚಾಯಿತಿ ಅಧ್ಯಕ್ಷ ರಾಘವೇಂದ್ರ ಪವಾರ್ ರವರು ತಿಳಿಸಿದ್ದಾರೆ.
ಗ್ರಾಮಪಂಚಾಯಿತಿ ಅಧ್ಯಕ್ಷ ರಾಘವೇಂದ್ರ ಪವಾರ್ ಸದಸ್ಯೆ ಸೂರ್ಯ ಕಲಾ ರವಿ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಸುಂದ್ರೇಶ್ ಗ್ರಾಮ ಲೆಕ್ಕಾಧಿಕಾರಿ ಕೃಷ್ಣ ಕುಲಕರ್ಣಿ ಸಹಾಯಕ ಮಹೇಶ್ ರವರು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಮಹಜರು ಮಾಡಿ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.